ಮೈಸೂರು- ಸಾಮಾನ್ಯ ವೀಕ್ಷಕರ ನೇಮಕ

Share

 

ಮೈಸೂರು,2023 ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಯು ಅತ್ಯಂತ ಪಾರದರ್ಶಕತೆಯಿಂದ ಹಾಗೂ ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ ಕೇಂದ್ರ ಚುನಾವಣಾ ಆಯೋಗವು ಸಾಮಾನ್ಯ ವೀಕ್ಷಕರನ್ನು (General Observer) ನೇಮಕ ಮಾಡಿದ್ದಾರೆ,
216-ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಮತ್ತು 217-ಚಾಮರಾಜ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಹಿರಿಯ ಅಧಿಕಾರಿಯಾದ ಶ್ರೀ ಧೀರಜ್ ಗುಪ್ತಾ, ಐ.ಎ.ಎಸ್ ರವರನ್ನು ನೇಮಕ ಮಾಡಲಾಗಿದೆ,
ಸದರಿ ಅಧಿಕಾರಿಯವರು ಚುನಾವಣಾ ಪ್ರಕ್ರಿಯ ಮುಗಿಯುವವರೆಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ದಿನ ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಲಭ್ಯವಾಗಲಿದ್ದು, ಸದರಿ ಎರಡೂ ವಿದಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನ ಅಥವಾ ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಖುದ್ದು ಹಾಜರಾಗಿ ಅಥವಾ ದೂರವಾಣಿ ಮುಖಾಂತರ ಚುನಾವಣಾ ವೀಕ್ಷಕರಿಗೆ ದೂರು ಸಲ್ಲಿಸಬಹುದೆಂದು ಈ ಮೂಲಕ ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ
 ಚುನಾವಣಾ ವೀಕ್ಷಕರ ದೂರವಾಣಿ ಸಂಖ್ಯೆ : 7411509284

Share