ರಾಜೇಂದ್ರ ಮಹಾಸ್ವಾಮಿಜೀ 105ನೇ ಜಯಂತಿ ಗಿಡಕ್ಕೆ ನೀರು ಹಾಕುವುದರ ಮೂಲಕ ಆಚರಣೆ.

Share

ಧಾರ್ಮಿಕ ನೆಲೆಯ ಸುತ್ತೂರು ಕ್ಷೇತ್ರದಲ್ಲಿ ಜಾತಿ ಮತ ಮತ್ತು ಧರ್ಮಗಳ ಭೇದವಿಲ್ಲದೆ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣಕ್ಕೆ ಆದ್ಯತೆ ನೀಡಿದ ಪೂಜ್ಯ ಜಗದ್ಗುರು ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೇ ಜಯಂತಿ ಅಂಗವಾಗಿ ಪಾತಿ ಫೌಂಡೇಷನ್ ವತಿಯಿಂದ ಗನ್ಹೌಸ್ ವೃತ್ತದಲ್ಲಿರುವ ಬಸವ ಪುತ್ಥಳಿ ಮುಂಭಾಗ ಗಿಡಗಳಿಗೆ ನೀರು ಹಾಕುವ ಮೂಲಕ ಸರಳವಾಗಿ ಆಚರಿಸಲಾಯಿತು
ನಂತರ ಮಾತನಾಡಿದ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂಡಿ ಪಾರ್ಥಸಾರಥಿ
ರಾಜೇಂದ್ರ ಸ್ವಾಮೀಜಿಗಳು ಅವರ ಮೂರು ಗುಣಗಳಿಂದ ದೈವಸ್ಥಾನಕ್ಕೇರಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಮಹತ್ತರವಾದುದು. 50-60ರ ದಶಕದಲ್ಲಿಅವರು ಪ್ರಾಥಮಿಕ, ಪ್ರೌಢಶಾಲೆ ಮತ್ತು ಸಂಸ್ಕೃತ ಶಾಲೆಗಳನ್ನು ತೆರೆದರು. ಮೂಲ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಇನ್ನೆರಡು ಗುಣಗಳೆಂದರೆ ಸಾಮಾಜಿಕ ಮೌಲ್ಯಗಳಿಗೆ ಅವರು ನೀಡುತ್ತಿದ್ದ ದೊಡ್ಡ ಕೊಡುಗೆ ಹಾಗೂ ಅವರ ವೈಯುಕ್ತಿಕ ಜೀವನ. ರಾಜೇಂದ್ರ ಶ್ರೀಗಳು ಕರುಣಾಮೂರ್ತಿ, ಅವರ ಜೀವನದಲ್ಲಿಕರುಣೆಯೇ ತುಂಬಿತ್ತು,” ಎಂದು ಸ್ಮರಿಸಿದರು
ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂಡಿ ಪಾರ್ಥಸಾರಥಿ ,ಯುವ ಮುಖಂಡರಾದ ಮಹದೇವ ಪ್ರಸಾದ್ ,ಷಡಕ್ಷರಿ ,ನಾಗೇಂದ್ರ ,ರಾಜೇಂದ್ರ ಪ್ರಸಾದ್ ಮಧು ಹಾಗೂ ಇನ್ನಿತರರು ಹಾಜರಿದ್ದರು


Share