ರಾಜ್ಯಾದ್ಯಂತ ಕೊರೋನಾ ಸಂಬಂಧ ಸುದ್ದಿ

Share

ಕೊವಿಡ್ ಗದಗ ಜಿಲ್ಲೆಯ ಸ್ಥಿತಿಗತಿ

ಗದಗ (ಕರ್ನಾಟಕ ವಾರ್ತೆ) ಜು.02 : ಗುರುವಾರ ದಿ. 02 ರವರೆಗಿನ ಗದಗ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ: 9907
ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ : 85
ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ: 10492
ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾದ ಸಂಖ್ಯೆ: 10064
ವರದಿ ಬರಲು ಬಾಕಿ ಇರುವ ಸಂಖ್ಯೆ: 248
ಒಟ್ಟು ಕೊವಿಡ್-19 ಪಾಸಿಟಿವ್ ದೃಢಪಟ್ಟ ಪ್ರಕರಣಗಳು: 180 (ಇಂದಿನ 2 ಸೇರಿ)
ಮೃತಪಟ್ಟವರು: 4
ಸೋಂಕಿನಿಂದ ಗುಣಮುಖರಾದವರು: ಒಟ್ಟು 69 ಜನ (ಇಂದಿನ 9 ಜನ ಸೇರಿ)
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು: 107 ಜನ (ಇಂದಿನ 2 ಸೇರಿ)

ಮುಂಬೈನಿಂದ ರೈಲು ಮೂಲಕ ಆಗಮಿಸಿದವರ ವಿವರ: ದಿ. 02-07-2020 ರವರೆಗೆ ರೈಲು ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 1177 ಪ್ರಯಾಣಿಕರು ಆಗಮಿಸಿದ್ದು 425 ಜನ ಗದಗ ಜಿಲ್ಲೆಗೆ ಸೇರಿದ್ದು ಇದರಲ್ಲಿ 374 ಜನರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಹಾಗೂ 51 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. 374 ಜನರ ಪೈಕಿ 21 ಜನರಲ್ಲಿ ಕೋವಿಡ್-19 ಸೋಂಕು ಧೃಡಪಟ್ಟಿರುತ್ತದೆ. 752 ಜನರು ಬೇರೆ ಜಿಲ್ಲೆಯವರಾಗಿದ್ದು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ.000000000

ಗದಗ ಜಿಲ್ಲೆ ಕೋವಿಡ್-19 ಸೋಂಕು
48 ಸಕ್ರಿಯ ಪ್ರತಿಬಂಧಿತ ಪ್ರದೇಶ, 9 ಸಾಮಾನ್ಯ ವಲಯಗಳು

ಗದಗ (ಕರ್ನಾಟಕ ವಾರ್ತೆ) ಜು.02 : ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಬುಧವಾರದ (ಜು.01)ವರೆಗೆ ಸೋಂಕು ಪತ್ತೆಯಾದ 57 ಪ್ರದೇಶಗಳನ್ನು ಸರ್ಕಾರದ ನಿರ್ದೇಶನದಂತೆ ಪ್ರತಿಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪೈಕಿ ಸೋಂಕು ಪತ್ತೆಯಾಗದ 9 ಪ್ರತಿಬಂಧಿತ (ಕಂಟೈನ್ಮೆAಟ್) ಪ್ರದೇಶಗಳನ್ನು ಸಾಮಾನ್ಯ ವಲಯಗಳಾಗಿ ಪರಿವರ್ತಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ 48 ಸಕ್ರಿಯ ಪ್ರತಿಬಂಧಿತ ಪ್ರದೇಶಗಳಿದ್ದು, ಅವುಗಳ ವಿವರ ಇಂತಿದೆ.

ಸಕ್ರಿಯ ಪ್ರತಿಬಂಧಿತ ಪ್ರದೇಶಗಳು : ಗದಗ-ಬೆಟಗೇರಿಯ ಸೆಟ್ಲಮೆಂಟ್ (ಗಾಂಧಿ) ನಗರದ ವಾರ್ಡ್ ಸಂಖ್ಯೆ 02, ಎಸ್.ಎಂ.ಕೃಷ್ಣ ನಗರ, ನಂದೀಶ್ವರ ನಗರ ವಾರ್ಡ್ ಸಂ.35, ಲಕ್ಷಣಸಾ ನಗರ ವಾರ್ಡ್ ಸಂ.35, ಸಿದ್ಧರಾಮೇಶ್ವರ ನಗರ ವಾರ್ಡ್ ಸಂ.34 ಮತ್ತು 35 ನಿರ್ಬಂಧಿತ ಪ್ರದೇಶಗಳಾಗಿವೆ. ತಾಲ್ಲೂಕಿನ ಕೋಟುಮಚಗಿ ಗ್ರಾಮದ ವಾರ್ಡ್ ಸಂ.1 ಮತ್ತು 2, ಹರ್ತಿ ಗ್ರಾಮದ ನಾವಳ್ಳಿ ಓಣಿ ವಾರ್ಡ್ ಸಂ.1 ಮತ್ತು ಹೊರಪೇಟೆ ನಗರ ವಾರ್ಡ್ ಸಂ.3, ಕುರುಡಗಿ ವಾರ್ಡ್ ಸಂ.2, ಮಲ್ಲಸಮುದ್ರ, ಹೊಂಬಳ, ಕಣವಿ ಹೊಸೂರು, ಯಲಿಶಿರೂರ ಗ್ರಾಮದ ವಾರ್ಡ್ ಸಂ.2 ಮಲ್ಲಸಮುದ್ರ ಗ್ರಾಮದ ವಾರ್ಡ್ ಸಂ.2, ಕುರ್ತಕೋಟಿ ಗ್ರಾಮದ ಆಶ್ರಯ ಪ್ಲಾö್ಯಟ್ ಹಾಗೂ ಕಳಸಾಪುರ ಗ್ರಾಮದ ತೇಜಾ ನಗರ ಕೋವಿಡ್-19 ಸೋಂಕು ಪತ್ತೆಯಾಗಿರುವ ಕಾರಣದಿಂದಾಗಿ ಪ್ರತಿಬಂಧಿತ ಪ್ರದೇಶಗಳಾಗಿವೆ.

ಶಿರಹಟ್ಟಿ ತಾಲ್ಲೂಕಿನ ಮಟ್ಟಿಬಾವಿ ಪ್ರದೇಶದ ವಾರ್ಡ್ ಸಂ.6, ಮಂಜೂರ ತಾಂಡಾ, ಬಿ.ಡಿ.ತಟ್ಟಿ ಶಾಲೆ, ಬಜಾರ್ ರಸ್ತೆಯ ವಾರ್ಡ್ ಸಂ.6 ಮತ್ತು 9, ಬ್ರಾಹ್ಮಿಣ್ ಓಣಿ ವಾರ್ಡ್ ಸಂ. 10, ಮ್ಯಾಗೇರಿ ಓಣಿ ವಾರ್ಡ್ ಸಂ.4, ಛಬ್ಬಿ, ಛಬ್ಬಿ ಗ್ರಾಮ ಪಂಚಾಯತ್, ಬನ್ನಿಕೊಪ್ಪ, ಬಾಲೇಹೊಸೂರು.

ಮುಂಡರಗಿ ಪಟ್ಟಣದ ಅಂಬಾಭವಾನಿ ದೇವಸ್ಥಾನ, ನೇಕಾರ ಓಣಿ, ವಿದ್ಯಾನಗರ ವಾರ್ಡ್ ಸಂ.18, ಹುಡ್ಕೋ ಕಾಲೋನಿಯ ವಾರ್ಡ್ ಸಂ.7, ಡಂಬಳ ಗ್ರಾಮದ ಸರ್ವೇ ಸಂ.194, ಡಂಬಳ, ಪಟ್ಟಣದ ಗರಡಿ ಮನೆ ವಾರ್ಡ್ ಸಂ.14, ಪಿಡಬ್ಲೂö್ಯಡಿ ಕ್ವಾಟರ್ಸ್ ವಾರ್ಡ್ ಸಂ.19, ಬಸವೇಶ್ವರ ನಗರದ ವಾರ್ಡ್ ಸಂ.6, ಉಪ್ಪಿನ ಬೆಟಗೇರಿ ಪ್ರದೇಶದ ಎನ್‌ಎ ಪ್ಲಾö್ಯಟ್ ವಾರ್ಡ್ ಸಂ.17, ಬೆಣ್ಣೆನಹಳ್ಳಿ.

