ಜೆ.ಪಿ.ನಗರ D ಬ್ಲಾಕ್ ,ರೈಲ್ವೆ ಟ್ರಾಕ್,ನ ಸುತ್ತಮುತ್ತಲಿನ ಭಾಗದಲ್ಲಿ ಅಹವಾಲು ಸ್ವೀಕಾರ…
ಟಿ.ಎಸ್.ಶ್ರೀ ವತ್ಸ ಶಾಸಕರು
ಕವಿತಾ ಬೇಕರಿಯ ಪಕ್ಕದಲ್ಲಿ ಟವರ್ ಇದು ಟವರ್ ನಿಂದ ಈ ಸುತ್ತಮುತ್ತಲಾಗದ ಜನರಿಗೆ ಸಮಸ್ಯೆ ಆಗುತ್ತಿರುತ್ತದೆ ಟವರ್ ಇರುವ ಕಾರಣ ಈ ಭಾಗದಲ್ಲಿ ಅತಿ ಹೆಚ್ಚು ಕೋತಿಗಳು ಬರುತ್ತಿರುತ್ತದೆ ಹಾಗೂ ಎಲೆಕ್ಟ್ರಿಕ್ ಪೋಲಿನ ಮೇಲೆ ಕರೆಂಟ್ ವೈರ್ ಹಾಗೂ ಕೇಬಲ್ ವೈರ್ ಗಳು ಅತಿ ಹೆಚ್ಚಿದ್ದು ಯಾವತ್ತೂ ಅನಾಹುತ ಅನುಭವಿಸಬಹುದು ಅನ್ನೋ ಕಾರಣದಿಂದ ದಯಮಾಡಿ ಈ ಟವರ್ ನನ್ನು ಬಿಎಸ್ಎನ್ಎಲ್ ರವರ ಸ್ವಂತ ಜಾಗದಲ್ಲಿ ಅಳವಡಿಸಲು ಆದೇಶ ಮಾಡಬೇಕಾಗಿ ಕೋರಿದರು..
ಪಕ್ಕದಲ್ಲಿರುವ ಜೆ ಎಸ್ ಎಸ್ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನುಚಿತವಾಗಿ ಸುತ್ತಮುತ್ತಲು ವರ್ತಿಸುತ್ತಾರೆ ಹಾಗೂ ಈ ಭಾಗದಲ್ಲಿ ಅತಿ ಹೆಚ್ಚು ಟು ವೀಲರ್ ರೈಡಿಂಗ್ ಗಳು ನಡೆಯುತ್ತಿರುತ್ತದೆ ದಯಮಾಡಿ ಬೆಳಿಗ್ಗೆ 9:00 ರಿಂದ 10 ಗಂಟೆಯವರೆಗೂ ಸಂಜೆ 4 ರಿಂದ 5 ಗಂಟೆಯವರೆಗೂ ಪೋಲಿಸ್ ನವರ ಗಸ್ತು ಹಾಕಿಸಿ ಕೊಡಬೇಕಾಗಿ ಮನವಿ ಮಾಡಿದರು..
ಸಂಬಂಧ ಪಟ್ಟ ಪೋಲಿಸ್ ಅಧಿಕಾರಿಗೆ ಆದೇಶಮಾಡಿ ಕಡ್ಡಾಯವಾಗಿ ಗಸ್ತು ನಡೆಸಲು ಸೂಚಿಸಿದರು..
ರಸ್ತೆ ಯ ಇಕ್ಕೆಲ ಅಕ್ಕ. ಪಕ್ಕದದಲ್ಲಿರುವ ಮರಗಳು ತುಂಬಾ ಹಳೆಯದಾಗಿರುತ್ತದೆ ಈ ಮರವು ರಸ್ತೆಗೆ ವಾಲಿದ್ದು ಅತಿ ಭೀಕರ ಮಳೆ ಅಥವಾ ಗಾಳಿ ಬಂದಂತ ಸಂದರ್ಭದಲ್ಲಿ ಮನೆಯ ಗೋಡೆಗಳ ಮೇಲೆ ಬಿಳುವ ಸಂಭವವಿದೆ ಅರಣ್ಯ ಇಲಾಖೆಯವರಿಗೆ ತಾವು ನಿರ್ದೇಶನ ನೀಡಿ ಈ ಮರಗಳನ್ನು ತೆಗೆಸಿಕೊಡಬೇಕಾಗಿ ಮನವಿ ಮಾಡಿದರು..ಕೂಡಲೇ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ತೆಗಸಲು ಕ್ರಮಕೈಗೊಳ್ಳಲಾಯಿತು.
ಈ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯ ರಾದ ಶಾರದಮ್ಮ ಈಶ್ವರ್, ದೇವರಾಜೇ ಗೌಡ,ನಾಗರಾಜು ಟಿ.ವಿ.ಎಸ್.ಅಕ್ಷಯ್,ದೀಪು, ಶ್ರೀನಿವಾಸ್,ಜೋಗಿ ಮಂಜು, ಪ್ರದೀಪ್, ಕಿಶೋರ್, ಶಿವರಾಜ್ ಇದ್ದರು