ಮೈಸೂರು ಆದೇಶ ಯಾವಕಾರಣ , ಕರ್ನಾಟಕ ಸರ್ಕಾರವು ಜಾಗತಿಕ ಸೋಂಕಾಗಿರುವ ಕೋವಿಡ್ -19 ರೋಗವು ರಾಜ್ಯದಲ್ಲಿ ಹರಡುವುದನ್ನು ನಿಯಂತ್ರಣ ಮಾಡಲು ಹಾಗೂ ಉಂಟಾಗುವ ಅನಾರೋಗ್ಯ ಸ್ಥಿತಿ ಮತ್ತು ಮರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ . ಯಾವಕಾರಣ , ಕೋವಿಡ್ -19 ರೋಗವು ಕಂಡುಬಂದ ನಂತರ ಭಾರತ ಸರ್ಕಾರದ ಒಟ್ಟಾರೆ ಮಾರ್ಗದರ್ಶನದಡಿಯಲ್ಲಿ ಆರೋಗ್ಯ ಸಂಸ್ಥೆಗಳು ಮತ್ತು ಆರೋಗ್ಯ ರಕ್ಷಣಾ ಸಿಬ್ಬಂದಿಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಅಧಿಸೂಚನೆಗಳು , ಪ್ರಮಾಣೀಕೃತ ಕಾರ್ಯಾಚರಣಾ ಪ್ರಕ್ರಿಯೆಗಳು , ಸುತ್ತೋಲೆಗಳು ಮತ್ತು ಲಿಖಿತ ಸ್ಪಷ್ಟಿಕರಣಗಳನ್ನು ನೀಡಲಾಗಿದೆ . ಯಾವಕಾರಣ , ಬಹುಮಹಡಿ ವಸತಿ ಸಮುಚ್ಚಯಅಥವಾ ಮನೆಯಲ್ಲಿರುವ ಸ್ವತಂತ್ರವಾದ ಮತ್ತು ಸೂಕ್ತ ಪ್ರತ್ಯೇಕ ಕೊಠಡಿ ಲಭ್ಯತೆಯನ್ನು ಅವಲಂಬಿಸಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಮನೆಯಲ್ಲಿ ಪ್ರತ್ಯೇಕಗೊಳಿಸುವಿಕೆಗೆ ( Home Isolation ) ಸಂಬಂಧಿಸಿದಂತೆ ಸರ್ಕಾರವು ವಿವರವಾದ ಮಾರ್ಗಸೂಚಿಗಳು ಮತ್ತು ಪ್ರಮಾಣೀಕೃತಿ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ನೀಡಿದೆ . ಯಾವಕಾರಣ , ರಾಜ್ಯದಲ್ಲಿ ಕೋವಿಡ್ -19 ರೋಗವು ಕಾಣಿಸಿಕೊಂಡ ಕೂಡಲೇ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರು , ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಲು ಸಂಬಂಧಿಸಿದಂತೆ ಮಾರ್ಗಸೂಚಿಗಳು , ಪ್ರಮಾಣೀಕೃತ ಕಾರ್ಯಾಚರಣ ಪ್ರಕ್ರಿಯೆಗಳು ಮಾಹಿತಿ , ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳನ್ನು ವಿನ್ಯಾಸಗೊಳಿಸಿ ನೀಡಲಾಗಿದೆ . ಯಾವಕಾರಣ , ಕೋವಿಡ್ ಪಾಸಿಟಿವ್ ವ್ಯಕ್ತಿಗಳು , ಪ್ರಥಮ ಸಂಪರ್ಕಿತರು ಹಾಗೂ ಅಂತರರಾಜ್ಯ ಪ್ರಯಾಣಿಕರು ನೀಡಿದ ಮಾರ್ಗಸೂಚಿಗಳು ಮತ್ತು ಪ್ರಮಾಣೀಕೃತ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು , ಈ ಕಾರಣದಿಂದ ದುರ್ಬಲರು ಮತ್ತು ಜನಸಮುದಾಯಕ್ಕೆ ಸೋಂಕು ಹರಡಿ ಸಮಾಜಕ್ಕೆ ಸುಧಾರಿಸಲಾಗದ ಹಾನಿ ಉಂಟಾಗುವ ಸಂಭವವಿರುತ್ತದೆ .. ಆದಕಾರಣ , ಸಾರ್ವಜನಿಕ ಆರೋಗ್ಯ ಮತ್ತು ಕ್ಷೇಮದ ಹಿತದೃಷ್ಟಿಯಿಂದ ಪ್ರಯಾಣಿಕರು , ಕೋವಿಡ್ -19 ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡುವುದನ್ನು ಖಾತ್ರಿ ಪಡಿಸಲು ಮತ್ತು ನೀಡಲಾದ ಸೂಚನೆಗಳನ್ನು ಅನುಸರಣೆ ಮಾಡಲು ಅನುವಾಗುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿ ಕೆಳ ಸಹಿ ಮಾಡಿರುವ ನಾನು ಸದರಿ ಕಾಯ್ದೆಯಲ್ಲಿನ ಮತ್ತು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ( 1897 ರಲ್ಲಿನ ಕೇಂದ್ರಿಯ ಕಾಯ್ದೆ ಸಂಖ್ಯೆ 3 ) ನಿಯಮಾವಳಿಗಳಿಗನುಸಾರವಾಗಿ ಕಟ್ಟುನಿಟ್ಟಾದ ಹೋಂ ಕ್ವಾರಂಟೈನ್‌ನ್ನು ಕಡ್ಡಾಯವಾಗಿ ಪಾಲಿಸಲು ನಿರ್ಬಂಧಿಸುತ್ತೇನೆ .ತಪ್ಪಿದ ವ್ಯಕ್ತಿಗಳಿಗೆ ಏಕ ಪಕ್ಷೀಯವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ -2005 , ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ -1897 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಯತಕ್ಕದ್ದು .