ರಾಜಕೀಯ ನಿವೃತ್ತಿ ಘೋಷಿಸಿದ ಈಶ್ವರಪ್ಪ

Share

ಮಾತಿನ ಮಲ್ಲ ಎಂದೇ ಪ್ರಖ್ಯಾತರಾಗಿದ್ದ ಹಿರಿಯ ರಾಜಕಾರಣಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಮಾಜಿ ಸಚಿವ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅವರು ಈಗ ಕೆಲ ಹೊತ್ತಿನ ಮುಂಚೆ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡರವರಿಗೆ ಪತ್ರವೊಂದನ್ನು ಬರೆದು ಕಳೆದ 40 ವರ್ಷಗಳಿಂದ ಬೂತ್ ಮಟ್ಟದಿಂದಲೂ ಡಿಸಿಎಂ ಪಟ್ಟದವರೆಗೆ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ನಾನು ರಾಜಕೀಯ ಜೀವನದ ನಿವೃತ್ತಿ ಬಯಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿ ಇದನ್ನು ಪರಿಗಣಿಸಲು ವಿನಂತಿಸಿದ್ದಾರೆ. ಅವರು ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.


Share