ಮೈಸೂರ್ ಪತ್ರಿಕೆ ಸಂಪಾದಕೀಯ

Share

ಲಾಕ್ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ದೇವಾಲಯವನ್ನು ತೆರೆಯಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿ ಹಾಸ್ಯಾಸ್ಪದ ಮತ್ತು ಮೂರ್ಖರು ಸೇರಿ ಅಥವಾ ಮುಟ್ಟಾಳರ ಮಾತು ಕೇಳಿ ಮಾರ್ಗಸೂಚಿ ರಚಿಸಿದಂತೆ ಇದೆ. ಧಾರ್ಮಿಕ ವಿಷಯದಲ್ಲಿ ಕೇಂದ್ರ ಸರ್ಕಾರ ಪ್ರಕಟಿಸುವ ಮುನ್ನ ಯೋಚಿಸಬೇಕಿತ್ತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ರಾಜಕೀಯ ವ್ಯಕ್ತಿಗಳು ಅಥವಾ ಅಧಿಕಾರಿಗಳ ಅಣತಿಯಂತೆ ನಡೆಸುವ ಹಾಗೆ ಅಲ್ಲ ಎಂಬ ಪರಿಜ್ಞಾನವೇ ಇಲ್ಲ ಎಂದು ನೇರವಾಗಿ ಹೇಳಬಹುದಾಗಿದೆ ಏಕೆಂದರೆ ಹಿಂದೂ ದೇವಾಲಯದ ಪೂಜೆ ಇತ್ಯಾದಿ ಆಗಮ ಶಾಸ್ತ್ರ ಹೇಳುವ ರೀತಿಯಲ್ಲಿ ನಡೆಯುತ್ತದೆ ಎಂಬುದು ಮುಜರಾಯಿ ಇಲಾಖೆಯವರಿಗೆ ತಿಳಿದಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.ದೇವಾಲಯಗಳನ್ನು ತೆರೆಯಲು ಮಾರ್ಗಸೂಚಿ ಬಿಡುಗಡೆ -ಕೇಂದ್ರ ಸರ್ಕಾರವು ಎಲ್ಲಾ ವರ್ಗದ ಧಾರ್ಮಿಕ ಕೇಂದ್ರಗಳಾದ ದೇವಾಲಯ ಚರ್ಚ್ ಮಸೀದಿಗಳನ್ನು ಜೂನ್ 8 – 2020 ರಿಂದ ತೆರೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. -ಈ ಕೇಂದ್ರಗಳಲ್ಲಿ ಮಾಸ್ಕ್ ಧಾರಣೆ ಸಾಮಾಜಿಕ ಅಂತರ (ಕನಿಷ್ಠ ಆರು ಅಡಿ) ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಿದೆ. ಪ್ರಾರ್ಥನಾ ಮಂದಿರದ ಒಳಗಡೆ ಧಾರ್ಮಿಕ ಸಭೆಗಳನ್ನು ನಡೆಸುವಂತಿಲ್ಲ, ಗುಂಪು ಸೇರಿಸಿ ಭಜನೆ ಮಾಡುವಂತಿಲ್ಲ. ಗೋಡೆ ದೇವರ ವಿಗ್ರಹ ಪವಿತ್ರ ಗ್ರಂಥಗಳನ್ನು ಮುಟ್ಟುವಂತಿಲ್ಲ. ರೋಗ ಲಕ್ಷಣಗಳು ಕಂಡು ಬಂದವರಿಗೆ ಪ್ರಾರ್ಥನಾ ಮಂದಿರದ ಒಳಗೆ ಪ್ರವೇಶ ನಿರ್ಬಂಧಿಸಬೇಕು . ಸಾಧ್ಯವಾದರೆ ಭಕ್ತರು ಒಳಗೆ ಬರುವ ಹೊರಗೆ ಹೋಗುವುದಕ್ಕೆ ಪ್ರತ್ಯೇಕ ದ್ವಾರಗಳನ್ನು ಉಪಯೋಗಿಸಬೇಕು. ಬಾಕ್ಸ್ ರಚನೆಗಳನ್ನು ಮಾಡಿ ಭಕ್ತರು ಅದರಲ್ಲಿ ನಿಲ್ಲಬೇಕು ಎಂಬ ನಿಯಮವನ್ನು ಮಾಡಬೇಕು. ಧ್ವನಿವರ್ಧಕಗಳ ಮೂಲಕ ಆಗಿಂದಾಗ್ಗೆ ಕೊರೋನ ಬಗ್ಗೆ ಎಚ್ಚರಿಸುತ್ತಿರಬೇಕು. ನೆಲದ ಮೇಲೆ ಕುಳಿತುಕೊಳ್ಳುವವರು ಚಾಪೆ ವಗೈರೆಗಳನ್ನು ಮನೆಯಿಂದಲೇ ತರಬೇಕು. ಆಗಿಂದಾಗ್ಗೆ ದೇವಸ್ಥಾನದ ಒಳಭಾಗದಲ್ಲಿ ಡಿಸ್ಇನ್ಫೆಕ್ಟೆಂಟ್ ಸ್ಪ್ರೇ ಉಪಯೋಗಿಸುತ್ತಿರಬೇಕು .