ಯೋಗ ಲಕ್ಷ್ಮಿ ಬಾಂಡ್ ವಿತರಣೆ

354
Share

ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಸಿರುವ ಹೆಣ್ಣು ಮಕ್ಕಳಿಗಾಗಿ “ಯೋಗಲಕ್ಷ್ಮಿ” ಯೋಜನೆಯನ್ನು ರೂಪಿಸಲಾಗಿದ್ದು, ಇಂದು ಮೈಸೂರು ಮಹಾನಗರಪಾಲಿಕೆ ಆವರಣದಲ್ಲಿ ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಎಸ್.ಟಿ. ಸೋಮಶೇಖರ್ ರವರು ಹಾಗೂ ಪೂಜ್ಯ ಮಹಾಪೌರರಾದ ಶ್ರೀಮತಿ. ತಸ್ನಿಂ ರವರ ಅಧ್ಯಕ್ಷತೆಯಲ್ಲಿ ಅರ್ಹ ಫಲಾನುಭವಿಗಳಿಗೆ “ಯೋಗಲಕ್ಷ್ಮಿ ಬಾಂಡ್” ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಪ ಮಹಾಪೌರರಾದ ಶ್ರೀ. ಶ್ರೀಧರ್, ಆಯುಕ್ತರಾದ ಶ್ರೀ. ಗುರುದತ್ತ ಹೆಗ್ಡೆ, ಭಾ.ಆ.ಸೇ, ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಫಲಾನುಭವಿಗಳು ಹಾಜರಿದ್ದರು.


Share