ಮೌನ ಮಾನವನ ಸಾಧನೆಗೆ ದಾರಿದೀಪ.

Share

ಮಾನವನು ಸಾಧನೆ ಮಾಡಬೇಕಾದರೆ ಮೌನ ಎಂಬುದು ಮನುಷ್ಯನಿಗೆ ದಾರಿದೀಪ ಇದ್ದಂತೆ ಎಂದು ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಇಂದಿನ ಸಂದೇಶದ ಮುಖ್ಯಾಂಶವಾಗಿದೆ ಮೌನದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಇಂದಿನ ಸಂದೇಶದಲ್ಲಿ ಸೂಕ್ಷ್ಮವಾಗಿ ಭಕ್ತರಿಗೆ ಅರಿವನ್ನು ಉಂಟು ಮಾಡುವುದರ ಮೂಲಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೌನದ ಪಾತ್ರದ ಬಗ್ಗೆ ತಿಳಿಸಿದ ಅವರು ಮನುಷ್ಯನು ಏಕಾಗ್ರತೆಯಿಂದ ಪರಿಣಾಮ ವಾಗುವುದನ್ನು ಪಡೆಯಬೇಕಾದರೆ ಮೌನ ಎಷ್ಟು ಅಗತ್ಯ ಎಂದು ಅವರು ತಿಳಿಸಿದರು.
ಮಾತನ್ನು ಹೆಚ್ಚು ಆಡಿದರೆ ಮಾನವನು ಸೇರಿದಂತೆ ಸಕಲ ಜೀವಿಗಳಿಗೂ ಉಂಟಾಗುವುದರ ತೊಂದರೆ ಬಗ್ಗೆ ತಿಳಿಸಿದ ಸ್ವಾಮೀಜಿಯವರು ಮನುಷ್ಯ ಹೆಚ್ಚು ಮಾತನಾಡಿದರೆ ವೈರತ್ವ, ಜಗಳ ಪಯಪಕ್ಷಿಗಳು ತಮ್ಮ ಇಂಪಾದ ಸ್ವರದಿಂದ ಹೇಗೆ ಬಂಧನಕ್ಕೆ ಒಳಗಾಗುತ್ತವೆ ಎಂಬುದರ ಮೂಲಕ ಉದಾಹರಣೆ ಸಹಿತ ವಿವರಿಸಿದರು.ಒಟ್ಟಿನಲ್ಲಿ ಮಾನವನು ಲೌಕಿಕವಾಗಿ ಮಾತನ್ನು ಕಡಿಮೆ ಅಡಿದರೆ ಅಂತರಾತ್ಮದ ಜೊತೆ ಹೆಚ್ಚು ಮಾತನಾಡಿ ತನ್ನ ಸಾಧನೆಯಲ್ಲಿ ಗುರಿ ಸಾಧಿಸಬಹುದು ಎಂಬುದನ್ನು ತಿಳಿಸಿದ ಸ್ವಾಮೀಜಿ ಯವರು ಆಧ್ಯಾತ್ಮಿಕ ಭಾಷೆಯಲ್ಲಿ ಹೇಳುವ ಹಾಗೆ ‘ಮೌನಂ ಸರ್ವಾರ್ಥ ಸಾಧನಂ ‘ ಎಂಬುದು ಇಂದಿನ ಸ್ವಾಮೀಜಿಯವರ ಸಂದೇಶ


Share