ಹತ್ತು ವರ್ಷದೊಳಗಿನ ಮತ್ತು ಅರುವತ್ತೈದು ವರ್ಷದ ಮೇಲ್ಪಟ್ಟ ಹಿರಿಯರ ಪ್ರವೇಶ ನಿರ್ಬಂಧ ಕಡ್ಡಾಯಗೊಳಿಸಬೇಕು. ತೀರ್ಥ ಪ್ರಸಾದಗಳನ್ನು ಕೊಡಬಾರದು, ಅನ್ನದಾನ ಮಾತ್ರ ಮಾಡಬಹುದು, ಮುಂತಾದ ಹಲವಾರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವುದೆನೋ ಸರಿ. ಧಾರ್ಮಿಕ ಕೇಂದ್ರಗಳಿಗೆ ಇರುವ ನೀತಿ ನಿಯಮಗಳು ಸರ್ಕಾರಕ್ಕೆ ಗೊತ್ತೇ ಇಲ್ಲವೇನೋ ಎಂದೆನಿಸುತ್ತದೆ. ದೇವರ ವಿಗ್ರಹಗಳನ್ನು ಮುಟ್ಟಬಾರದು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಹಿಂದೂ ದೇವಾಲಯಗಳಲ್ಲಿ ಎಲ್ಲಾದರೂ ಸಾರ್ವಜನಿಕರು ದೇವಾಲಯದ ಒಳಗೆ ಹೋಗಿ ದೇವರನ್ನು ಮುಟ್ಟಲು ಸಾಧ್ಯವೇ? ಪಂಡರಾಪುರದಲ್ಲಿ ವಿಠ್ಠಲನ ಸ್ಪರ್ಶ ಒಂದನ್ನು ಹೊರತುಪಡಿಸಿದರೆ ಇಂತಹದು ಬೇರೆಲ್ಲೂ ಕಂಡುಬರುವುದಿಲ್ಲ. ಎಲ್ಲ ಧಾರ್ಮಿಕ ಕೇಂದ್ರಗಳ ಬಗ್ಗೆ ತಿಳಿವಳಿಕೆ ಇಲ್ಲದ ಐಲು ದೊರೆಗಳ ತೀರ್ಮಾನ ಎಂದೇ ಹೇಳಬಹುದು. ದೇವಾಲಯಗಳಲ್ಲಿನ ದೇವರು ಪ್ರದರ್ಶನಕ್ಕೆ ಇಟ್ಟಿರುವ ಗೊಂಬೆಗಳಲ್ಲ. ಪುರೋಹಿತರು ದೇವರುಗಳನ್ನು ಮುಟ್ಟದೆ ಪೂಜೆ ಮಾಡಲು ಹೇಗೆ ತಾನೆ ಸಾದ್ಯ? ಕೇಂದ್ರವಾಗಲಿ ರಾಜ್ಯ ಸರ್ಕಾರವಾಗಲಿ ನೀತಿ ನಿಯಮಗಳನ್ನು ರೂಪಿಸುವಾಗ ಎಲ್ಲಾ ಆಯಾಮಗಳನ್ನು ತಿಳಿದು ರೂಪಿಸಬೇಕು. ಲಾಕ್ಡೌನ್ ಸಮಯದಲ್ಲಿ ದೇವಾಲಯದ ಅರ್ಚಕರು ನಿತ್ಯ ಪೂಜೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದು ಸರಿಯಾಗಿತ್ತು ಗಣೇಶನನ್ನು ಮಾಡಲು ಹೋಗಿ ಅವನ ಅಪ್ಪನನ್ನು ಮಾಡಿದಂತೆ ಕಾಣುತ್ತಿದೆ ಏಕೆಂದರೆ ದೇವಾಲಯ ಮುಚ್ಚಿದಾಗ ದೇವರಿಗೆ ವಿಧಿವತ್ತಾಗಿ ಅಭಿಷೇಕ ಪೂಜೆ ನಡೆಯುತ್ತಿತ್ತು ಇಂದಿನ ಕೇಂದ್ರ ಸರ್ಕಾರದ ಮಾರ್ಗಸೂಚಿಯಿಂದ ಅದಕ್ಕೆ ಅವಕಾಶ ಇಲ್ಲದಂತೆ ಮಾಡಲು ಹೊರಟಿರುವುದು ಹುಚ್ಚುತನ. ಸಾರ್ವಜನಿಕರು ಸಾಮಾಜಿಕ ಅಂತರ ಪಾಲಿಸಬೇಕು ಎಂದು ಆದೇಶ ಮಾಡಿದ್ದರು ಕವಡೆ ಕಾಸಿನ ಕಿಮ್ಮತ್ತು ಬೆಲೆ ಇಲ್ಲ ದೇವರನ್ನು ಮುಟ್ಟಬಾರದು ಎಂದು ಹೇಳುವುದರಲ್ಲಿ ಅರ್ಥವಿಲ್ಲ ಸಾಮಾನ್ಯವಾಗಿ ದೇವಸ್ಥಾನಕ್ಕೆ ಹಿರಿಯರು, ಹಿರಿಯರ ಜೊತೆ ಮಕ್ಕಳು ಹೋಗುವುದು ವಾಡಿಕೆ ಯಾಗಿರುತ್ತದೆ ಅವರಿಗೆ ಪ್ರವೇಶ ಇಲ್ಲ ಅಂದಮೇಲೆ ದೇವಸ್ಥಾನಕ್ಕೆ ಹೆಚ್ಚು ಯಾರು ಹೋಗುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಮೂರ್ಖರ/ ಅತಿಬುದ್ದಿವಂತರ ಸಲಹೆಯನ್ನು ಬದಿಗೆ ಇಟ್ಟು ತಿದ್ದುಪಡಿ ಮಾಡಲಿ ಎಂಬುದು ಅರ್ಚಕರ ಮತ್ತು ಸಾರ್ವಜನಿಕರ ಅಭಿಪ್ರಾಯವಾಗಿದೆ


Share