ಮೈಸೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟ 2020

Share

ಮೈಸೂರು ಇಂದು ನಗರದ ಅರಣ್ಯ ಭವನದಲ್ಲಿ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಪೊಲೀಸ್ ಆಯುಕ್ತರು ಹುತಾತ್ಮರಿಗೆ ಹೂಗುಚ್ಚ ಸಮರ್ಪಿಸುವುದರ ಮೂಲಕ ಗೌರವವನ್ನು ಸಲ್ಲಿಸಿದರು.

ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ 1 ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ . 1730 ರ ಸೆಪ್ಟೆಂಬರ್ 11 ರಂದು ಜೋಧಪುರ್‌ನ ಮಹಾರಾಜ ಅಭಯಸಿಂಗ್‌ನ ಸೈನಿಕರು ಕೆರ್ಜಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೆರ್ಜಿ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಟೋಯಿ ಸಮುದಾಯದ 363 ಪುರುಷ , ಮಹಿಳೆ ಮತ್ತು ಮಕ್ಕಳನ್ನು ಕೊಲ್ಲಲಾಯಿತು . ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷೇಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿರುತ್ತದೆ . ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸರ್ವೋಚ್ಚ ತ್ಯಾಗವನ್ನು ಮಾಡಿದಂತಹ ಸಮರ್ಪಣಾ ಮನೋಭಾವದ ಹಲವಾರು ಆರಣ್ಯ ಅಧಿಕಾರಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚಹಸಿರಾಗಿ ರಾರಾಜಿಸುತ್ತಿವೆ . ಇವರ ಅಸಾಧಾರಣ ಪ್ರಯತ್ನಗಳು , ಧೈರ್ಯಶೀಲ ಕಾರ್ಯಗಳು ಮತ್ತು ಸರ್ವೋಚ್ಚ ತ್ಯಾಗಗಳು , ಅಪಾಯಕ್ಕೆ ಒಳಗಾದ , ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿವೆ . ಇಂತಹ ಆದರ್ಶ ವ್ಯಕ್ತಿಗಳಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ದಿವಂಗತ ಪಿ.ಶ್ರೀನಿವಾಸ್ , ಭಾ.ಆ.ಸೇ .. ಅವರು ಒಬ್ಬರು . ಕಾಡಿಗಾಗಿ ಜನನ , ಕಾಡಿಗಾಗಿ ಜೀವನ , ಕಾಡಿಗಾಗಿ ಮರಣ ಎಂಬುದನ್ನೇ ತತ್ವಗಳನ್ನಾಗಿ ಇಟ್ಟುಕೊಂಡಿದ್ದ ಕರ್ನಾಟಕ ಅರಣ್ಯ ಇಲಾಖೆಯ ವೀರ ಅಭಿಮನ್ಯು ಎಂದೇ ಕರೆಯಬಹುದಾದ ದಿವಂಗತ ಪಿ.ಶ್ರೀನಿವಾಸ್ , ಭಾ.ಅ.ಸೇ. , ರವರು ದಂತಚೋರ ಮತ್ತು ಕುಖ್ಯಾತ ಶ್ರೀಗಂಧ ಕಳ್ಳಸಾಗಾಣಿಕೆದಾರ ವೀರಪ್ಪನ್‌ನ ನಯವಂಚನೆ ಚಕ್ರವ್ಯೂಹದಲ್ಲಿ ಸಿಲುಕಿ 1991 ರ ನವೆಂಬರ್ 10 ರಂದು ವಿಧಿವಶರಾದರು . ದಿವಂಗತ ಪಿ.ಶ್ರೀನಿವಾಸ್‌ರವರ ಕಾರ್ಯದಕ್ಷತೆಯನ್ನು ಮೆಚ್ಚಿ ಭಾರತ ಸರ್ಕಾರವು ಇವರಿಗೆ “ ಕೀರ್ತಿಚಕ್ರ ” ವೆಂಬ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ . ವೀರಪ್ಪನ್‌ನ ವಂಚನೆಯಿಂದ ಹುತಾತ್ಮರಾದ ಕೊಳ್ಳೇಗಾಲದ ಅರಣ್ಯ ರಕ್ಷಕ ಬಿ.