ಮೈಸೂರು: ಕರ್ನಾಟಕ ಸರ್ಕಾರ ಕೊರೋನ ಪಾಸಿಟಿವ್ ಇರುವ ಸುಮಾರು 794 ರೋಗಿಗಳಿಗೆ ಚಿಕಿತ್ಸೆ ನೀಡಲು ಮತ್ತು ಇತರೆ ಕಾರ್ಯಕ್ರಮಗಳಿಗೆ ಅದು ಸಾವಿರಾರು ಕೋಟಿ ಖರ್ಚು ಮಾಡಿದೆ ಎಂದು ಹೇಳಲಾಗಿದೆ
ಕರ್ನಾಟಕ ಸರ್ಕಾರ ಒಬ್ಬ ಕೊರೋನ ಪಾಸಿಟಿವ್ ವ್ಯಕ್ತಿಗೆ ಹದಿನಾಲ್ಕು ದಿನಗಳ ಕಾಲ ನೋಡಿಕೊಂಡು ಚಿಕಿತ್ಸೆ ಮಾಡಲು ಖರ್ಚು ಮಾಡುತ್ತಿರುವ ಹಣ ಬರೋಬ್ಬರಿ 3.5 ಲಕ್ಷ ಎಂದು ಕೆಪಿಸಿಸಿ ವಕ್ತಾರ ರಲ್ಲೊಬ್ಬರಾದ ಲಕ್ಷ್ಮಣ್ ಅವರು ತಿಳಿಸಿದರು
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿ ಮೇ ಒಂಬತ್ತು ನೇ ತಾರೀಕಿನಿಂದ ಪಿಪಿಇ ಕಿಟ್ ವರದಿ ಆರ್ಟಿಪಿಸಿಆರ್ ಪರೀಕ್ಷೆ ಕೊರಳ ಸೂಕಿ೦ತರ ಚಿಕಿತ್ಸೆ ವಿಶೇಷ ಪ್ಯಾಕೇಜ್ ಸಾವಿರದ ಆರುನೂರು ಒಂದು ಕೋಟಿ ಕಾರ್ಮಿಕರ ಆದ್ಯತೆ ನಿರ್ವಹಣೆ ದಿನಿಸಿ ಕಿಟ್ಟು ಸೇರಿದಂತೆ ಒಟ್ಟಾರೆ ರೂ 5 ಸಾವಿರ ಕೋಟಿ ಸರ್ಕಾರದಿಂದ ಖರ್ಚಾಗಿದೆ ಎಂದು ಲೆಕ್ಕ ನೀಡಿರುವ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು
ಇಷ್ಟು ದಿನ ಕಾರ್ಮಿಕರಿಗೆ ಬಿಡುಗಡೆಯಾದ ದಾಸೋಹ ಹಾಗೂ ರೇಷನ್ ಮತ್ತು ಅನ್ನ ಭಾಗ್ಯದ ಅಡಿಯಲ್ಲಿ ವಿತರಣೆಯಾಗುತ್ತಿರುವ ಅಕ್ಕಿ ಮತ್ತು ಇತರೆ ಸಾಮಗ್ರಿಗಳು ಕಾರ್ಮಿಕ ನಿಧಿಯಿಂದಲೇ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು
ಇಲಾಖೆಗಳಿಗೆ ಹಂಚಿಕೆಯಾದ ಹಣವನ್ನೇ ಕೋರೊನ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಅಂಕಿ ಅಂಶ ವಿವರ ನೀಡಿದರು