ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ: ಶಶಿಕಲಾ ವಿ. ಟೆಂಗಳಿ.

Share

ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ: ಶಶಿಕಲಾ ವಿ. ಟೆಂಗಳಿ
ಮೈಸೂರು. ಮಹಿಳಾ ಅಭಿವೃದ್ಧಿ ನಿಗಮದಿಂದ ಹಾಗೂ ಸರ್ಕಾರದಿಂದ ಬರುವಂತಹ ಪ್ರತಿಯೊಂದು ಯೋಜನೆಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಿ ಎಂದು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಶಿಕಲಾ ವಿ. ಟೆಂಗಳಿ ಅವರು ಹೇಳಿದರು.
ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಿಗಮದ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಗುರುತಿಸಿ ನಿಗಮವು ಸಹಾಯಧನ ನೀಡುತ್ತದೆ. ನಿಮ್ಮ ಗುರಿಯನ್ನು ಈಡೇರಿಸಿಕೊಳ್ಳಲು ಸಹಾಯಧನವನ್ನು ಪಡೆಯುತ್ತಿದ್ದೀರಿ, ಇದನ್ನು ಅನವಶ್ಯಕ ಕಾರ್ಯಗಳಿಗೆ ಉಪಯೋಗಿಸಬೇಡಿ ಎಂದರು.
ನಿಗಮದಿಂದ ಬರುವಂತಹ ಹಣವನ್ನು ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಉಪಯೋಗ ಕೆಲಸಗಳಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಾಲ ಹಾಗೂ ಸಹಾಯಧನ ಪಡೆದ ಫಲಾನುಭವಿಗಳು ಸರಿಯಾದ ಸಮಯಕ್ಕೆ ಬ್ಯಾಂಕ್‍ಗೆ ಹಣವನ್ನು ಮರು ಪಾವತಿಸಿದ ಫಲಾನುಭವಿಗಳಿಗೆ ವೇದಿಕೆಯಲ್ಲಿ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಫಲಾನುಭವಿಗಳನ್ನು ಆಯ್ಕೆ ಮಾಡುವುದು ತುಂಬಾ ತಡವಾಗುತ್ತಿದೆ ಆದ್ದರಿಂದ ದಯಮಾಡಿ ತಾಲ್ಲೂಕಿನ ಶಾಸಕರು ಶೀಘ್ರವೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಬಳಿಕ ಲೀಡ್ ಬ್ಯಾಂಕ್ ಎಜಿಎಂ ನಾಗಪ್ಪ ಮಾತನಾಡಿ, ಪ್ರಸ್ತಕ ಸಾಲಿನಲ್ಲಿ ಜಿಲ್ಲೆಯಲ್ಲಿ 443 ಮಹಿಳೆಯರಿಗೆ ಸಾಲ ನೀಡಬೇಕೆಂಬ ಗುರಿ ಹೊಂದಲಾಗಿದೆ. ಆದರೆ 293 ಅರ್ಜಿಗಳು ಮಾತ್ರ ಬ್ಯಾಂಕಿಗೆ ಬಂದಿವೆ. ಅದರಲ್ಲಿ 77 ಅರ್ಜಿಗಳಿಗೆ 1.6 ಕೋಟಿ ರೂ. ಮಂಜೂರಾಗಿದೆ. 179 ಅರ್ಜಿಗಳು ವಿಲೇವಾರಿ ಆಗಿಲ್ಲ. ಮತ್ತೆ ಸರಕಾರ ಹೆಚ್ಚುವರಿಯಾಗಿ 66 ಫಲಾನುಭವಿಗಳನ್ನು ಸೇರ್ಪಡೆಗೊಳಿಸಿದೆ ಎಂದರು.
ಉದ್ವೋಗಿನಿ ಸೇರಿದಂತೆ ಇನ್ನಿತರ ಯೋಜನೆಗಳ ಅಡಿಯಲ್ಲಿ ಸಾಲ ಪಡೆಯುವ ಮಹಿಳೆಯರು ಸರಿಯಾದ ದಾಖಲೆ ನೀಡಬೇಕು ಹಾಗೂ ಆಯಾಯ ಕಾಲಕ್ಕೆ ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಬೇಕೆಂದು ಹೇಳಿದರು.
ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕಿಗೆ ಜನವರಿ ತಿಂಗಳಲ್ಲಿ ಕಳುಹಿಸಲಾಗುತ್ತದೆ. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ತಮ್ಮದೇ ಆದ ಕೆಲಸದ ಒತ್ತಡದಲ್ಲಿರುತ್ತಾರೆ. ಹೀಗಾಗಿ ಐದಾರು ತಿಂಗಳ ಮುಂಚಿತವಾಗಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ಬೇಗೆ ಸಾಲ ವಿತರಿಸಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರೀಕ್ಷಕರಾದ ಜಗದಾಂಬ ಅವರು ಮಾತನಾಡಿ, ಉದ್ಯೋಗಿನಿ ಯೋಜನೆಯಲ್ಲಿ 2019-20 ನೇ ಸಾಲಿಗೆ ಒಟ್ಟು 209 ಗುರಿಯನ್ನು ನಿಗದಿಪಡಿಸಿದ್ದು ಇದರಲ್ಲಿ 77 ಫಲಾನುಭವಿಗಳಿಗೆ 91.81 ಲಕ್ಷ ರೂ.ಗಳ ಸಹಾಯಧನ ನೀಡಲಾಗಿದೆ. 2020-21ನೇ ಸಾಲಿಗೆ ಭೌತಿಕ ಗುರಿ 99 ಅರ್ಥಿಕ ಗುರಿ 1.16 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಿರು ಸಾಲ ಯೋಜನೆಯಡಿ 2019-20 ನೇ ಸಾಲಿಗೆ 11 ಗುರಿ ನಿಗದಿಪಡಿಸಿದ್ದು, 5 ಸಂಘಗಳ ಪ್ರಸ್ತಾವನೆಯನ್ನು ಸಾಲ ಮಂಜೂರಾತಿಗಾಗಿ ನಿಗಮಕ್ಕೆ ಸಲ್ಲಿಸಲಾಗಿದೆ ಹಾಗೂ ಸಮೃದ್ಧಿ ಯೋಜನೆಯಡಿಯಲ್ಲಿ 2019-20 ನೇ ಸಾಲಿನಲ್ಲಿ 196 ಭೌತಿಕ ಗುರಿ ಹಾಗೂ 19.60 ಲಕ್ಷ ಅರ್ಥಿಕ ಗುರಿ ನಿಗದಿಪಡಿಸಿದ್ದು, 53 ಫಲಾನುಭವಿಗಳಿಗೆ 530000 ರೂ.ಗಳ ಪೆÇ್ರೀತ್ಸಾಹಧನ ಬಿಡುಗಡೆಯಾಗಿರುತ್ತದೆ. 2ನೇ ಹಂತದಲ್ಲಿ 37 ಫಲಾನುಭವಿಗಳಿಗೆ ಪೆÇ್ರೀತ್ಸಾಹ ಧನ ಬಿಡುಗಡೆ ಮಾಡಲು ನಿಗಮಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚೇತನ ಯೋಜನೆ (ಲೈಂಗಿಕ ಕಾರ್ಯಕರ್ತರ ಪುನರ್ವಸತಿ ಯೋಜನೆ)ಯಡಿಯಲ್ಲಿ ಫಲಾನುಭವಿಗಳನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗುವುದು. 2019-20 ನೇ ಸಾಲಿನಲ್ಲಿ ಭೌತಿಕ ಗುರಿ 8 ಆರ್ಥಿಕ ಗುರಿ ನಿಗದಿಪಡಿಸಿದ್ದು, 24 ಅರ್ಜಿಗಳನ್ನು ಸ್ವೀಕೃತವಾಗಿವೆ ಮತ್ತು 24 ಫಲಾನುಭವಿಗಳಿಗೆ ನಿಗಮದಿಂದ ಸಾಲ ಮತ್ತು ಸಹಾಯಧನ ಬಿಡುಗಡೆ ಮಾಡಲಾಗಿದೆ. 2020-21 ನೇ ಸಾಲಿಗೆ ಚೇತನಾ ಯೋಜನೆಯಡಿ ಭೌತಿಕ 11 ಗುರಿಯನ್ನು ನಿಗದಿಪಡಿಸಲಾಗಿದೆ ಹಾಗೂ ಧನಶ್ರೀ ಯೋಜನೆಯಡಿ 2019-20ನೇ ಸಾಲಿನಲ್ಲಿ 45 ಫಲಾನುಭವಿಗಳಿಗೆ ರೂ. 2283750 ಸಾಲ ಹಾಗೂ ಸಹಾಯಧನ ನೀಡಲಾಗಿದೆ ಮತ್ತು 2020-21 ನೇ ಸಾಲಿಗೆ 20 ಭೌತಿಕ ಗುರಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಶಿಕಲಾ ವಿ. ಟೆಂಗಳಿ ಅವರು ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಬ್ಯಾಂಕ್‍ಗೆ ಭೇಟಿ ನೀಡಿ ಸಾಲ ಮಂಜೂರಾತಿ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.
ಇದೆ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಕೆ.ಪದ್ಮಾ, ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿ ಪ್ರೇಮ್ ಕುಮಾರ್, ಜಿಲ್ಲಾ ನಿರೂಪಾಣಾಧಿಕಾರಿ ಗೀತಾಲಕ್ಷ್ಮೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳ ವಿ.ಪಾಟೀಲ್ ಮತ್ತು ಮಧುಸೂದನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Share