ಸಿ. ಮೋಹನಯ್ಯ ಇವರ ತ್ಯಾಗವನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ . ಶಿರಸಿಯ ಮರಗಳ್ಳರ ಕೌಲ್ಯಕ್ಕೆ ಬಲಿಯಾದ ವಲಯ ಅರಣ್ಯಾಧಿಕಾರಿ ಅರವಿಂದ್ ಹೆಗಡೆ ಇವರ ಶೌಯ್ಯ ಸ್ಮರಣೀಯ . ದಿನಾಂಕ : 03-03-2018ರಂದು ಶ್ರೀ . ಎಸ್ . ಮಣಿಕಂದನ್ , ಭಾ.ಅ.ಸೇ. ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು , ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ , ಹುಣಸೂರು ಇವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯಕ್ಕೆ ಕಾಡ್ಡಿಚ್ಚು ಸಂಭವಿಸಿದ ಸಮಯದಲ್ಲಿ ಅರಣ್ಯ ವೀಕ್ಷಣೆ ಮತ್ತು ಬೆಂಕಿ ತಡೆ ಬಗ್ಗೆ ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದಾಗ ಹಠಾತ್ ಕಾಡಾನೆ ದಾಳಿಗೆ ಸಿಲುಕಿ ಹುತಾತ್ಮರಾಗಿರುತ್ತಾರೆ . ಇವರ ಉತ್ಕೃಷ್ಟ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು ದಿವಂಗತ ಎಸ್ . ಮಣಿಕಂದನ್ ರವರಿಗೆ 2018 ರ ‘ ಎಲಿಫೆಂಟ್ ವಾರಿಯರ್ ಅವಾರ್ಡ್’ನ್ನು ದಿನಾಂಕ : 12-08-2019ರ ವಿಶ್ವ ಆನೆ ದಿನಾಚರಣೆ ದಿನದಂದು ನೀಡಿ ಗೌರವಿಸಿರುತ್ತದೆ . ಅರಣ್ಯ ಇಲಾಖೆಯಲ್ಲಿ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಲಯ ಅರಣ್ಯಾಧಿಕಾರಿ , ಉಪ ವಲಯ ಅರಣ್ಯಾಧಿಕಾರಿ , ಅರಣ್ಯರಕ್ಷಕ , ಅರಣ್ಯವೀಕ್ಷಕ / ಕಾವಲುಗಾರ , ವಾಹನಚಾಲಕ ಹಾಗೂ ನಿರ್ವಹಣೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಅನ್ವಯವಾಗುವಂತೆ ಕರ್ತವ್ಯದಲ್ಲಿರುವಾಗ ಮರಣ ಹೊಂದಿದರೆ ರೂ .30.00 ಲಕ್ಷ , ಶಾಶ್ವತ ಅಂಗವಿಕಲತೆ ಉಂಟಾದರೆ ರೂ .10.00 ಲಕ್ಷ ಮತ್ತು ಗಂಭೀರ ಸ್ವರೂಪದ ಗಾಯ ಉಂಟಾದಲ್ಲಿ 2.00 ಲಕ್ಷ ರೂಪಾಯಿಗಳ ಪರಿಹಾರ ಮೊತ್ತವನ್ನು ಮತ್ತು ವಿಶೇಷ ಗುಂಪು ಮೊತ್ತವನ್ನು ಪರಿಹಾರವಾಗಿ ನೀಡು . ಸರ್ಕಾರವು ದಿನಾಂಕ : 05.06.2020 ತಂದು ಆದೇಶಿಸಿರುತ್ತದೆ . ಕಳೆದ 54 ವರ್ಷಗಳಿಂದಲೂ ಅಮೂಲ್ಯ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮಗಳ ಬದುಕನ್ನೇ ಮುಡಿಪಾಗಿಟ್ಟು , ಕಳ್ಳಸಾಗಾಣಿಕೆದಾರರ , ಮರಗಳ್ಳರ . ದಂತಚೋರರ ಜೊತೆ ಕೆಚ್ಚೆದೆಯಿಂದ ಹೋರಾಡಿ ನೈಸರ್ಗಿಕ ಸಂಪತ್ತನ್ನು ಉಳಿಸಲು ತಮ್ಮ ಜೀವನವನ್ನೇ ನಾಡಿಗಾಗಿ ತ್ಯಾಗ ಮಾಡಿದ ಇಲಾಖೆಯ ಅಧಿಕಾರಿ / ನೌಕರರ ಸ್ಮರಣೆಗಾಗಿ ಮತ್ತು ಇವರಿಗೆ ಶ್ರದ್ದಾಂಜಲಿ ಅರ್ಪಿಸಲು ಈ ಹುತಾತ್ಮರ ದಿನಾಚರಣೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಆಚರಿಸಲಾಗುತ್ತಿದೆ . ಹೀಗೆಯೇ ತಮ್ಮ ಜೀವದ ಹಂಗನ್ನು ತೊರೆದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಇಲ್ಲಿಯವರೆಗೆ ಸುಮಾರು 50 ಅರಣ್ಯ ಅಧಿಕಾರಿ / ಸಿಬ್ಬಂದಿಗಳು ಹುತಾತ್ಮರಾಗಿದ್ದು ಇವರನ್ನು ಸ್ಮರಿಸಲು ಇಚ್ಛೆಪಡುತ್ತೇನೆ ..


Share