ರೋಣ ತಾಲ್ಲೂಕಿನ ಇಟಗಿ, ಪಟ್ಟಣದ ಕಲ್ಯಾಣ ನಗರ, ಇಟಗಿ ಗ್ರಾಮದ ವಾರ್ಡ್ ಸಂ.4, ಮೆಣಸಗಿ, ಬೆಳವಣಕಿ ಗ್ರಾಮಗಳು. ನರಗುಂದ ಪಟ್ಟಣದ ಸೀತನ ಬಾವಿ ಓಣಿ ಹಾಗೂ ಲಕ್ಷೆö್ಮÃಶ್ವರ ಪಟ್ಟಣದ ವಾರ್ಡ್ ಸಂ.12ನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.

ಪ್ರತಿಬಂಧಿತ ಪ್ರದೇಶಗಳಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ವಯ ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ 9 ನಿರ್ಬಂಧಿತ ಪ್ರದೇಶಗಳನ್ನು ಸಾಮಾನ್ಯ ವಲಯಗಳಾಗಿ ಘೋ಼ಷಿಸಲಾಗಿದ್ದು, ಅವುಗಳ ವಿವರ ಇಂತಿದೆ.

ಸಾಮಾನ್ಯ ವಲಯಗಳು : ಗದಗ ನಗರದ ರಂಗನವಾಡಿ, ಗಂಜಿ ಬಸವೇಶ್ವರ ವೃತ್ತ, ಹುಡ್ಕೋ ಕಾಲೋನಿ, ಪಂಚಾಕ್ಷರಿ ನಗರ ವಾರ್ಡ್ ಸಂ.28, ಸೇವಾಲಾಲ್ ನಗರ ವಾರ್ಡ್ ಸಂ.35, ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂ.8 ಮತ್ತು 11, ರೋಣ ತಾಲ್ಲೂಕಿನ ಹೊಳೆ ಆಲೂರ ಗ್ರಾಮದ ವಾರ್ಡ್ ಸಂ.8 ಹಾಗೂ ಕೃಷ್ಣಾಪುರ ಗ್ರಾಮವು ಸಾಮಾನ್ಯ ವಲಯಗಳಾಗಿ ಮಾರ್ಪಾಡಾಗಿವೆ.000000000000

ಮನೆ ದಿಗ್ಬಂಧನ ನಿಯಮ ಉಲ್ಲಂಘಿಸಿದವರಿಗೆ ಸಾಂಸ್ಥಿಕ ದಿಗ್ಬಂಧನೆ – ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ

ಗದಗ ಜು.2: ಕೊವಿಡ್-19 ಸೋಂಕು ನಿಯಂತ್ರಣ ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ಬಂದವರಿಗೆ, ಪ್ರತಿಬಂಧಿತ ಪ್ರದೇಶಗಳಲ್ಲಿನ ಜನರಿಗೆ, ಸೋಂಕಿತರ ಪ್ರಥಮ ದ್ವಿತೀಯ ಸಂಪರ್ಕಿತರಿಗೆ ಮನೆ ದಿಗ್ಭಂದನ ಕಡ್ಡಾಯಗೊಳಿಸಿದೆ. ಇದನ್ನು ಉಲ್ಲಂಘಿಸಿ ಹೊರಗೆ ಓಡಾಡುತ್ತಿದ್ದ ಕೊಟುಮುಚಗಿ, ಅಡವಿಸೋಮಾಪೂರ ತಾಂಡಾ, ನಾಗಾವಿ ತಾಂಡಾದ ಜನರನ್ನು ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಪತ್ತೆ ಹಚ್ಚಿ ಅವರನ್ನು ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಿದರು. ಉಪ ತಹಶೀಲ್ದಾರ ಸಂಜೀವ ಶಿಂಪೇರ, ಕಂದಾಯ ನಿರೀಕ್ಷಕ ಸಂಕನಗೌಡಾ ಪಾಟೀಲ ತಂಡದಲ್ಲಿದ್ದರು.
ಕೊವಿಡ್-19 ಸೋಂಕು ನಿಯಂತ್ರಣ ನಿಯಮಗಳನ್ನು ಹಾಗೂ ದಿಗ್ಬಂಧನ ಉಲ್ಲಂಘಿಸುವವರ ವಿರುದ್ದ ರಾಷ್ಟ್ರೀಯ ವಿಪತ್ತು ಕಾಯ್ದೆ ಅನ್ವಯ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ತಹಶೀಲ್ದಾರ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.0000000000000

ಆಗಸ್ಟ್ 2ರವರೆಗೆ
ಎಲ್ಲಾ ಭಾನುವಾರುಗಳಂದು ಪೂರ್ಣದಿನದ ಲಾಕ್‍ಡೌನ್ ಜಾರಿಗೊಳಿಸಿ ಆದೇಶ


ಕಲಬುರಗಿ.ಜು.02.(ಕ.ವಾ)-ಕಲಬುರಗಿ ನಗರದಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ 2020ರ ಜುಲೈ 5ರ ಭಾನುವಾರದಿಂದ ಮುಂದಿನ ಎಲ್ಲಾ ಭಾನುವಾರಗಳಂದು (2020ರ ಆಗಸ್ಟ್ 2 ರವರೆಗೆ) ಕಲಬುರಗಿ ನಗರದಾದ್ಯಂತ ಪೂರ್ಣದಿನದ ಲಾಕ್‍ಡೌನ್ ಹಾಗೂ ಎಲ್ಲ ತರಹದ ಮದ್ಯ ಮಾರಾಟವನ್ನು ನಿಷೇಧಿಸಿ ಕಲಬುರಗಿ ನಗರ ಆಯುಕ್ತರಾದ ಎನ್. ಸತೀಶಕುಮಾರ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಕಲಬುರಗಿ ನಗರದಾದ್ಯಂತ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ ಅವಶ್ಯಕವಲ್ಲದ ಚಟುವಟಿಕೆ ಮತ್ತು ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144ರನ್ವಯ ನಗರ ಪೊಲೀಸ್ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ಇದಲ್ಲದೇ ತಕ್ಷಣ ಜಾರಿಗೆ ಬರುವಂತೆ ಪ್ರತಿದಿನ ರಾತ್ರಿ 8 ರಿಂದ ಬೆಳಗಿನ 5 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ಇದ್ದು, ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.

ಜುಲೈ 5ರ ಭಾನುವಾರದಿಂದ ಆಗಸ್ಟ್ 2ರವರೆಗೆ ಮುಂದಿನ ಎಲ್ಲ ಭಾನುವಾರುಗಳಂದು 1965ರ ಕರ್ನಾಟಕ ಅಬಕಾರಿ ಕಾಯ್ದೆ ಕಲಂ 21ರನ್ವಯ ನಗರದಾದ್ಯಂತ ಮದ್ಯಮಾರಾಟ ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ.

ಲಾಕ್‍ಡೌನ್ ಪ್ರಯುಕ್ತ ಜಿಲ್ಲೆಯಾದ್ಯಂತ ರಾತ್ರಿ 8 ರ ನಂತರ ಅವಶ್ಯಕ ಸರಕು ಸಾಮಾಗ್ರಿ ಮತ್ತು ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣ ಜಿಲ್ಲೆಯನ್ನು ಸ್ತಬ್ದಗೊಳಿಸಬೇಕು. ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ರಾತ್ರಿ 8ರ ನಂತರ ಎಲ್ಲ ತರಹದ ಮದ್ಯ ಮಾರಾಟವನ್ನು ಸಹ ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.00000000000000

ಅಗಸರು ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರಿಗೆ
ಪರಿಹಾರ ವಿತರಣೆ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ


ಕಲಬುರಗಿ.ಜುಲೈ.02.(ಕ.ವಾ)-ಕೊರೋನಾ ವೈರಸ್ (ಕೋವಿಡ್-19)ರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ವiಂಡಳಿ ಮೂಲಕ ಅಗಸರು ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರು 5000 ರೂ.ಗಳ ಪರಿಹಾರ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕವನ್ನು 2020ರ ಜುಲೈ 10 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಅವರು ತಿಳಿಸಿದ್ದಾರೆ.

