ಮೈಸೂರು ಹಾಪ್‍ಕಾಮ್ಸ್: ನೋಂದಾಯಿಸಿದರೆ. ಮಾತ್ರತಾಜಾ ಹಣ್ಣು, ತರಕಾರಿ.

Share

ಹಾಪ್‍ಕಾಮ್ಸ್: ನೋಂದಾಯಿಸಿದ್ದಲ್ಲಿ ಮಾತ್ರ ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿ ಸೇವೆ ಲಭ್ಯ
ಮೈಸೂರು.:- ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಆನ್‍ಲೈನ್ ಮೂಲಕ ಮನೆಬಾಗಿಲಿಗೆ ರೈತರಿಂದ ಖರೀದಿಸಿದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ನಿಗಧಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜು ಮಾಡಲಾಗುತ್ತಿದ್ದು, ಈ ಸೇವೆ ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಿದೆ.
ಹಣ್ಣು ಹಾಗೂ ತರಕಾರಿ, ಸೊಪ್ಪು ಹಾಗೂ ಇತರೆ ಸಾಮಾಗ್ರಿಗಳಿಗೆ ದರವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿ ಶುಲ್ಕ ಪಾವತಿಸಬಹುದು ಅಥವಾ ಹಣ್ಣು, ತರಕಾರಿ ಪಡೆದ ನಂತರ ಪಾವತಿಸಬಹುದಾಗಿರುತ್ತದೆ.
ಗ್ರಾಹಕರು ‘Hopcoms online’ ಮೊಬೈಲ್ ಆ್ಯಪ್ ಮೂಲಕ ಈ ಸೇವೆ ಪಡೆಯಬಹುದಾಗಿದೆ. ಈವರೆಗೂ ನಗರದಲ್ಲಿ 1,000 ಕ್ಕೂ ಅಧಿಕ ಮಂದಿ ಆನ್‍ಲೈನ್‍ನಲ್ಲಿ ನೊಂದಾಯಿಸಿಕೊಂಡಿರುತ್ತಾರೆ.
ಗ್ರಾಹಕರ ಬೇಡಿಕೆ ಮೇರೆಗೆ ವಿವಿಧ ಬಗೆಯ ಸೊಪ್ಪು ಮತ್ತು ಡ್ರೈ ಫ್ರೂಟ್ಸ್, ತೆಂಗಿನಕಾಯಿ, ಮೊಟ್ಟೆ, ಸಾವಯಾವ ಬೆಲ್ಲ, ಬೆಲ್ಲದ ಪುಡಿ, ಜೇನುತುಪ್ಪ, ವಿವಿಧ ಬಗೆಯ ಹಣ್ಣಿನ ಸಸಿಗಳು, ಹೂಗಳನ್ನು ತಲುಪಿಸಲಾಗುತ್ತಿದೆ. ಈ ವಿನೂತನ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಮೊ.ಸಂ. 8277814143 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಹಾಪ್‍ಕಾಮ್ಸ್‍ನ ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share