ಯುವ ಮತದಾರರನ್ನು ಸಂಘಟಿಸಿ ; ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮನವಿ

Share

 

ಕೆಆರ್‌ ಕ್ಷೇತ್ರದಲ್ಲಿ ಯುವ ಮತದಾರರನ್ನು ಸಂಘಟಿಸಿ ; ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮನವಿ

ಮೈಸೂರು : ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಯುವ ಮತದಾರರನ್ನು ಸಂಘಟಿಸಿ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕೃಷ್ಣರಾಜ ಕ್ಷೇತ್ರದ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಏ. 20 ರಂದು ನಡೆಯಲಿರುವ ತಮ್ಮ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೂ ಮುನ್ನ ನಡೆಯುವ ಮೆರವಣಿಗೆಯಲ್ಲಿ ಕೃಷ್ಣರಾಜ ಕೃಷ್ಣರಾಜ ಕ್ಷೇತ್ರದ ಯುವ ಮತದಾರು ಹಾಗೂ ಹೊಸದಾಗಿ ಮತ ಹಾಕುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆ ಮಾಡಬೇಕೆಂದು ಮನವಿ ಮಾಡಿದರು.
ಯುವ ಮತದಾರರು ಮೆರವಣಿಗೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಕುರಿತು ಸೂಚನೆ ನೀಡಲು ಈ ಸಭೆ ಕರೆಯಲಾಗಿದೆ. ಹೊಸ ಮತದಾರರಿಗೆ ಈಗ 18 ತುಂಬಿರುತ್ತದೆ. ಹೀಗಾಗಿ ದು ವರ್ಷಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ದುರಾಡಳಿತದ ತಿಳಿವಳಿಕೆ ಇರುವುದಿಲ್ಲ. ಅವರಿಗೆ ಅದನ್ನು ಮನವರಿಗೆ ಮಾಡಿಕೊಟ್ಟು ಬಿಜೆಪಿಯ ಕಾರ್ಯಕ್ರಮಗಳು ಹಾಗೂ ಆಶಯಗಳನ್ನು ತಿಳಿಸಿ ಪಕ್ಷ ಅಧಿಕಾರಕ್ಕೆ ತರಲು ಸಹಕರಿಸುವಂತೆ ಮನವಿ ಮಾಡಲು ಕಾರ್ಯಕ್ರಮಕ್ಕೆ ಯುವಕರನ್ನು ಕರೆತನ್ನಿ ಎಂದು ಸಲಹೆ ನೀಡಿದರು.

ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಕಟ್ಟಾಳು ರಾಮ್‌ದಾಸ್ ಅವರಿಂದ ಈ ನಿರ್ಧಾರವನ್ನು ನಾನು ಮುಂಚೆಯೇ ನಿರೀಕ್ಷಿಸಿದ್ದೆಘಿ. ಈ ಬಗ್ಗೆ ಅನುಮಾನ ಇರಲಿಲ್ಲ. ಆದರೆ ಎಲ್ಲರ ಸಲಹೆಯಂತೆ ಸಹಕಾರ ಕೋರಲು ರಾಮ್‌ದಾಸ್ ಅವರ ಮನೆಗೆ ತೆರಳಿ ಸಹಕಾರ ಕೋರಲಾಗಿತ್ತು ಎಂದು ತಿಳಿಸಿದರು.

ಸಂಸದರಾದ ಪ್ರತಾಪಸಿಂಹ ಮಾತನಾಡಿ, ಮೈಸೂರಿನಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಶ್ರೀವತ್ಸ ಅವರಿಗೆ ಟಿಕೆಟ್ ನೀಡಿರುವುದರಿಂದ ಹೊಸಬರಿಗೆ ಅವಕಾಶ ದೊರೆತಂತಾಗಿದೆ. ನಾನು ಚುನಾವಣೆಗೆ ಸ್ಪರ್ಧಿಸಿದಾಗ ಈ ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದ್ದರೂ ನನ್ನನ್ನು 31,000 ಮತಗಳ ಅಂತರದಲ್ಲಿ ಕ್ಷೇತ್ರದ ಜನತೆ ಗೆಲ್ಲಿಸಿದ್ದೀರಿ. ಇದೇ ರೀತಿ ಶ್ರೀವತ್ಸ ಅವರನ್ನು 30,000 ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಯಾರಿಗೂ ಸ್ಥಾನ ಮಾನ ಶಾಶ್ವತವಲ್ಲಘಿ. ನಾನು 30 ರಿಂದ 40 ವರ್ಷ ರಾಜಕಾರಣ ಮಾಡಿದೆ ಎಂಬುದು ಶಾಶ್ವತವಲ್ಲ. ಈ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ. ನಾವು ಸತ್ತ ನಂತರವೂ ನೆನಪಿಸಿಕೊಳ್ಳುವ ಕೆಲಸ ಮಾಡಬೇಕು. ಹೊಸಬರಿಗೆ ಅವಕಾಶ ನೀಡಬೇಕೆಂದು ಪಕ್ಷವು ತೆಗೆದುಕೊಂಡ ನಿರ್ಧಾರಗಳಿಂದ ಯಾರೂ ವಿಚಲಿತರಾಗಬಾರದು ಎಂದರು.
ವಿಭಾಗ ಪ್ರಭಾರಿ ಮೈ.ವಿ. ರವಿಶಂಕರ್, ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ಜಯಶಂಕರ್, ಕೆ.ಎಂ. ನಿಶಾಂತ್, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ವಾಣೀಶ್, ಹರ್ಷ, ಕೀರ್ತಿ, ಧನುಷ್, ಪ್ರಜೀಶ್, ಭರತ್, ಸಚಿನ್, ವಿನಯ್ ಹಾಗು ನೂರಾರು ಯುವಕರು ಉಪಸ್ಥಿತರಿದ್ದರು.
————


Share