ಅಗಸ, ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಫಲಾನುಭವಿಗಳು ಸೇವಾ ಸಿಂಧು https://sevasindhu.karnataka.gov.in ಪೋರ್ಟಲ್‍ನಲ್ಲಿ ಅನ್‍ಲೈನ್ ಅರ್ಜಿ ಸಲ್ಲಿಸಬೇಕು. ನಂತರ ಫಲಾನುಭವಿಗಳ ಅರ್ಜಿ ಪರಿಶೀಲಿಸಿ ಆಧಾರ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮೂಲಕ ಪರಿಹಾರವನ್ನು ವರ್ಗಾಯಿಸಲಾಗುತ್ತದೆ.

ಕರ್ನಾಟಕದಲ್ಲಿ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ವಲಸೆ ಕಾರ್ಮಿಕರು (ಕುಟುಂಬದಲ್ಲಿ ಒಬ್ಬರಿಗೆ ಮಾತ್ರ) ಪರಿಹಾರ ಪಡೆಯಲು ಅರ್ಹರು. ಫಲಾನುಭವಿಗಳ ವಯೋಮಿತಿ 18 ರಿಂದ 65 ವರ್ಷದೊಳಗಿರಬೇಕು. ಕರ್ನಾಟಕ ರಾಜ್ಯದಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿರಬೇಕು. ಕಡ್ಡಾಯವಾಗಿ ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು.

ಅರ್ಹ ಫಲಾನುಭವಿಗಳು ಅವಶ್ಯಕ ದಾಖಲೆಗಳಾದ ಅಗಸ, ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಕುರಿತು ನಿಗದಿತ ನಮೂನೆಯಲ್ಲಿ ಅಧಿಕಾರಿಗಳಿಂದ ಪಡೆದ ಉದ್ಯೋಗ ಧೃಡಿಕರಣ ಪತ್ರ, ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಣೆ, ಬಿ.ಪಿ.ಎಲ್ ಕಾರ್ಡ್, ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ ಹಾಗೂ ಪಾಸ್ ಪೋರ್ಟ್ ಅಳತೆ ಇತ್ತೀಚಿನ ಭಾವಚಿತ್ರದೊಂದಿಗೆ ಆನ್‍ಲೈನ್ ಮೂಲಕ 2020ರ ಜುಲೈ 10ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಅಗಸರು ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರು ಈ ಪರಿಹಾರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 30 ರಂದು ನಿಗದಿಪಡಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ.000000

ಮೈಸೂರಿನ ಮುಕ್ತಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ:
ಜುಲೈ 3 ರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ತರಗತಿ ಆರಂಭ


ಕಲಬುರಗಿ.ಜು.02.(ಕ.ವಾ)-ಮೈಸೂರಿನ ಮುಕ್ತಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕೋವಿಡ್-19ರ ಕಾರಣದಿಂದಾಗಿ ಭೌತಿಕವಾಗಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಳಕಂಡ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ತರಗತಿಗಳನ್ನು KSOU Connect platformನ ಮೂಲಕ ಆನ್‍ಲೈನ್ ಮೂಲಕ 2020ರ ಜುಲೈ 3 ರಿಂದ 14 ರವರೆಗೆ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2018-19 ನೇ ಸಾಲಿನ ದ್ವಿತೀಯ ವರ್ಷದ ಬಿ.ಎ., ಬಿ.ಕಾಂ. ಮತ್ತು 2019-20 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಹಾಗೂ 2019-20 ಜನವರಿ ಆವೃತ್ತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ಬಿ.ಎ., ಬಿ.ಕಾಂ., ಬಿ.ಲಿಬ್. ಐ.ಎಸ್ಸಿ, ಎಂ.ಎ., ಎಂ.ಕಾಂ., ಎಂ.ಎಸ್.ಸಿ., ಎಂ.ಬಿ.ಎ., ಎಂ.ಲಿಬ್ ಐ.ಎಸ್ಸಿ., ಬಿ.ಎಡ್. ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ.

ಕೌಶಲ್ಯಾಭಿವೃದ್ಧಿ ತರಬೇತಿಯ ಪಠ್ಯ ವಿಷಯ, ವೇಳಾಪಟ್ಟಿ ಮತ್ತು ತರಗತಿಗಳ ವೆಬ್ ಲಿಂಕ್‍ಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಆನ್‍ಲೈನ್ ಮೂಲಕ ಇ-ಡಿಜಿಟಲ್ (ಇ-ಆigiಣಚಿಟ) ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿ ಮೊಬೈಲ್ ಸಂಖ್ಯೆ 9611434810 ಗೆ ಸಂಪರ್ಕಿಸಬಹುದು.00000000000000

