ರಾಜಕೀಯ ಬಗ್ಗೆ ನಟ ಸುದೀಪ್ ಸ್ಪಷ್ಟನೆ

Share

ನಾನು ಪ್ರೀತಿ ವಿಶ್ವಾಸ ಮಾನವೀಯತೆ ದೃಷ್ಟಿಯಿಂದ ಬಸವರಾಜ್ ಬೊಮ್ಮಾಯಿ ಅವರಿಗೆ ಸಾತ್ ಕೊಡಲು ಮುಂದೆ ಬಂದಿದ್ದೇನೆ ಎಂದು ರಾಜಕೀಯ ಭವಿಷ್ಯದ ಬಗ್ಗೆ ನಟ ಕಿಚ್ಚ ಸುದೀಪ್ ಅವರು ಸ್ಪಷ್ಟಪಡಿಸಿದ್ದಾರೆ

ಬೆಂಗಳೂರು-ನಾನು ಯಾವುದೇ ಪಕ್ಷದ ಪರ ಕೆಲಸ ಮಾಡುತ್ತಿಲ್ಲ ನನ್ನ ಜೀವನದಲ್ಲಿ ನೆರವಾದವರಿಗಷ್ಟೇ ನಾನು ಸಹಕರಿಸುತ್ತಿದ್ದೇನೆ ಹಾಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅರ್ಥ ಬೊಮ್ಮಾಯಿ ಮಾಮಾ ರವರು ನನ್ನ ಕಷ್ಟಕಾಲದಲ್ಲಿ ನೆರವಾಗಿದ್ದರಿಂದ ಅವರಿಗೆ ವೈಯಕ್ತಿಕವಾಗಿ ನಾನು ಅವರ ಕೋರಿಕೆಯಂತೆ ಪ್ರಚಾರ ಮಾಡಲು ಹೋಗುತ್ತಿದ್ದೇನೆ ಹಾಗಂತ ನಾನು ಪಕ್ಷದ ಪರ ನಿಂತಿದ್ದೇನೆ ಎಂಬುದಲ್ಲ ಎಂದು ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬೊಮ್ಮಾಯಿ ಕಂದಾಯ ಸಚಿವ ಅಶೋಕ್ ಹಾಗೂ ಉನ್ನತ ಶಿಕ್ಷಣ ಸಚಿವ ರವರೊಡನೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿ ಯಾವುದೇ ಪಕ್ಷದಲ್ಲಿ ನಿಜಕ್ಕೂ ನನಗೆ ಯಾರಾದರೂ ನನ್ನ ಕೈ ಬೆರಳು ಹಿಡಿದು ನನಗೆ ಕಿಂಚಿತ್ತಾದರೂ ಸಹಾಯ ಮಾಡಿದ್ದರೆ ಖಂಡಿತ ಅವರ ಪಕ್ಷಕ್ಕೂ ಅವರ ಕರೆಗೂ ನಾನು ಪ್ರಚಾರಕ್ಕೆ ತೆರಳಲು ಸಿದ್ಧ ,ನಾನು ಯಾವುದೇ ಕಾರಣಕ್ಕೂ ಇಲ್ಲಿ ಹಣ ಮಾಡಲು ಬಂದವನಲ್ಲ ಚಿತ್ರರಂಗದಲ್ಲೇ ನಾನು ಸಾಕಷ್ಟು ದುಡಿಯುತ್ತಿದ್ದೇನೆ ಸಿನಿಮಾ ಬಿಟ್ಟು ರಾಜಕೀಯ ಪ್ರವೇಶ ಮಾಡುವ ಯಾವುದೇ ತೀರ್ಮಾನ ನನ್ನ ಬಳಿ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ರವರು ನನ್ನ ಮೇಲಿನ ವಿಶ್ವಾಸಕ್ಕಾಗಿ ನಾನು ಕೇಳಿಕೊಂಡದ್ದರಿಂದ ನನಗೆ ಹಾಗೂ ನಾನು ಸೂಚಿಸುವ ಸ್ಥಳಗಳಲ್ಲಿ ನಮ್ಮ ಪಕ್ಷಕ್ಕೆ ಅವರು ಪ್ರಚಾರ ಮಾಡದಿದ್ದಾರೆ ಹಾಗೆಂದು ಪಕ್ಷ ಸೇರಿದ್ದಾರೆಂದಲ್ಲ ಅದು ಅವರ ವೈಯಕ್ತಿಕ ವಿಷಯ ಎಂದು ಸ್ಪಷ್ಟಪಡಿಸಿದರು. ಸುದೀಪ್ ರವರು ಪ್ರಶ್ನೆ ಗಳಿಗೆ ಉತ್ತರಿಸುತ್ತ ಕಷ್ಟಕ್ಕೆ ನೆರವಾದರೂ ಎಂದರೆ ಆ ಕಷ್ಟ ಅದು ನನ್ನ ವೈಯಕ್ತಿಕ ವಿಷಯ ಅದನ್ನು ಪ್ರಚಾರಪಡಿಸಲಾರೆ, ಹಾಗಾದರೆ ಬೇರೆ ಪಕ್ಷದಲ್ಲಿ ಯಾರೂ ನಿಮಗೆ ಈ ಸಹಾಯ ಮಾಡೆ ಇಲ್ಲವೇ ಎಂದರೆ ನನ್ನ ಆ ಹಿಂದಿನ ಕಷ್ಟ ಕಾಲದಲ್ಲಿ ಖಂಡಿತ ಮಾಡಿಲ್ಲ ಎಂದಷ್ಟೇ ಹಾರಿಕೆ ಉತ್ತರ ನೀಡಿದರು.


Share