ಮೈಸೂರು : ರಾಯಣ್ಣ ಪ್ರತಿಮೆ ಸ್ಥಾಪಿಸಲು ಆಗ್ರಹ

Share

ಮೈಸೂರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ನಂಜು ಮಳಿಗೆ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 223ನೇಸಂಗೊಳ್ಳಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು
ನಂತರ ಮಾತನಾಡಿದ
ಸಂಗೊಳ್ಳಿ ರಾಯನ ಬಳಗದ ಸದಸ್ಯರು ಹಾಗೂ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ
ರಾಯಣ್ಣ ಪ್ರತಿಮೆ ಸ್ಥಾಪಿಸಲು ಆಗ್ರಹ
ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರು ಪ್ರತಿಷ್ಠಾಪಿಸಿ, ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು
ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಅವರ ಪ್ರತಿಮೆ ಸ್ಥಾಪಿಸಲು ನಾಡಿನಲ್ಲಿ ಅವಕಾಶ ನೀಡದ ಸ್ಥಿತಿ ಒದಗಿದೆ. ಪೀರನವಾಡಿಯಲ್ಲಿ ಶಿಲಾನ್ಯಾಸ ಮಾಡಬೇಕಿದ್ದ ಪ್ರತಿಮೆಯನ್ನು ರಾತ್ರೋರಾತ್ರಿ ಹೊತ್ತೊಯ್ಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ಲಾಠಿ ಪ್ರಹಾರ ನಡೆದಿದೆ. ಲಾಠಿ ಪ್ರಹಾರ ನಡೆಸಿದ ಸ್ಥಳೀಯ ಆಡಳಿತ ಮತ್ತು ಪೊಲೀಸರ ನಡೆ ಖಂಡನೀಯ ,
ಗಡಿ ಭಾಗದಲ್ಲಿ ಪದೇ ಪದೇ ಇಂತ ಘಟನೆಗಳು ಮರುಕಳಿಸುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಕನ್ನಡಿಗರಿಗೆ ಹಾಗೂ ರಾಯಣ್ಣನ ಅಭಿಮಾನಿಗಳಿಗೆ ರಕ್ಷಣೆ ಒದಗಿಸಬೇಕು. ನಿರ್ಲಕ್ಷಿಸಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚ
ರಿಸಿದರು.
ನಂತರ ಮಾತನಾಡಿದ ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷರಾದ ರವಿತೇಜ
ರಾಯಣ್ಣನ ದೇಶಪ್ರೇಮ ಯುವಜನರಿಗೆ ಪ್ರೇರಣೆಯಾಗಲಿ’
‘ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಆದರ್ಶ, ತತ್ವ, ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಬೇಕು’
‘ಬ್ರಿಟೀಷರ ಕುಟಿಲ ನೀತಿಯ ವಿರುದ್ಧ ಯುವ ಸೇನೆ ಕಟ್ಟಿ ಹೋರಾಡಿ, ಪ್ರಾಣವನ್ನೇ ಬಲಿಕೊಟ್ಟ ರಾಯಣ್ಣನ ಜನ್ಮದಿನ ಆಚರಿಸುವುದು ಅವಶ್ಯಕ. ತ್ಯಾಗ, ಬಲಿದಾನಕ್ಕೆ ಮತ್ತೊಂದು ಹೆಸರೇ ರಾಯಣ್ಣ. ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು’
ಇದೇ ಸಂದರ್ಭದಲ್ಲಿ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,
ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷರಾದ ರವಿತೇಜ ,ತೀರ್ಥಕುಮಾರ್ ,ಮಂಜುನಾಥ್, ಕುರುಬರಲ್ಲಿ ಮಂಜು ,ಪ್ರೇಮ್ ಕುಮಾರ್, ಪುರುಷೋತ್ತಮ್ ,ಸಿದ್ದಪ್ಪ ,ಪಾಂಡು ,ದೇವರಾಜ್, ಸುರೇಶ್, ಕುಮಾರ್, ಹರೀಶ್ ನಾಯ್ಡು, ಕುಮಾರ,ಹಾಗೂ ಇನ್ನಿತರರು ಹಾಜರಿದ್ದರು


Share