ಗರ್ಭಿಣಿ-ಬಾಣಂತಿ ಸೇರಿದಂತೆ ನಾಲ್ವರಿಗೆ ಕೋವಿಡ್ ಸೋಂಕು ದೃಢ- ಎಂಟು ಜನರು ಗುಣಮುಖ
ಹಾವೇರಿ: ಜು.02(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಗುರುವಾರ ಗರ್ಭಿಣಿ-ಬಾಣಂತಿ ಸೇರಿದಂತೆ ನಾಲ್ಕು ಜನ ಮಹಿಳೆಯರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎಂಟು ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 122 ಪಾಸಿಟಿವ್ ಪ್ರಕರಣ ದೃಢಗೊಂಡಿದ್ದು, ಈ ಪೈಕಿ 33 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 87 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.
ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ನಿವಾಸಿ 25 ವರ್ಷದ ಐದು ತಿಂಗಳ ಗರ್ಭಿಣಿ (P-119), ಹಾನಗಲ್ ತಾಲೂಕು ಅಕ್ಕಿಲೂರಿನ 30 ವರ್ಷದ ಬಾಣಂತಿ(P-120) ಹಾಗೂ ಯಳ್ಳೂರು 45 ವರ್ಷದ ಮಹಿಳೆ(P-121), ಹಿರೇಕೆರೂರು ತಾಲೂಕಿನ ಮೇದೂರಿನ 40 ವರ್ಷದ ಮಹಿಳೆ (P-122)ಗೆ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ.
ಸೋಂಕು ದೃಢಪಟ್ಟಿರುವ ಕನವಳ್ಳಿ ಐದು ತಿಂಗಳ ಗರ್ಭಿಣಿ(25 ವರ್ಷ) ತನ್ನ ತಂದೆ-ತಾಯಿ, ಅಣ್ಣಂದಿರು ಮತ್ತು ಗಂಡನೊಂದಿಗೆ ವಾಸವಾಗಿದ್ದು, ಗಂಡ ಮೆಣಸಿನಕಾಯಿ ವ್ಯಾಪಾರಿಯಾಗಿದ್ದಾರೆ. ಇವರ ಪ್ರಯಾಣದ ವಿವರ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಅಕ್ಕಿಆಲೂರಿನ ನಿವಾಸಿಯಾದ 30 ವರ್ಷದ ಮಹಿಳೆ ಹೆರಿಗೆಗಾಗಿ ಅದೇ ಗ್ರಾಮದ ಮಾಳೋದೆ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂದರ್ಭದಲ್ಲಿ ಕೋವಿಡ್-19 ಪರೀಕ್ಷೆಗೆ ಗಂಟಲು ಮಾದರಿ ಸಂಗ್ರಹಿಸಿ ಲ್ಯಾಬ್ ಕಳುಹಿಸಲಾಗಿತ್ತು. ಹೆರಿಗೆಯ ನಂತರ ಜುಲೈ 1 ರಂದು ಈಕೆಯ ಲ್ಯಾಬ್ ವರದಿ ಪಾಸಿಟಿವ್ ಬಂದಿದೆ. ಸೋಂಕಿನ ಮೂಲ ಪತ್ತೆಹುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಯಳ್ಳೂರ ನಿವಾಸಿ 45 ವರ್ಷದ ಮಹಿಳೆ ತನ್ನ ಗಂಡ ಮಕ್ಕಳೊಂದಿಗೆ ವಾಸಿಸುತ್ತಿದ್ದು, ಈಕೆಯ ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಮೇದೂರ ಗ್ರಾಮದ 40 ವರ್ಷದ ಮಹಿಳೆ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಜೂನ್ 23 ರಂದು ರಾಣೇಬೆನ್ನೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ. ಜೂನ್ 29 ರಂದು ಮೇದೂರಿನಿಂದ ಶಿವಮೊಗ್ಗಕ್ಕೆ ತೆರಳಿ ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ಕಣ್ಣಿನ ಪರೀಕ್ಷೆಗೆ ತೆರಳಿರುತ್ತಾರೆ. ಸದರಿ ಆಸ್ಪತ್ರೆಯ ಸೂಚನೆ ಮೇರೆಗೆ ಶಿವಮೊಗ್ಗದಲ್ಲಿ ಪರೀಕ್ಷೆಗಾಗಿ ಗಂಟಲು ಮಾದರಿ ತೆಗೆಸಿರುತ್ತಾರೆ. ಲ್ಯಾಬ್ ವರದಿ ಬಂದ ನಂತರ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಮರಳಿ ಸ್ವ ಗ್ರಾಮಕ್ಕೆ ಬಂದಿರುತ್ತಾರೆ. ಜುಲೈ 1 ರಂದು ರಾತ್ರಿ ಸದರಿ ಮಹಿಳೆಯ ಗಂಟಲು ಮಾದರಿಯ ವರದಿ ಪಾಸಿಟಿವ್ ಬಂದಿರುವ ಕಾರಣ ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪರ್ಕದ ವಿವರವನ್ನು ಪತ್ತೆ ಮಾಡಲಾಗುತ್ತಿದೆ.
ಕನವಳ್ಳಿ, ಅಕ್ಕಿಆಲೂರು, ಯಳ್ಳೂರು ಹಾಗೂ ಮೇದೂರ ಗ್ರಾಮಗಳ ಸೋಂಕಿತರ ನಿವಾಸದ 100 ಮೀ.ಪ್ರದೇಶವನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ ಹಾಗೂ ಈ ನಾಲ್ಕು ಗ್ರಾಮಗಳನ್ನು ಬಫರ್ ಜೋನ್ ಆಗಿ ಪರಿಗಣಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲೂಕಾ ತಹಶೀಲ್ದಾರ ಅವರನ್ನು ನೇಮಕ ಮಾಡಲಾಗಿದೆ.
ಎಂಟು ಜನರ ಬಿಡುಗಡೆ: ಜೂನ್ 20 ರಂದು ಕೋವಿಡ್ ಸೋಂಕು ದೃಢಪಟ್ಟು ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾದ ಕಾರಣ ಗುರುವಾರ ಶಿಗ್ಗಾಂವಿ ಪಟ್ಟಣದ 23 ವರ್ಷದ ಪುರುಷ (P-8293), 16 ವರ್ಷದ ಮಹಿಳೆ (P-8294), 45 ವರ್ಷದ ಮಹಿಳೆ ( P-8642), 20 ವರ್ಷದ ಮಹಿಳೆ (P-8643), 15 ವರ್ಷದ ಮಹಿಳೆ (P-8644), 04 ವರ್ಷದ ಬಾಲಕ (P-8645), 60 ವರ್ಷದ ಪುರುಷ (P-8646), 40 ವರ್ಷದ ಪುರುಷ (P-8647) ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.00000

ಬೆಂಗಳೂರು 2 ಜುಲೈ (ಕರ್ನಾಟಕ ವಾರ್ತೆ)
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 11/06/2020ರ ಪತ್ರಿಕಾ ಪ್ರಕಟಣೆಯಲ್ಲಿ ಮರು ನಿಗದಿಪಡಿಸಲಾದ ಪರೀಕ್ಷೆಗಳನ್ನು ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ‘ಎ’ ವೃಂದದ ಸಹಾಯಕ ನಿಯಂತ್ರಕರು 54 ಹುದ್ದೆಗಳಿರುವ ಪರೀಕ್ಷೆ ದಿನಾಂಕ 17/08/2020 ರಂದು ಹಾಗೂ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 106 ಹುದ್ದೆಗಳ ಪರೀಕ್ಷಾ ದಿನಾಂಕ 24/08/2020ರಂದು ಮರು ನಿಗದಿಪಡಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ವಿದ್ಯುತ್ ಸರಬರಾಜು ನಿಗಮದ ಜಾಲತಾಣ ಬದಲಾವಣೆ
ಬೆಂಗಳೂರು 2ನೆ ಜುಲೈ (ಕರ್ನಾಟಕ ವಾರ್ತೆ)
ಕೇಂದ್ರ ಸರ್ಕಾರದ GIGW (Government of India Guidelines for Website) ºÁUÀÄ ¢ªÁåAUÀ ªÀUÀðzÀªÀgÀÄ (specially abled person)

ಜಾಲತಾಣವನ್ನು ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೇ ಇಲಾಖೆ(ಇ-ಆಡಳಿತ)ರವರ ನಿರ್ದೇಶನದಂತೆ ಹೊಸ ಜಾಲತಾಣವನ್ನು ರೂಪಿಸಲಾಗಿದೆ.
ಬೆವಿಕಂನ ಅಧಿಕೃತ ಜಾಲತಾಣವಾಗಿದ್ದ www.bescom.org §zÀ¯ÁV https://bescom.karnataka.gov.in ಅನ್ನು ಸಂಸ್ಥೆಯ ಅಧಿಕೃತ ಜಾಲತಾಣವಾಗಿ ಬದಲಿಸಲಾಗಿದೆ. ಆದುದರಿಂದ, ಬದಲಾಗಿರುವ ಜಾಲತಾಣದ ಕುರಿತು ಗ್ರಾಹಕರ ಮಾಹಿತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ

Change of official Website
Bengaluru, July 2 (Karnataka Information)

BESCOM has adopted the new website guidelines as per directions from Centre for e-Government (CeG) to implement Government of India Guidelines for Website (GIGW) and to facilitate specially abled to access the website easily.

      The official website of BESCOM which was earlier www.bescom.org   has now been changed by adopting the new guidelines to https://bescom.karnataka.gov.in. In this regard, the consumers and all the other visitors of website are requested to take note of the change in official website address of  BESCOM says official press release.

Bannerghatta Biological Park will remain opened for visitors on Tuesdays

Bengaluru, July 2 (Karnataka Information)

Vide order dated: 28-06-2020, State government has taken decision to Lockdown on every Sundays in the month of July, 2020 to prevent spreading of COVID-19. In view of this order the Bannerghatta Biological Park will be closed for visitors on Sundays on 5th ,12th ,19th & 26th of July, 2020. However the Bannerghatta Biological Park will remain opened for visitors on Tuesdays on 7th, 14th, 21st and 28th of July, 2020. Visitors are requested to cooperate in this regard.

ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನ ರಜೆ ಇಲ್ಲ

ಬೆಂಗಳೂರು 2ನೆ ಜುಲೈ (ಕರ್ನಾಟಕ ವಾರ್ತೆ)

ಕೋವಿಡ್-19 ಕರೋನಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿನಾಂಕ: 05-07-2020 ರಿಂದ ಮುಂದಿನ ನಾಲ್ಕು ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಮಾಡಲು ಸರ್ಕಾರ ಆದೇಶ ಸಂಖ್ಯೆ: ಕಂಇ 158 ಟಿಎನ್ಆರ್ 2020 ದಿನಾಂಕ: 28-06-2020 ರಂದು ಆದೇಶಿಸಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರತಿ ಭಾನುವಾರದ ರಜೆ ಘೋಷಿಸಿ, ಮಂಗಳವಾರಗಳಂದು ವೀಕ್ಷಕರ ವೀಕ್ಷಣೆಗೆ ತೆರೆಯಲು ಉದ್ದೇಶಿಸಲಾಗಿದೆ. ಆದುದರಿಂದ ಜುಲೈ ತಿಂಗಳ ದಿನಾಂಕ: 05, 12, 19 ಮತ್ತು 26 ರ ಭಾನುವಾರದಂದು ಸಾರ್ವಜನಿಕರ ವೀಕ್ಷಣೆಗೆ ಮುಚ್ಚಲಾಗಿರುತ್ತದೆ. ಬದಲಿಯಾಗಿ ಜುಲೈ ತಿಂಗಳ ಮಂಗಳವಾರಗಳಾದ ದಿನಾಂಕ: 7, 14, 21 ಮತ್ತು 28 ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೃಗಾಲಯದ ವೀಕ್ಷಕರು ಸಹಕರಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.

