ಮೈಸೂರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂವಾದ ಕಾರ್ಯಕ್ರಮ ನೇರ ಪ್ರಸಾರ

ಮೈಸೂರು. ರಾಜ್ಯದ ಬಿಜೆಪಿ ಸರ್ಕಾರ ಒಂದು ವರ್ಷದ ಸಾಧನೆ ಬಗ್ಗೆ ಜನತೆಗೆ ತಿಳಿಸುವಾಗ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಸಮಯದಲ್ಲಿ ತಿಳಿಸಿದ ಪ್ರಣಾಳಿಕೆಯಲ್ಲಿ ಎಷ್ಟು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಬೇಕಿತ್ತು, ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುಡುಗಿದರು. ಅವರು ಇಂದು ಬೆಳಗ್ಗೆ ಮೈಸೂರು ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ದಿನಕ್ಕೆ ಸವಾಲನ್ನು ಎದುರಿಸುತ್ತಾ ಬಂದಿದ್ದಾರೆ ಪ್ರವಾಹ, ಬರಗಾಲ, ಈಗ ಕರೋನಾ, ಸಮಸ್ಯೆ ಹೀಗಾಗಿ ಒಂದು ವರ್ಷದಿಂದ ಸರ್ಕಾರ ಆಡಳಿತ ಮಾಡಲಿಕ್ಕೆ ಆಗಿಲ್ಲ ಎಂದು ಅವರು ಕಿಡಿಕಾರಿದರು ಮುಗಿದಮೇಲೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.