ಮೈಸೂರು ಸಂಜೆ ವೇಳೆಗೆ 22ಕ್ಕೂ ಹೆಚ್ಚು ಹೊಸ ಪ್ರಕರಣ? ಕೆಲವು ರಸ್ತೆಗಳು ಸೀಲ್ ಡೌನ್ ಜನತೆ ಆತಂಕದಲ್ಲಿ

ಮೈಸೂರು,
ಇಂದು ಸಂಜೆ ವೇಳೆಗೆ ಮೈಸೂರು ನಗರದಲ್ಲಿ 22ಕ್ಕೂ ಹೆಚ್ಚು ಕೋರೋನಸೋಂಕು ದೃಢ ವಾಗುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ನಗರದ ದೇವರಾಜ ಮೊಹಲ್ಲಾ ಶಿವರಾಮಪೇಟೆ ಯ ರಾಜಕುಮಾರ್ ಟಾಕೀಸ್ ಬಳಿ ಇರುವ ಕೊತ್ವಾಲ್ ರಾಮಯ್ಯ ರಸ್ತೆ ಸಿದ್ಧಾರ್ಥ ನಗರದ ಬಳಿ ಇರುವ ರಾಜಕುಮಾರ್ ರಸ್ತೆ ಮತ್ತು ಶ್ರೀರಾಂಪುರ ಇರುವ ಗಣಪತಿ ದೇವಸ್ಥಾನದ ಪಕ್ಕದ ರಸ್ತೆ ಸೀಲ್ ಡೌನ್ ಮಾಡಲಾಗದೆ ಎಂದು ಹೇಳಲಾಗಿದೆ .
ಶಿವರಾಂ ಪೇಟೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ವ್ಯಕ್ತಿ ಬೆಂಗಳೂರಿಗೆ ಮದುವೆಗೆ ಹೋಗಿ ಬಂದಿದ್ದರು ಎಂದು ಹೇಳಲಾಗಿದೆ.
ಸದರಿ ಮನೆಯಲ್ಲಿ ಸುಮಾರು 20,,ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ ಎಂದು ಹೇಳಲಾಗಿದ್ದು ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ ಶ್ರೀರಾಂಪುರ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಪತ್ತೆಯಾಗಿರುವ ವ್ಯಕ್ತಿ ತಮಿಳುನಾಡಿಗೆ ಹೋಗಿ ಬಂದವರೆಂದು ಹೇಳಲಾಗಿದೆ.
ಮೈಸೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಮೊಹಲ್ಲಾ ,ಬಡಾವಣೆಯ ರಸ್ತೆಗಳನ್ನು ಸೀಲ್ ಮಾಡುತ್ತಿರುವುದು ಕಂಡುಬಂದಿದ್ದು ನಗರದ ಜನತೆ ಆತಂಕಕ್ಕೀಡಾಗಿದ್ದಾರೆ .

ಶ್ರೀರಾಂಪುರ ಬಡಾವಣೆಯಲ್ಲಿ ವಾಸವಾಗಿರುವ ರಸ್ತೆಯ ನಿವಾಸಿಗಳ ವಾಟ್ಸಪ್ ಗುಂಪು ರಚಿಸಿ, ಅಗತ್ಯವಸ್ತುಗಳನ್ನು ವಾಟ್ಸಪ್ ಮೂಲಕ ಮಾಹಿತಿ ಪಡೆದು, ನಿವಾಸಿಗಳಿಗೆ ಪೂರೈಸುವ ಕ್ರಮವನ್ನು ನಗರಪಾಲಿಕೆ ತೆಗೆದುಕೊಂಡಿದೆ ಎಂದು ಹೇಳಲಾಗಿದೆ .ಶಿವರಾಮಪೇಟೆ ರಸ್ತೆಯಲ್ಲಿ ಬ್ಯಾರಿಕೇಡ್ ಬಳಿ ಅಗತ್ಯವಸ್ತುಗಳನ್ನು ರಸ್ತೆಯ ನಿವಾಸಿಗಳಿಗೆ ನೀಡುತ್ತಿದ್ದ ದೃಶ್ಯ ಕಂಡುಬಂದಿತು.