ಸಚಿವರ ಪ್ರವಾಸ
ಬೆಂಗಳೂರು 2ನೆ ಜುಲೈ (ಕರ್ನಾಟಕ ವಾರ್ತೆ)
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಅವರು ಜುಲೈ 3 ರಂದು ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ, ಅತ್ತಿಬೆಲೆಯ ಎಸ್.ಎಸ್.ಎಲ್.ಸಿ. ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಆಕ್ಷೇಪಣೆ ಸಲ್ಲಿಸಲು ಅವಕಾಶ
ಬೆಂಗಳೂರು 2ನೆ ಜುಲೈ (ಕರ್ನಾಟಕ ವಾರ್ತೆ)
2020 ನೆ ಜೂನ್/ಜುಲೈ ಮಾಹೆಯಲ್ಲಿ ನಡೆಸ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ದ್ವಿತೀಯ ಭಾಷಾ ವಿಷಯಗಳು, ಜೆ.ಟಿ.ಎಸ್. ಮತ್ತು ಪರ್ಯಾಯ ವಿಷಯಗಳು ಗಣಿತ ವಿಷಯ, ವಿಜ್ಞಾನ ವಿಷಯ ಹಾಗೂ ಸಮಾಜ ವಿಜ್ಞಾನ ವಿಷಯಗಳ ಮಾದರಿ ಉತ್ತರ ಹಾಗೂ Scheme of Evaluation PÀÄjvÀÄ ¢£ÁAPÀ 2-7-2020 gÀAzÀÄ ªÀÄAqÀ½AiÀÄ CAvÀeÁð® www.kseeb.kar.nic.in

ದಲ್ಲಿ ಪ್ರಕಟಿಸಲಾಗಿದೆ.
ಈ ಬಗ್ಗೆ ಆಕ್ಷೇಪಣೆ ಸಲ್ಲಿಸುವ ವಿದ್ಯಾರ್ಥಿಯು ಮಾದರಿ ಉತ್ತರ ಹಾಗೂ Scheme of Evaluation ಕುರಿತು ಆನ್‍ಲೈನ್ ಆಕ್ಷೇಪಣೆ ಸಲ್ಲಿಸಲು 3-7-2020 ರಿಂದ 5-7-2020 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.

ಕೆರೆಗಳ ಮನುಷ್ಯ ಶ್ರೀ ಕಾಮೇಗೌಡರಿಗೆ
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ‘ಜೀವಿತಾವಧಿಯವರೆಗೂ’ ಉಚಿತ ಬಸ್ ಪಾಸ್000000000

ಕಲಿಕಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ
ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ)
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19ನೇ ಸಾಲಿನಲ್ಲಿ ದ್ವಿತೀಯ ವರ್ಷದ ಸ್ನಾತಕ (ಬಿ.ಎ.,ಬಿ.ಕಾಂ.) ಮತ್ತು 2019-20(ಜುಲೈ ಆವೃತ್ತಿ) ಹಾಗು 2019-20(ಜನವರಿ ಆವೃತ್ತಿ)ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಸ್ನಾತಕ (ಬಿ.ಎ.,ಬಿ.ಕಾಂ.,ಬಿ.ಲಿಬ್.ಐ.ಎಸ್ಸಿ.) ಹಾಗೂ ಸ್ನಾತಕೋತ್ತರ (ಎಂ.ಎ.,ಎಂ.ಕಾಂ.,ಎಂ.ಎಸ್ಸಿ., ಎಂ.ಬಿ.ಎ., ಎಂ.ಲಿಬ್.ಐ.ಎಸ್ಸಿ.,ಬಿ.ಎಡ್.) ಕೋರ್ಸ್‍ಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡಿರುವ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಿಗೆ ದಿನಾಂಕ 03ಜುಲೆ ರಿಂದ 14 ಜುಲೈ 2020ರವರೆಗೆ ಕೆ.ಎಸ್.ಓ.ಯು. ಕನೆಕ್ಟ್ ಪ್ಲಾಟ್‍ಫಾರ್ಮ್ ನ ಮೂಲಕ ಆನ್‍ಲೈನ್‍ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿರುತ್ತದೆ.
ಕೌಶಲಾಭಿವೃದ್ಧಿತರಬೇತಿಯ ಪಠ್ಯವಿಷಯವನ್ನು ಕ.ರಾ.ಮು.ವಿ.ಯ ಅಂತರ್ಜಾಲದಲ್ಲಿ (www.ksoumysure.ac.in) ಪ್ರಕಟಿಸಲಾಗಿದ್ದು, ಕೌಶಲ್ಯಾಭಿವೃದ್ಧಿತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಗೆ ಈ-ಡಿಜಿಟಲ್ ಪ್ರಮಾಣಪತ್ರ ವನ್ನು ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ವಿತರಿಸಲಾಗುವುದೆಂದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಗೆ ಹಾಜರಾಗುವುದರ ಮೂಲಕ ಪಡೆದು ಕೊಳ್ಳುವಂತೆ ಪ್ರಾದೇಶಿಕ ನಿರ್ದೇಶಕರಾದ ಗಿರೀಶ್ ಹೆಚ್.ಎನ್.ರವರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ. ಬೆಂಗಳೂರು ಪ್ರಾದೇಶಿಕ ಕೇಂದ್ರ-1, ನಂ-61, 5ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ಕಛೇರಿ ದೂರವಾಣಿ ಸಂಖ್ಯೆ: 080-26603664 ಅಥವಾ 9611434810ಅನ್ನು ಸಂಪರ್ಕಿಸಬಹುದಾಗಿದೆ

