ಯೋಜನೆಗಳನ್ನು ಫಾಲೋ ಮಾಡುವಂತೆ ಸಚಿವರುಗಳಿಂದ ಅಧಿಕಾರಿಗಳಿಗೆ ಸೂಚನೆ

347
Share


ಯೋಜನೆಗಳ ಫಾಲೋಅಪ್ ಆಗಲಿ

  • ಅಧಿಕಾರಿಗಳಿಗೆ ಸಚಿವದ್ವಯರ ಸೂಚನೆ

ಮೈಸೂರು: ಆರ್ಥಿಕ ದುರ್ಬಲರಿಗೋಸ್ಕರ ನಿವೇಶನ ಯೋಜನೆ ಮಂಜೂರು ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಸಾಲದು ಅದನ್ನು ಫಾಲೋಅಪ್ ಮಾಡುವ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಹೇಳಿದರು.

ಸರ್ಕಾರಗಳಿಗೆ ವರದಿ ಸಲ್ಲಿಸಿಯೋ, ಪ್ರಸ್ತಾವನೆ ಸಲ್ಲಿಸಿಯೋ ಸುಮ್ಮನೆ ಕುಳಿತರಾಗದು. ಅಧಿಕಾರಿಗಳು ಫಾಲೋಅಪ್ ಮಾಡವುದರ ಜೊತೆಗೆ ಆಗಾಗ ಸರ್ಕಾರದ ಗಮನ ಸೆಳೆಯಬೇಕು ಎಂದು ಸಚಿವದ್ವಯರು ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಸಚಿದ್ವಯರು ಮಾತನಾಡಿದರು.

ಮುಡಾದ 6 ಯೋಜನೆಗಳಿಗೆ ಸರ್ಕಾರದಿಂದ ಅನುಮತಿ ಬಾಕಿ ಇದೆ. ಸರ್ಕಾರದ ವತಿಯಿಂದ ಒಪ್ಪಿಗೆ ಬೇಕಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದಾಗ, ಶೀಘ್ರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವದ್ವಯರು ತಿಳಿಸಿದರು.

ಎಲ್ಲರೂ ಕೆಲಸ ಮಾಡಲಿ, ಮುಂದಿನ ದಿನಗಳಲ್ಲಿ ನಾನು ಪರಿಶೀಲನೆ ಮಾಡುತ್ತೇನೆ. ತಪ್ಪುಗಳು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮವಹಿಸುವೆ ಎಂದು ಸಚಿವ ಬಸವರಾಜು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ನಾಗೇಂದ್ರ, ಹರ್ಷವರ್ಧನ್, ಇತರ ಅಧಿಕಾರಿಗಳು ಇದ್ದಾರೆ.


Share