ಮೈಸೂರು. 16 ಕೋಟಿ ಮೌಲ್ಯದ ನಿವೇಶನ ವಶಪಡೆದ ಮುಡಾ

Share

16 ಕೋಟಿ ಮೌಲ್ಯದ ನಿವೇಶನ ವಶಪಡೆದ ಮುಡಾ
ಮೈಸೂರು.ಸೆಪ್ಟೆಂಬರ್.10.(ಕರ್ನಾಟಕ ವಾರ್ತೆ):- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಾತಗಳ್ಳಿಯ ಸರ್ವೆ ನಂ. 68/1,2,3 ಪ್ರದೇಶದಲ್ಲಿ 15 ಕೋಟಿ ಮೌಲ್ಯದ ಸುಮಾರು 3 ಎಕರೆ 27 ಗುಂಟೆ ಭೂ ಪ್ರದೇಶ ಹಾಗೂ ಕುವೆಂಪುನಗರ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಸುಮಾರು 1 ಕೋಟಿ ರೂ. ಮೌಲ್ಯದ 3 ನಿವೇಶನಗಳನ್ನು ವಶಕ್ಕೆ ಪಡೆದುಕೊಂಡಿದೆ.
ಸಾತಗಳ್ಳಿ ಸರ್ವೆ ನಂ 68/1,2,3 ಜಮೀನುಗಳನ್ನು ಪ್ರಾಧಿಕಾರವು ಪರಸ್ಪರ ಒಪ್ಪಂದದ ಮೂಲಕ ಭೂ ಸ್ವಾಧೀನ ಪಡಿಸಿಕೊಂಡು ಸಂಬಂಧಪಟ್ಟ ಭೂ ಮಾಲೀಕರಿಗೆ ಪರಿಹಾರ ಸಹ ಪಾವತಿಸಲಾಗಿರುತ್ತದೆ.
ಕುವೆಂಪುನಗರ ಬಡಾವಣೆ ಪಡುವಣ ರಸ್ತೆ ಹತ್ತಿರ 40×60 ಅಡಿ ಅಳತೆಯ 3 ನಿವೇಶನಗಳನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಒಂದು ನಿವೇಶನದಲ್ಲಿ ಶೆಡ್ಡು ನಿರ್ಮಿಸಿಕೊಂಡು, ಎರಡು ನಿವೇಶನದಲ್ಲಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಇದರ ಬೆಲೆ ಸುಮಾರು 1 ಕೋಟಿ ರೂ. ಆಗಿರುತ್ತದೆ. ಇವುಗಳನ್ನು ಮುಡಾ ಆಯುಕ್ತರ ನಿರ್ದೇಶನದಂತೆ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ತೆರವು ಕಾರ್ಯಾಚರಣೆ ವೇಳೆ ವಲಯ ಅಧಿಕಾರಿ ನಾಗೇಶ್, ನಟೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿರುತ್ತಾರೆ ಎಂದು ಮುಡಾ ಆಯುಕ್ತರಾದ ಡಾ. ನಟೇಶ್ ಡಿ.ಬಿ. ಆವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Share