ಕೋವಿಡ್-19 ಗೃಹ ದಿಗ್ಭಂಧನ ಕಾರ್ಯಪಡೆಯಿಂದ ತ್ವರಿತ ಕಾರ್ಯಾಚರಣೆ
ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ)
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಕೋವಿಡ್ – 19 ದೃಢಪಟ್ಟಿರುವಂತಹ ಪ್ರಕರಣಗಳ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕ ಹೊಂದಿರುವ ಕೆಲವು ವರ್ಗದ ಜನರು ಹಾಗೂ ಕರ್ನಾಟಕ ರಾಜ್ಯಕ್ಕೆ ಇತರೆ ರಾಜ್ಯಗಳಿಂದ ಪ್ರಯಾಣಿಸಿದಂತಹ ಜನರು ಕರ್ನಾಟಕ ಸರ್ಕಾರದ ಆದೇಶದಂತೆ ಗೃಹದಿಗ್ಭಂಧನದಲ್ಲಿ ಇರಬೇಕಾಗುವುದು.
ಅಂತಹ ವರ್ಗದ ಜನರು ನಿರ್ದಿಷ್ಟಪಡಿಸಿದಂತೆ 14 ದಿನಗಳವರೆಗೆ ಅಥವಾ ಯಾವುದೇ ಸೂಚಿಸಿರುವಂತಹ ಸ್ಪಷ್ಟದಿನಗಳವರೆಗೆ ಗೃಹದಿಗ್ಭಂಧನದಲ್ಲಿ ಇರಬೇಕಾಗಿರುತ್ತದೆ. ಸ್ವಯಂ ಪ್ರತ್ಯೇಕತೆ ಸಾಧ್ಯವಾಗದೇ ಇರುವಂತಹ ಸಂದರ್ಭದಲ್ಲಿ ಆ ಮನೆಯಲ್ಲಿ ವಾಸಿಸುತ್ತಿರುವ ಎಲ್ಲಾ ಸದಸ್ಯರನ್ನು ಸಂಪರ್ಕ ತಡೆಗೆ ಗೃಹದಿಗ್ಭಂಧನದಲ್ಲಿ ಇಡಬೇಕಾಗುತ್ತದೆ. ನೆರೆಹೊರೆಯವರ ಸುರಕ್ಷತೆ ಮತ್ತು ನಗರದ ಸುರಕ್ಷತೆಗಾಗಿ ಗೃಹ ದಿಗ್ಭಂಧನದಲ್ಲಿರುವ ಕುಟುಂಬಕ್ಕೆ ಯಾವುದೇ ಅಗತ್ಯ ವಸ್ತುಗಳು ಬೇಕಾದಲ್ಲಿ, ಅವರು ಸ್ಥಳೀಯ ಸ್ವಯಂ ಸೇವಕರನ್ನು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ 080- 45451111 ಗೆ ಕರೆ ಮಾಡಬಹುದು ಅಥವಾ ಟೆಲಿಗ್ರಾಂ/ವಾಟ್ಸ್‍ಅಪ್ ಸಂಖ್ಯೆ 9777777684 ಮೂಲಕ ಸಂಪರ್ಕಿಸಬಹುದಾಗಿದೆ.
ಹೋಮ್ ಕ್ವಾರೆಂಟೈನ್ ಅಡಿಯಲ್ಲಿರುವ ವ್ಯಕ್ತಿಯು ನಿರ್ಬಂಧವನ್ನು ಉಲ್ಲಂಘನೆ ಮಾಡಿ ಮನೆಯಿಂದ ಹೊರಗೆ ಕಂಡುಬಂದಲ್ಲಿ ಅಥವಾ ವ್ಯಕ್ತಿಯು ಮನೆಯಿಂದ ಹೊರಗೆ ಹೋಗಿದ್ದಾರೆ ಎಂಬುದಕ್ಕೆ ಸೂಕ್ತ ಸಾಂದರ್ಭಿಕ ಪುರಾವೆಗಳಿದ್ದರೆ, ಅದು ಐಪಿಸಿ 1860 ರ ಸೆಕ್ಷನ್ 188 ಅಡಿಯಲ್ಲಿ ಅಪರಾಧವಾಗುತ್ತದೆ
ಈ ಕಾರ್ಯದಲ್ಲಿ ತೊಡಗಿರುವ ಸರ್ಕಾರದ ಅಧಿಕಾರಿ, ಸಿವಿಲ್ ಡಿಫೆನ್ಸ್, ಹೋಮ್ ಗಾರ್ಡ್ ಅಥವಾ ಹೋಂ ಕ್ವಾರಂಟೈನ್ ತಂಡದಿಂದ ನೇಮಕಗೊಂಡ ಸ್ವಯಂಸೇವಕರು, ಅಂತಹ ಯಾವುದೇ ಉಲ್ಲಂಘನೆಯನ್ನು ಹತ್ತಿರದ ಪೋಲೀಸ್ ಠಾಣೆಗೆ ನಮೂನೆಯಲ್ಲಿ ವರದಿ ಮಾಡಬಹುದಾಗಿದೆ. ಯಾವುದೇ ಅಪರಾಧವನ್ನು ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ತಿಳಿಸುವುದು ಪ್ರತಿಯೊಬ್ಬ ನಾಗರೀಕರ ಹಕ್ಕುಗಳಲ್ಲಿ ಒಂದಾಗಿರುತ್ತದೆ. ಆದ್ದರಿಂದ, ಈ ಕಾರ್ಯಕ್ಕಾಗಿ ಪ್ರತ್ಯೇಕವಾಗಿ ಅಧಿಕಾರ ಪ್ರತ್ಯಾಯೋಜನೆ ಮಾಡುವ ಅಗತ್ಯವಿರುವುದಿಲ್ಲ.
ಉಲ್ಲಂಘನೆ ಬಗ್ಗೆ, ಪೋಲೀಸರಿಗೆ ದೂರು ನೀಡಿದ ನಂತರ, ಪೋಲೀಸ್ ಅಧಿಕಾರಿಯಿಂದ ಸ್ವೀಕೃತಿ ಪಡೆಯುವುದು, ಒಂದು ವೇಳೆ ಸ್ವೀಕೃತಿಯನ್ನು ಪಡೆಯಲಾಗದಿದ್ದರೆ ನಮ್ಮ 24/7 ನಿಯಂತ್ರಣ ಕೊಠಡಿ 080-45451111 ಸಂಖ್ಯೆಗೆ ಕರೆ ಮಾಡಬಹುದು ಅಥವಾ ಸ್ಥಳೀಯ ವಾಟ್ಸ್‍ಅಪ್ ಗುಂಪಿನಲ್ಲಿ 9777777684 ಸಹಾಯ ಪಡೆಯಬಹುದು.
ಯಾವುದೇ ಅಧಿಕಾರಿಗಳು, ಸ್ವಯಂಸೇವಕರು ಗರಿಷ್ಠ ಸಂಖ್ಯೆಯ ಉಲ್ಲಂಘನೆಗಳ ಬಗ್ಗೆ ಪೊಲೀಸರಿಗೆ ವರದಿ ಮಾಡುತ್ತಾರೋ ಅಂಥಹವರನ್ನು ಮನೆ ಸಂಪರ್ಕಪಡೆ ತಂಡವು ಗುರುತಿಸಿ ಪ್ರಶಂಸಿಸುತ್ತದೆ ಎಂದು ಗೃಹದಿಗ್ಭಂಧನ ಕಾರ್ಯಪಡೆಯ ಪ್ರಕಟಣೆ ತಿಳಿಸಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ)
ಕರ್ನಾಟಕ ಲೋಕಸೇವಾ ಆಯೋಗವು ನಡೆಸಲಿರುವ ಕರ್ನಾಟಕ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗೆ ಅಭ್ಯರ್ಥಿಗಳು ಬೆಂಗಳೂರು ಕೇಂದ್ರಕ್ಕೆ ಹೊರ ರಾಜ್ಯಗಳಿಂದ ಮತ್ತು ಬೇರೆ ಜಿಲ್ಲೆಗಳಿಂದ ಆಗಮಿಸಬೇಕಿರುವುದರಿಂದ, ಸಾರಿಗೆ ಸಂಪರ್ಕ ಸಮರ್ಪಕವಾಗಿಲ್ಲದಿರುವುದರಿಂದ ಹಾಗೂ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ:07-07-2020ರ ಮಂಗಳವಾರ ನಡೆಯಲಿರುವ ಪರೀಕ್ಷೆಯನ್ನು ಮುಂಜಾಗ್ರತಾ ಕ್ರಮವಾಗಿ ಮುಂದೂಡಿದೆ.
ಮುಂದಿನ ದಿನಾಂಕದ ವೇಳಾಪಟ್ಟಿಯನ್ನು ನಂತರದ ದಿನಗಳಲ್ಲಿ ಆಯೋಗದ ಅಂತರ್ಜಾಲ http://kpsc.kar.nic.in

ರಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪರೀಕ್ಷೆ ಮೂಂದೂಡಿಕೆ0000000

ಕೇಂದ್ರ ಗ್ರಂಥಾಲಯದ ಸಿಬ್ಬಂಧಿಗಳಿಗೆ ಆಯುಷ್ ಔಷಧಿ ವಿತರಣೆ
ಮೈಸೂರು, ಜುಲೈ,02(ಕರ್ನಾಟಕ ವಾರ್ತೆ):- ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಮೈಸೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಆಯುಷ್ ಔಷಧಿಗಳನ್ನು ಸಿಬ್ಬಂದಿಗಳಿಗೆ ವಿತರಿಸಿದರು.
ಮೈಸೂರಿನ ಆಯುಷ್ ಇಲಾಖೆಯ ವೈದ್ಯರುಗಳಾದ ಡಾ. ರಾಘವೇಂದ್ರ ಮತ್ತು ಡಾ. ಸ್ವರ್ಣಲತಾ ರವರು ಮೈಸೂರು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸೀತಾಲಕ್ಷ್ಮೀ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯಗಳ ಸಿಬ್ಬಂದಿಗಳಿಗೆ ಹಾಗೂ ಮಂಡಕಳ್ಳಿ ವಿಮಾನ ನಿಲ್ದಾಣ, ಇಲ್ಲಿ ಗಡಿ ಭಾಗದ ಚೆಕ್ ಪೋಸ್ಟ್(ಬಿ.ಆರ್.ಸಿ) ಮಟ್ಟದಲ್ಲಿ ಕೋವಿಡ್-19 ಸಂಬಂಧ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಇಲಾಖೆಯು ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಕೋವಿಡ್-19 ರೋಗನಿರೋಧಕ ಆಯುಷ್ ಔಷಧಿಗಳನ್ನು ವಿತರಿಸುವುದರ ಜೊತೆಗೆ ಔಷಧಿಗಳ ಬಳಕೆಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಮಂಜುನಾಥ್ ಬಿ. ರವರು ಉಪಸ್ಥಿತರಿದ್ದರು. 

