*ಬಾಂಧವ್ಯ ಬೆಸೆಯುವ ಪಂಚಮಿ ಹಬ್ಬ:*
ಮೈಸೂರು: ನಾಗರ ಪಂಚಮಿ ಹಬ್ಬವು ಧಾರ್ಮಿಕ ನಂಬಿಕೆಯ ಜೊತೆಗೆ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ, ನಾಗದೇವತೆ ಆರಾಧನೆಯೊಂದಿಗೆ ನಿಸರ್ಗದ ಪ್ರಾಣಿ , ಪಕ್ಷಿ ಸಂಕುಲವನ್ನು ಆರಾಧಿಸುವ ಮೂಲಕ ಮಾನವನು ಪರಿಸರವನ್ನು ಪ್ರೀತಿಸಿ ಪೂಜಿಸುವ ವೈಜ್ಞಾನಿಕ ಬದ್ಧತೆಯನ್ನು ನಮ್ಮ ಪೂರ್ವಜರು ಈ ಹಬ್ಬ ಆಚರಿಸುವ ಮೂಲಕ ಅರಿತುಕೊಂಡಿದ್ದರು ಎಂದು ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್ ಹೇಳಿದರು
ನಗರದ ದಿವಾನ್ಸ್ ರಸ್ತೆಯಲ್ಲಿರುವ ಪುರಾತನ ದೇವಾಲಯ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ನಾಗದೇವರಿಗೆ ಹಾಲು ಎರೆದರು ತಮ್ಮ ಮನೆದೇವರು,ಇಷ್ಟ ದೇವರು, ಹಾಗೂ ತನ್ನ ತಂದೆ ತಾಯರು ಗುರು ಅಣ್ಣ ತಮ್ಮ ಅಕ್ಕತಂಗಿ ಅತ್ತೆ ಮಾವ ಗೆಳೆಯ ಗೆಳತಿಯರ ಗುರು ಹಿರಿಯರ ಹೆಸರುಗಳನ್ನು ಹೇಳಿಕೊಂಡು ಹಾಲನ್ನು ನಾಗದೇವರ ಪ್ರತಿಮೆಗೆ ಹಾಲು ಎರೆದರು
ಬಲಿಕ ಮಾಧ್ಯಮ ಜೊತೆ ಮಾತನಾಡಿದ ಅವರು ಇಂದು ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯ ಮನೋಭಾವನೆಗಳನ್ನು ತೊಡೆದುಹಾಕಿ ಭಾರತೀಯರು ನಾವೆಲ್ಲರೂ ಒಂದೆ ಎಂಬ ವಿಶ್ವಕುಟುಂಬ ಭಾವವನ್ನು ನಮ್ಮ ಹಬ್ಬಗಳು ಪ್ರಚೂರಪಡಿಸುತ್ತವೆ’ ಎಂದರು.
ಇದೆ ಸಂದರ್ಭದಲ್ಲಿ ಗಂಗಮ್ಮ, ಸಚಿನ್, ಸುಷ್ಮಾ, ಚರಣ್, ಹಾಗೂ ಭಕ್ತಾದಿಗಳು ಒಟ್ಟುಗೂಡಿ ನಾಗರಪಂಚಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು