ಮೈಸೂರು: ಹೊಯ್ಸಳ ಕರ್ನಾಟಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ.

Share

ಮೈಸೂರು ಹೊಯ್ಸಳ ಕರ್ನಾಟಕ ಸಂಘದ ಕೆ ಆರ್ ವನಂನಲ್ಲಿ 74 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು,ಸಂಘದ ಅಧ್ಯಕ್ಷರಾದ ಶ್ರೀ ಕೆ ಆರ್‌ ಸತ್ಯನಾರಾಯಣ ರವರು ಧ್ವಜಾರೋಹಣ ನೆರವೇರಿಸಿ ಪುಷ್ಪಾರ್ಚನೆ ಮಾಡಿ ಎಲ್ಲರಿಗೂ ಸಿಹಿ ವಿತರಿಸಿ ಮುಂದಿನ ವರ್ಷ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಮುಗಿಯುವ ಹಂಬಲ ವ್ಯಕ್ತ ಪಡಿಸಿ ಸಂಘದ ಎಲ್ಲಾ ಸದಸ್ಯರ ಒಳಗೊಂಡು ಧ್ವಜಾರೋಹಣ ಮಾಡೋಣ ಎಂದು ಹೇಳಿದರು. ಅಲ್ಲದೇ ಈ ಸಂದರ್ಭದಲ್ಲಿ ಇಡೀ ಪ್ರಪಂಚವನ್ನೇ ಕಾಡುತ್ತಿರುವ ಕೋರೋನಾ ವೈರಸ್ ವಿರುದ್ದ ಪ್ರತಿಯೊಬ್ಬರೂ ಹೋರಾಡಿ, ವೈರಸ್ ಮುಕ್ತ ಸ್ವಾತಂತ್ರ್ಯ ಪಡೆಯಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹೆಚ್ ಎಸ್ ಶಂಕರ ನಾರಾಯಣ, ಕಾರ್ಯದರ್ಶಿಗಳಾದ ವಿ ಹರೀಶ್,ಸಂಚಾಲಕರಾದ ಎಸ್ ರಂಗನಾಥ, ಮಾಜಿ ಅಧ್ಯಕ್ಷರಾದ ಪಿ ವಿ ಭಾರದ್ವಾಜ್, ನಿರ್ದೇಶಕಿಯರಾದ ಶ್ರೀಮತಿ ಅನುಪಮ, ಸಂಧ್ಯಾ, ವಿಜಯ ಪ್ರಸಾದ್,ಕಟ್ಟಡ ಸಮಿತಿಯ ಇಂಜಿನಿಯರ್ ಆದ ರಾಮಪ್ರಸಾದ್ ಸಂಘದ ಮ್ಯಾನೇಜರ್‌ ಆದ ಕುಮಾರ್ ಸ್ವಾಮಿ ಹಾಗೂ ಮುಂತಾದವರು ಹಾಜರಿದ್ದರು.


Share