ಕೋವಿಡ್ ನಿಯಂತ್ರಣಕ್ಕೆ ಶೇ.100 ರಷ್ಟು ಐಎಲ್‍ಐ ಪ್ರಕರಣಗಳ ತಪಾಸಣೆ ಕಡ್ಡಾಯ

ಧಾರವಾಡ (ಕರ್ನಾಟಕ ವಾರ್ತೆ) ಜುಲೈ 02: ದೇಶದಾದ್ಯಂತ್ಯ ವೇಗವಾಗಿ ವ್ಯಾಪಿಸುತ್ತಿರುವ ಕೊರೊನಾ ನಿಯಂತ್ರಣಕ್ಕೆ ಕೆಮ್ಮು, ನೆಗಡಿ, ತೀವ್ರ ಜ್ವರ (ಐಎಲ್‍ಐ) ಮತ್ತು ತೀವ್ರ ಉಸಿರಾಟದ ತೊಂದರೆ (ಎಸ್‍ಎಆರ್‍ಐ) ಲಕ್ಷಣಗಳಿರುವ ಎಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸುವುದು ಅವಶ್ಯವಾಗಿದೆ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ದಾಖಲಾಗುವ ಈ ಎಲ್ಲ ಪ್ರಕರಣಗಳನ್ನು ಶೇ.100 ರಷ್ಟು ತ್ವರಿತವಾಗಿ ತಪಾಸಣೆಗೊಳಪಡಿಸಬೇಕು. ಅಗತ್ಯವಿರುವ ವಾಹನ ಮತ್ತು ಇತರ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರೊನಾ ಹರಡುವಿಕೆ ನಿಯಂತ್ರಿಸಲು ತ್ವರಿತ ತಪಾಸಣೆ ಅತೀ ಮುಖ್ಯವಾಗಿದೆ. ಜಿಲ್ಲೆಯ ಸರ್ಕಾರಿ ಮತ್ತು ಕೆಪಿಎಂಇ ನೊಂದಾಯಿತ ಆಸ್ಪತ್ರೆಗಳಲ್ಲಿ ಪ್ರತಿದಿನ ವರದಿಯಾಗುವ ಐಎಲ್‍ಐ ಹಾಗೂ ಎಸ್‍ಎಆರ್‍ಐ ಪ್ರಕರಣಗಳನ್ನು ಪೋರ್ಟಲ್‍ನಲ್ಲಿ ದಾಖಲಾದ ಕೂಡಲೇ ಆ ವ್ಯಕ್ತಿಗಳನ್ನು ಸಂಪರ್ಕಿಸಿ ಸಮೀಪದ ಮೂಗು ಮತ್ತು ಗಂಟಲು ದ್ರವ ಸಂಗ್ರಹಣಾ ಕೇಂದ್ರದಲ್ಲಿ ಪ್ರಯೋಗಾಲಯದ ಮಾದರಿಯನ್ನು ಪಡೆಯಬೇಕು. ಈ ಕಾರ್ಯಕ್ಕೆ ವಾಹನಗಳ ಅಗತ್ಯವಿದ್ದರೆ ಜಿಲ್ಲಾಡಳಿತ ಒದಗಿಸಲಿದೆ ಎಂದರು.

ಹೋಂಕ್ವಾರಂಟೈನ್ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಪಟ್ಟಿಯನ್ನು ಪ್ರತಿದಿನ ಪೊಲೀಸ್‍ರಿಗೆ ಕಳುಹಿಸಲಾಗುತ್ತಿದೆ. ಅವರ ಮೇಲೆ ನಿಗಾ ವಹಿಸುವ ಪ್ರಕ್ರಿಯೆ ಚುರುಕಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಬಿ.ಸಿ. ಸತೀಶ್ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನಿರಾಕರಿಸಬಾರದು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಅರ್ಹ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಯಶವಂತ ಮದೀನಕರ ಮಾತನಾಡಿ, ಜಿಲ್ಲೆಯ ಕಿಮ್ಸ್‍ನಲ್ಲಿ 160, ಎಸ್‍ಡಿಎಂನಲ್ಲಿ 4, ಹಾಗೂ ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ನಲ್ಲಿ 22 ಸೇರಿ ಒಟ್ಟು 186 ಸಕ್ರಿಯ ಪ್ರಕರಣಗಳು ಇವೆ. ಜುಲೈ 1 ರಂದು ವರದಿಯಾದ ತೀವ್ರ ಉಸಿರಾಟದ ತೊಂದರೆ ಇರುವ ಎಲ್ಲಾ 8 ಪ್ರಕರಣಗಳು ಹಾಗೂ 90 ಐಎಲ್‍ಐ ಪ್ರಕರಣಗಳಲ್ಲಿ 75 ಪ್ರಕರಣಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಕಿಮ್ಸ್‍ನ ಡಾ: ಲಕ್ಷ್ಮೀಕಾಂತ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಎಸ್.ಕೆ. ಮಾನಕರ, ಡಾ: ಸುಜಾತಾ ಹಸವೀಮಠ, ಡಾ: ಶಶಿ ಪಾಟೀಲ, ಡಾ: ಎಸ್.ಎಂ. ಹೊನಕೇರಿ, ಡಾ: ತನುಜಾ, ಡಾ: ಶಶಿಕಲಾ ನಿಂಬಣ್ಣವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ : ಇಲ್ಲಿನ ಜಿಲ್ಲಾಸ್ಪತ್ರೆಗೆ ನೂತನ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಅವರು ಭೇಟಿ ನೀಡಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ 100 ಹಾಸಿಗೆಗಳ ಸಾಮಥ್ರ್ಯದ ನವಜಾತ ಶಿಶುಗಳ ಆಸ್ಪತ್ರೆ ಹಾಗೂ 115 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆಯ ತಜ್ಞವೈದ್ಯರು, ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಶಿವಕುಮಾರ ಮಾನಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ: ಯಶವಂತ ಮದೀನಕರ, ಕೆ.ಹೆಚ್.ಎಸ್. ಆರ್‍ಡಿಪಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಸುರೇಶ್ ಮತ್ತಿತರರು ಇದ್ದರು.000000

ಗೃಹ ದಿಗ್ಬಂಧನ ಉಲ್ಲಂಘನೆ: 3 ಪ್ರಕರಣ ದಾಖಲು


ಯಾದಗಿರಿ, ಜುಲೈ 02 (ಕರ್ನಾಟಕ ವಾರ್ತೆ): ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರಿಗೆ ಗೃಹ ದಿಗ್ಬಂಧನದಲ್ಲಿ ಇರುವಂತೆ ಸೂಚನೆ ನೀಡಿದರೂ ಸರ್ಕಾರದ ಆದೇಶವನ್ನು ಪಾಲಿಸದೆ ಕೊರೊನಾ ವೈರಸ್ ಹರಡಿಸುವ ದುರುದ್ದೇಶದಿಂದ ಹೊರಗಡೆ ತಿರುಗಾಡುವುದು ಕಂಡುಬಂದಿರುವ ಪ್ರಯುಕ್ತ ಜಿಲ್ಲೆಯ ಕೆಂಭಾವಿ ಲಕ್ಷ್ಮೀ ನಗರ, ಏವೂರು ತಾಂಡಾ (ಬಿ) ಹಾಗೂ ಹೈಯ್ಯಾಳ (ಕೆ) ಗ್ರಾಮದ ವ್ಯಕ್ತಿಗಳ ವಿರುದ್ಧ ಒಟ್ಟು ಮೂರು ಪ್ರಕರಣ ದಾಖಲಾಗಿವೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊರ ರಾಜ್ಯದಿಂದ ಆಗಮಿಸಿದ ವಲಸೆಗಾರರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ನಿಗದಿತ ಅವಧಿ ಮುಕ್ತಾಯಗೊಂಡ ನಂತರ ಗೃಹ ದಿಗ್ಬಂಧನ ಅವಲೋಕನೆಗಾಗಿ ಕೇಂದ್ರ/ರಾಜ್ಯ ಸರ್ಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರದಂತೆ ಸ್ಟ್ಯಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಿ ಗೃಹ ದಿಗ್ಬಂಧನಕ್ಕಾಗಿ ಕಳುಹಿಸಲಾಗುತ್ತಿದೆ. ಆದರೆ, ಸುರುಪುರ ತಾಲ್ಲೂಕಿನ ಲಕ್ಷ್ಮೀ ನಗರ ಕೆಂಭಾವಿಯಲ್ಲಿ ಮತ್ತು ಏವೂರು ತಾಂಡಾ (ಬಿ) ಗೃಹ ದಿಗ್ಬಂಧನದಲ್ಲಿರುವ ವಲಸೆಗಾರರು ಮನೆ ಬಿಟ್ಟು ಹೊರಗಡೆ ತಿರುಗಾಡುವುದು ಕಂಡುಬಂದಿರುವ ಪ್ರಯುಕ್ತ ಸದರಿ ಆರೋಪಿಗಳ ಮೇಲೆ ಗುನ್ನೆ ನಂಬರ್:0105/2020 ಮತ್ತು 0104/2020 ಕಲಂ: 188, 269, 270ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿವೆ. ಅದೇ ರೀತಿ ವಡಗೇರಾ ತಾಲ್ಲೂಕಿನ ಹೈಯಾಳ (ಬಿ) ಹೋಬಳಿಯ ಹೈಯಾಳ (ಕೆ) ಗ್ರಾಮದ ಆರೋಪಿಗಳ ಮೇಲೆ ಗುನ್ನೆ ನಂಬರ್: 0179/2020 ಕಲಂ: 188ರ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಮೂರು ಪ್ರಕರಣಗಳು ತನಿಖೆ ಹಂತದಲ್ಲಿರುತ್ತವೆ. ಈ ಆರೋಪಿಗಳನ್ನು ಪುನಃ ಸಾಂಸ್ಥಿಕ ದಿಗ್ಬಂಧನದ ಅವಲೋಕನೆಗಾಗಿ ಇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಗೃಹ ದಿಗ್ಬಂಧನ ಅವಲೋಕನೆಗಾಗಿ ಇರುವ ಜನರು, ತಮ್ಮ ಅವಲೋಕನಾ ಅವಧಿ ಮುಗಿಯುವವರೆಗೆ ಕಡ್ಡಾಯವಾಗಿ ಗೃಹ ದಿಗ್ಬಂಧನದಲ್ಲಿ ಇರತಕ್ಕದ್ದು. ಒಂದು ವೇಳೆ ಗೃಹ ದಿಗ್ಬಂಧನ ಬಿಟ್ಟು ಹೊರಗಡೆ ತಿರುಗಾಡಿದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಹಾಗೂ ಅಂತವರನ್ನು ಮತ್ತೆ ಸಾಂಸ್ಥಿಕ ದಿಗ್ಬಂಧನದಲ್ಲಿ ಅವಲೋಕನೆಗಾಗಿ ಇರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕಾಗಿ ಅವರು ಕೋರಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ
ಕೋಲಾರ, ಜುಲೈ 02 (ಕರ್ನಾಟಕ ವಾರ್ತೆ): ನಂ. 135-300

ರಾಜ್ಯಾದ್ಯಂತ ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲೆಯಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಖಾಂತರ ತಮ್ಮ ಆಸ್ಪತ್ರೆಗಳನ್ನು ದಾಖಲಿಸಿಕೊಂಡು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.000000

ದಾವಣಗೆರೆ ವಾರ್ತಾಇಲಾಖೆ

60 ವರ್ಷ ಮೇಲ್ಪಟ್ಟವರು ಆರ್‍ಟಿಓ ಗೆ ಪ್ರವೇಶ ಬೇಡ
ದಾವಣಗೆರೆ ಜು.02 (ಕರ್ನಾಟಕ ವಾರ್ತೆ)-
ಕೋವಿಡ್-19 ವೈರಾಣು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಆದೇಶದಂತೆ ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಾವಳಿ 1989 ಇವುಗಳಿಗೆ ಸಂಬಂಧಿಸಿದಂತೆ ದಿನಾಂಕ: 01-02-2020 ರ ನಂತರ ಅವಧಿ ಮುಕ್ತಾಯಗೊಳ್ಳುವ ವಾಯಿದೆಯನ್ನು ಸಿಂಧುತ್ವ ಹೊಂದಿದ ಅವಧಿ ಎಂದು ಪರಿಗಣಿಸಿ ದಿ: 30-09-2020 ರವರೆಗೆ ವಿಸ್ತರಿಸಲಾಗಿರುತ್ತದೆ. (ಅರ್ಹತಾ ನವೀಕರಣ, ಪರಾವನಿಗೆ, ಎಲ್.ಎಲ್, ಡಿ.ಎಲ್, ನೋಂದಣಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಇತರೆ)

ಆದ ಕಾರಣ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಆಗಮಿಸುತ್ತಿದ್ದಾರೆ. ಡಿ.ಎಲ್ ನವೀಕರಣ ಮತ್ತು ಡಿ.ಎಲ್ ಗೆ ಸಂಬಂಧಿಸಿದ ಇತರೆ ಕೆಲಸಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ಸಹಿ ಮತ್ತು ಬಯೋಮೆಟ್ರಿಕ್ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಡಿ.ಎಲ್ ಹಾಗೂ ಇತರೆ ಸೇವೆಗಳಿಗೆ ಹಾಜರಾಗದಂತೆ ತಿಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಜಿ.ಎಸ್.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೊವಿಡ್

ಹಾಸನ ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ ಸಾವು.ಮೃತರ ಸಂಖ್ಯೆ 5ಕ್ಕೆ ಏರಿಕೆ

ಹಾಸನ. ಜು 2: (ಕರ್ನಾಟಕ ವಾರ್ತೆ)
ಹಾಸನ‌ ಜಿಲ್ಲೆಯಲ್ಲಿ ಮತ್ತೊಂದು ಕೊವಿದ್ ಸಾವು ಸಂಭವಿಸಿದೆ .
ಇದರೊಂದಿಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.
ಇಂದು ಚನ್ನರಾಯ ಪಟ್ಟಣದ 65 ವರ್ಷದ ಪುರುಷ ಸೋಂಕಿತ ಮೃತಪಟ್ಟಿದ್ದಾರೆ.
ಕಳೆದ‌ ರಾತ್ರಿ 12:45ಕ್ಕೆ ಖಾಸಗಿ ಆಸ್ಪತ್ರೆಯಿಂದ ರೆಫರ್ ಅಗಿ ಕೊವಿದ್ ಆಸ್ಪತ್ರೆಗೆ ಬಂದಿರುತ್ತಾರೆ . ಬೆಳಿಗ್ಗೆ 7:45am ಗೆ ಸಾವು ಸಂಭವಿಸಿದೆ .ಮೃತರು ಮಧುಮೇಹ ರೋಗದಿಂದ ಬಳಲುತ್ತಿದ್ದರು. ಸೋಂಕಿತರ ಸ್ವಾಬ್ ತೆಗೆಯಲಾಗಿತ್ತು .
ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ‌ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆShare