ಮೈಸೂರು; ಸರಗಳ್ಳರ ಬಂಧನ

Share

ಮೈಸೂರು ಗ್ರಾಮಾಂತರ ವೃತ್ತ ವ್ಯಾಪ್ತಿಯ ದಕ್ಷಿಣ ಪೊಲೀಸ್ ಠಾಣೆ, ಜಯಪುರ ಪೊಲೀಸ್ ಠಾಣೆ ಮತ್ತು ವರುಣಾ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಐದು ಸರಗಳ್ಳತನ ಮಾಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೈಸೂರಿನ ಆರ್.ಎಸ್. ನಾಯ್ಡು ನಗರದ ಸನ್ನಿ ಡೊನಾಲ್ಡ್ ಬಿನ್‌ ಡೇವಿಡ್ ರಾಜಶೇಖರ್ ಮತ್ತು ಹಿನಕಲ್ ಗ್ರಾಮದ ಕಿರಣ@ಬಾಂಡ್ ಬಿನ್‌ ಲೇ. ಪ್ರಕಾಶ್ ಎಂಬ ಆರೋಪಿಗಳನ್ನು ಬಂಧಿಸಿದ ಗ್ರಾಮಾಂತರ ವೃತ್ತ ಸಿಪಿಐ ಜೀವನ್‌ ಮತ್ತು ತಂಡ. ಸದರಿ ಆರೋಪಿತರುಗಳಿಂದ ಐದು ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕನ್ನು ವಶಪಡಿಸಿ ಕೊಳ್ಳಲಾಗಿದೆ. ಗ್ರಾಮಾಂತರ ಡಿಎಸ್ಪಿ ಶ್ರೀ.ಸುಮಿತ್ ,ಸಿಪಿಐ ಶ್ರೀ.ಜೀವನ್ ,ಪಿಎಸ್ಐ ಗಳಾದ ಶ್ರೀ.ವನರಾಜು, ಶ್ರೀ. ಮೋಹನ್ ಕುಮಾರ್,ಪ್ರೋ.ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ, ಸಿಬ್ಬಂದಿಗಳಾದ ಜಗದೀಶ್ ಅಶೋಕ್, ಸತೀಶ್, ರವಿ, ತಿಮ್ಮಯ್ಯ, ನಂಜುಂಡಸ್ವಾಮಿ, ಪ್ರಸನ್ನಕುಮಾರ್, ಮೋಹನ್ ,ಗಿರೀಶ್ , ಅರುಣೇಶ್, ರಾಘವೇಂದ್ರ ರವರುಗಳ‌ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್.ಶಿವಕುಮಾರ್ ರವರು ಶ್ಲಾಘಿಸಿರುತ್ತಾರೆ.


Share