ಯೋಗದ ಮಹತ್ವ

“ಯೋಗದ ಮಹತ್ವ ಅಂದು ಇಂದು” ವಿಷಯದ ಕುರಿತು ಉಪನ್ಯಾಸ
ಮೈಸೂರು, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧಕ ಆಸ್ಪತ್ರೆ, ಮೈಸೂರು, ಇವರ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 15 ರಿಂದ ಜೂನ್ 20ವರೆಗೆ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಗೂಗಲ್ ಮೀಟ್ ಆ್ಯಪ್‍ನಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೂನ್ 19 ರಂದು ನ್ಯಾಚುರೋಪತಿ ಆ್ಯಂಡ್ ಯೋಗ ಸೈನ್ಸ್ ಪ್ರೊಫೆಸರ್ ಡಾ.ಅರ್ಚನ ಪದ್ಮನಾಭ್ ಅವರು “ಯೋಗದ ಮಹತ್ವ ಅಂದು ಇಂದು” ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮದ ಸಂಘಟಕರಾದ ಡಾ.ಭಾರತೀಶ್ ಡಿ.ಎಸ್- 9535415399 ಹಾಗೂ ಸಂಯೋಜಕರಾದ ಡಾ.ದೀಪಕ್ -7259627538 ಅನ್ನು ಸಂಪರ್ಕಿಸುವಂತೆ ಸರ್ಕಾರಿ ಪ್ರಕೃತಿ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