ಮೈಸೂರು-ಲೈವ್ ಹಿಂದಿ ಮ್ಯೂಸಿಕಲ್ ನೈಟ್ ಗಾಯನ

ಮೈಸೂರು-ಎಲ್. ಚಂದ್ರಶೇಖರ್ 52ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ದಿನಾಂಕ 18-11-2023 ರ ಶನಿವಾರದಂದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದವಿಲಾಸ ಶತಮಾನೋತ್ಸವ ಭವನದಲ್ಲಿ ಸಂಜೆ 5 ಗಂಟೆಗೆ ಲೈವ್ ಹಿಂದಿ ಮ್ಯೂಸಿಕಲ್ ನೈಟ್ ಗಾಯನ ರಸಸಂಜೆ ಕಾರ್ಯಕ್ರಮದಲ್ಲಿ ಹಳೆಯ ಹಿಂದಿಯ ಚಲನಚಿತ್ರಗೀತೆಗಳು (ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಮುಕೇಶ್, ಲತಾ ಮಂಗೇಷ್ಕರ್, ಆಶಾ ಬೋಸ್ಥೆ, ಜೆ. ಯೇಸುದಾಸ್, ಮನರ್‌ಉದಾಸ್ ಹಾಡಿರುವಂತಹ ಗೀತೆಗಳು) ಪ್ರಖ್ಯಾತಿಹೊಂದಿರುವ ಕಿ-ಬೋರ್ಡ್ ವಾದಕರಾದ, ದೀಪು ಮತ್ತು ಅಜಯ್ ಆಳ್ವ, ಗೀಟಾರ್ ವಾದಕರಾದ ಮಥಿಯಾಸ್, ರಿದಂ ವಿಭಾಗದಿಂದ ಪ್ರದೀಪ್, ಆಂಡೋ ವಿನ್ಸೆಂಟ್, ಧ್ವನಿವರ್ಧಕ ವಿಭಾಗದಿಂದ ಶ್ರೀನಾಥ್ ಮತ್ತು ಸಂಜೀವ್, – ತಬಲ ವಾದಕರಾದ – ರಘು ಮತ್ತು ಕಿರಣ್‌ರವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು . ಕಾರ್ಯಕ್ರಮದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ್ ಅವರು ಮನವಿ ಮಾಡಿದ್ದಾರೆ