ಯಾದಗಿರಿ ಜಿಲ್ಲೆಯಲ್ಲಿ 33,581 ಜನರ ಜ್ವರ ತಪಾಸಣೆ

379
Share

ಜಿಲ್ಲೆಯಲ್ಲಿ 33,581 ಜನರ ಜ್ವರ ತಪಾಸಣೆ

ಯಾದಗಿರಿ, ಮೇ 14 : ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮೇ 17ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಆಗಿರುವ ಪ್ರಯುಕ್ತ ಜಿಲ್ಲೆಯಲ್ಲಿ ತೆರೆಯಲಾದ 5 ಜ್ವರ ತಪಾಸಣೆ ಕೇಂದ್ರಗಳಲ್ಲಿ ಗುರುವಾರ 1345 ಜನ ಸೇರಿದಂತೆ ಮೇ 14ರವರೆಗೆ ಒಟ್ಟು 33,581 ಜನರ ಜ್ವರ ತಪಾಸಣೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಣಸಗಿ ತಾಲ್ಲೂಕಿನ ಸರ್ಕಾರಿ ಬಾಲಕರ ಪ್ರೌಢಶಾಲೆ ಕೇಂದ್ರದಲ್ಲಿ ಗುರುವಾರ 359 ಜನ ಸೇರಿದಂತೆ ಒಟ್ಟು 3,728 ಜನ, ಸುರಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 59 ಸೇರಿದಂತೆ ಒಟ್ಟು 8,506 ಜನ, ಶಹಾಪೂರ ತಾಲ್ಲೂಕಿನ ಭೀಮರಾಯನಗುಡಿ ಯು.ಕೆ.ಪಿ ಆಸ್ಪತ್ರೆಯಲ್ಲಿ 257 ಸೇರಿದಂತೆ ಒಟ್ಟು 5,602 ಜನ, ಗುರುಮಠಕಲ್‍ನ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ 106 ಸೇರಿದಂತೆ ಒಟ್ಟು 4,227 ಜನ, ಯಾದಗಿರಿ ಆಯುμï ಆಸ್ಪತ್ರೆಯಲ್ಲಿ 564 ಸೇರಿದಂತೆ ಒಟ್ಟು 11,518 ಜನರ ಜ್ವರ ತಪಾಸಣೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


Share