ಮೈಸೂರು, ಹುತಾತ್ಮರಿಗೆ ಶ್ರದ್ಧಾಂಜಲಿ

392
Share

ಮೈಸೂರಿನ ಪ್ರಜ್ಞಾವಂತ ನಾಗರೀಕ ವೇದಿಕೆ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಮೇಣದಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ಕರ್ನಲ್ ಸಂತೋಷ್ ಬಾಬು ಬಿಹಾರ್ ರೆಜಿಮೆಂಟ್,ಹವಾಲ್ದಾರ್ ಪಳನಿ ಸ್ವಾಮಿ ರೆಜಿಮೆಂಟ್ ತಮಿಳುನಾಡು ಹಾಗೂ ಸಿಪಾಯಿ ಓಜಾ
ಶ್ರದ್ಧಾಂಜಲಿ ಸಂತಾಪ ಸಲ್ಲಿಸಲಾಯಿತು.
ನಂತರ ಮಾತನಾಡಿದ ನಗರಪಾಲಿಕೆ ಸದಸ್ಯರಾದ ಮಾವಿ.ರಾಂಪ್ರಸಾದ್
ಇಂದು ಭಾರತ-ಚೀನಾ ಗಡಿಯಲ್ಲಿ ಮೂವರು ಭಾರತೀಯ ಯೋಧರನ್ನು ಕುತಂತ್ರದಿಂದ ಕೊಲೆ ಮಾಡಿರುವ ಪಾಪಿ ಚೀನಾ ದೇಶದ ದುಷ್ಕೃತ್ಯವನ್ನು ತೀವ್ರತರವಾಗಿ ಖಂಡಿಸಬೇಕು.
ಚೀನಾದೇಶವೂ ಸಹಾ ಇತರೇ ಶತೃ ದೇಶಗಳಂತೆ ಕಾಲ್ಕೆರೆದು ಬರುತ್ತಿರುವುದು ಅದರ ನೈತಿಕ ದೀವಾಳೀ ತನಕ್ಕೆ ಸಾಕ್ಷಿಯಾಗಿದೆ.
ಭಾರತವು ಶಾಂತಿ ಬಯಸುವ ದೇಶವಾಗಿದ್ದು ಇಡೀ ವಿಶ್ವಕ್ಕೇ ಮಾದರಿಯಾಗಿದೆ ಆದರೆ ಭಾರತದ ತಾಳ್ಮೆ ಪರೀಕ್ಷಿಸುವ ಮೂಲಕ ಚೀನಾ ಕಾಲ್ಕೆರೆಯುತ್ತಿದೆ.
ಸ್ವಾಭಿಮಾನಿ ಭಾರತೀಯರು ಚೀನಾ ಉತ್ಪನ್ನ ಗಳನ್ನು ಮತ್ತು ಮೊಬೈಲ್ ಆಪ್ ಗಳನ್ನು ಈ ಕೂಡಲೇ ಬಹಿಷ್ಕರಿಸಬೇಕು ಚೀನಾ ದೇಶಕ್ಕೆ ಸಾವಿರಾರು ಕೋಟಿ ರೂ.ಗಳು ವ್ಯವಹಾರ ನಡೆಸುತ್ತಿದ್ದು ನಾವುಗಳು ವ್ಯಾವಹಾರಿಕವಾಗಿ ಮಟ್ಟಹಾಕಬೇಕು ಎಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರ ಮೊಬೈಲ್ ಗಳಿಂದ ಸ್ವಯಂಪ್ರೇರಿತರಾಗಿ ಚೀನಾ ಆಪ್ ಗಳನ್ನು ಡಿಲೀಟ್ ಮಾಡಿಸಲಾಯಿತು.
ಪ್ರಜ್ಞಾವಂತ ನಾಗರೀಕ ವೇದಿಕೆಯ ಅಧ್ಯಕ್ಷರಾದ ಕಡಕೊಳ ಜಗದೀಶ್,ಪದಾಧಿಕಾರಿಗಳಾದ ಎಂಡಿ.ಪಾರ್ಥಸಾರತಿ,ಮಾಜಿ ನಗರ ಪಾಲಿಕಾ ಸದಸ್ಯರಾದ ಜಯಶಂಕರ್ ಸ್ವಾಮಿ, ಅಪೂರ್ವಸುರೇಶ್, ಜಯಸಿಂಹ ಶ್ರೀಧರ್,ವಿಕ್ರಮ್ ಅಯ್ಯಂಗಾರ್,ರಾಕೇಶ್, ಗಣೇಶ್,ಬಸವರಾಜ್ ಬಸಪ್ಪ, ಸುಚೀಂದ್ರ,ಕಿರಣ್.ಎಂ
ಬಿಜೆಪಿ ನಾಯಕರಾದ ಲಕ್ಷ್ಮೀ ದೇವಿ,ರಾಕೇಶ್ ಭಟ್,ಲೋಹಿತ್,ಅರುಣ್, ನವೀನ್ ಶೆಟ್ಟಿ,ಚೇತನ್,ಗಿರೀಶ್,ಪ್ರದೀಪ್, ಗ್ಯಾರೇಜ್ ಶಿವು ,ಶ್ರೀಕಾಂತ್ ಕಶ್ಯಪ್, ಮುಂತಾದವರು ಹಾಜರಿದ್ದರು.


Share