ಮೈಸೂರು, 25,ರೂಗೆ ಪೆಟ್ರೋಲ್ ನೀಡಲು ಸಜ್ಜು

ಮೈಸೂರು,
ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ ಆರ್ ಕ್ಷೇತ್ರದ ಮಾಜಿ ಶಾಸಕರು ಚಿಕ್ಕಮ್ಮನಿಕೆತನ ಆವರಣದಲ್ಲಿರುವ ಪೆಟ್ರೋಲ್ ಬಂಕಿನಲ್ಲಿ ಒಂದು ಲೀಟರ್ ಗೆ, 25 ರೂ, ನಂತೆ ಸಾರ್ವಜನಿಕರಿಗೆ ವಿನೂತನವಾಗಿ ಪ್ರತಿಭಟನೆಗೆ ಮುಂದಾದರು . ಪೆಟ್ರೋಲ್ ಹಾಕುವ ಯಂತ್ರವನ್ನು ತಾತ್ಕಾಲಿಕವಾಗಿ ಚತ್ರ ಮುಂದೆ ಇಟ್ಟು ಅದರ ಮೂಲಕ ಪೆಟ್ರೋಲ್ ಹಾಕುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಇಂದಿನ ಪ್ರತಿಭಟನೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾಗವಹಿಸುವ ಸಾಧ್ಯತೆ ಇದೆ ಎಂದು ಕೆಆರ್ ಕ್ಷೇತ್ರದ ಮಾಜಿ ಶಾಸಕ ಸೋಮಶೇಖರ್ ಅವರು ತಿಳಿಸಿದ್ದಾರೆ.