ಮೈಸೂರು-ಶಂಕರ ಜಯಂತಿ: ಭವ್ಯ ಮೆರವಣಿಗೆ

308
Share

 

ಮೈಸೂರು: ನಗರದ ವಿದ್ಯಾರಣ್ಯಪುರಂನಲ್ಲಿರುವ ವಿಪ್ರ ಜಾಗೃತಿ ವೇದಿಕೆ ವತಿಯಿಂದ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಆದಿ ಗುರು ಶ್ರೀ ಶಂಕರಾಚಾರ್ಯರ ರಥೋತ್ಸವ ಶಂಕರಾಚಾರ್ಯರ ಭಾವಚಿತ್ರಕ್ಕೆ ಅಲಂಕೃತ ವಾಹನದಲ್ಲಿರಿಸಿ ವಿದ್ಯಾರಣ್ಯಪುರಂ ಮುಖ್ಯ ರಸ್ತೆಯಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು, ವಿಶೇಷವಾಗಿ ಮಕ್ಕಳು ಬಾಲ ಶಂಕರ ವೇಶವನ್ನು ಧರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು,
ನಾದಸ್ವರ ಹಾಗೂ ಶಂಕರಾಚಾರ್ಯ ಕೀರ್ತನೆಗಳನ್ನು ಹೇಳುತ್ತಾ ಭಜನೆ, ದೇವರ ನಾಮ, ಸಂಕೀರ್ತಿಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ನೂರಾರು ಭಕ್ಯಾದಿಗಳು ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು,
ನಂತರ ಭಕ್ತಾದಿಗಳಿಗೆ ಪ್ರಸಾದ ವಿನಯೋಗಿಸಲಾಯಿತು ಮೆರವಣಿಗೆ ಮುನ್ನ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು

ಬಳಿಕ ಮಾತನಾಡಿದ ಟಿ ಎಸ್ ಶ್ರೀವತ್ಸ ಶಂಕರಾಚಾರ್ಯರು ತಮ್ಮ ಎಂಟನೇ ವರ್ಷದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ ಸನಾತನ ಹಿಂದೂ ಸಂಸ್ಕೃತಿಯನ್ನು ಮರುಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವೇದ, ಉಪನಿಷತ್ತು, ವೇದಮಂತ್ರಗಳು, ದೇವರು ಸತ್ಯ ಎನ್ನುವುದನ್ನು ಜನರಲ್ಲಿ ಬಿಂಬಿಸಿದರು. ತಮ್ಮ ಜೀವನವನ್ನು ಧರ್ಮರಕ್ಷಣೆಗಾಗಿ ಮೀಸಲಿಟ್ಟ ಅವತಾರ ಪುರುಷ’ ಎಂದರು.

ನಂತರ ಮಾತನಾಡಿದ ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್
ಶಂಕರಾಚಾರ್ಯರ ಬದುಕನ್ನು ಸಮಚಿತ್ತದಿಂದ ಅವ ಲೋಕಿಸಿದಾಗ ಭಾರತೀಯ ಅಧ್ಯಾತ್ಮಿಕ ಪರಂಪರೆಗೆ ಅಪಾರ ಕೊಡುಗೆ ಸಲ್ಲಿಸಿ ರುವುದು ಕಂಡು ಬರುತ್ತದೆ ಎಂದರು.

ಶಾಸಕರಾದ ಟಿ ಎಸ್
ಶ್ರೀವತ್ಸ, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಮಾಜಿನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮಪ್ರಸಾದ್, ವಿಪ್ರ ಸಂಗಮ ಅಧ್ಯಕ್ಷರಾದ ಡಾಕ್ಟರ್ ಲಕ್ಷ್ಮಿ, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್,
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ವಿಪ್ರ ಜಾಗೃತಿ ವೇದಿಕೆಯ ಉಪಾಧ್ಯಕ್ಷ ಆರ್ ನಾಗರಾಜ್, ಕಾರ್ಯದರ್ಶಿ ಮುಳ್ಳೂರು ಸುರೇಶ್, ಸಹ ಕಾರ್ಯದರ್ಶಿ ಎಚ್ ಸಿ ಮುರುಗೇಶ್, ಖಜಾಂಜಿ ಎಂ ವಿ ಮಂಜುನಾಥ್, ಸುಚಿಂದ್ರ ತೀರ್ಥ, ಶ್ರೀಕಾಂತ್ ಕಶ್ಯಪ್, ಹಾಗೂ ಇನ್ನಿತರ ಮುಖಂಡರು ಆಗಮಿಸಿದರು


Share