ರಾಮ್ದಾಸ್ ಅವರ ಹೆಸರು ಉಪಯೋಗಿಸಿಕೊಂಡು ಪ್ರಚಾರ ಪಡೆಯುತ್ತಿರುವ ಎಂಕೆಎಸ್

Share

Press Meet against Ex-MLA Somashekar

ಪತ್ರಿಕಾ ಗೋಷ್ಠಿಯ ವಿವರ

ದಿನಾಂಕ: 12.05.2020

ರಾಮದಾಸ್ ಹೆಸರಿನಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಮಾಜಿ ಶಾಸಕ ಎಂ.ಕೆ.ಎಸ್

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ರವರು, ಶಾಸಕರಾದ ರಾಮದಾಸ್ ರವರ ಮೇಲೆ ಮನಬಂದಂತೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಪ್ರಚಾರಗಿಟ್ಟಿಸಿಕೊಳ್ಳುವ ತಂತ್ರವಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಎಂ.ವಡಿವೇಲು ಕಿಡಿಕಾರಿದ್ದಾರೆ.

ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿ ನಗರಪಾಲಿಕೆ ಸದಸ್ಯರಾಗಿ ಗೆದ್ದು, ಸರ್ಕಾರಕ್ಕೆ ಸುಳ್ಳು ಪತ್ರವನ್ನು ನೀಡಿ ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಎಜೆನ್ಸಿ ಹೊಂದಿರುವ ಎಂ.ಕೆ.ಸೋಮಶೇಖರ್ ರವರಿಂದ ಶಾಸಕರಾದ ಎಸ್.ಎ.ರಾಮದಾಸ್ ರವರು ಪಾಠ ಕಲಿಯಬೇಕಿಲ್ಲ.

ಬಿಜೆಪಿ ಯವರು ರಾಮದಾಸ್ ಅವರನ್ನು ಸೋಲಿಸುವ ಪ್ರಯತ್ನ ಮಾಡಿದಾಗ ನಾನು ಗೆಲ್ಲುತ್ತೇನೆ ಅದಕ್ಯಾಕೆ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ನಂಬಿರುವ ಕುತಂತ್ರಿ, ಭಾರತೀಯ ಜನತಾ ಪಾರ್ಟಿಯ ಆಂತರೀಕ ಬಿನ್ನಭಿಪ್ರಾಯಗಳಿಂದ 2 ಬಾರಿ ಶಾಸಕರಾಗಿ ಕ್ಷೇತ್ರದ ಸಮಸ್ಯೆ ಬಗೆಹರಿಸಲು 10 ವರ್ಷಗಳ ಕಾಲಾವಕಾಶ ಇದ್ದರು, ಅವರ ಗುರುಗಳು ಹಾಗೂ ಸ್ಯೂಯೇಜ್ ಫಾರಂನಲ್ಲಿ ಕಸದ ಘಟಕ ತಂದ ರುವಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಡಳಿತದ ಅವಧಿಯಲ್ಲಿ ಸ್ಯೂಯೇಜ್ ಫಾರಂ ಸಮಸ್ಯೆಯನ್ನು ಕಿಂಚಿತ್ತು ಬಗೆಹರಿಸದೆ ಕಾಲಹರಣ ಮಾಡಿದ ಎಂ.ಕೆ.ಸೋಮಶೇಖರ್ ಇಂದು ರಾಮದಾಸ್ ರವರನ್ನು ಕೆಣಕುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ನಡೆಸುತಿದ್ದಾರೆ.

ಸೋಮಶೇಖರ್ ಶಾಸಕರಾಗಿದ್ದಾಗ ಅವರೇ ಆಶ್ರಯ ಸಮಿತಿಯ ಅಧ್ಯಕ್ಷರಾಗಿ ಒಂದೊತ್ತು ಕಡುಬಡವರಿಗೆ ಆಶ್ರಯ ಮನೆ ನೀಡುವುದಾಗಿ 5,000 ದಿಂದ 10,000 ರುಪಾಯಿ ಹಣವನ್ನು ಲಂಚ ಪಡೆದಿದ್ದು ಸ್ಟ್ರಿಂಗ್ ಆಪರೇಶನ್ ನಿಂದ ಬಹಿರಂಗ ಗೊಂಡಿದ್ದು ಕ್ಷೇತ್ರದ ಜನತೆ ಇನ್ನೂ ಮರೆತಿಲ್ಲಾ ಹಾಗೂ ಲಂಚ ನೀಡಿದವರು ಶಾಪ ಹಾಕುವುದು ನಿಲ್ಲಿಸಿಲ್ಲಾ.

ಕಳೆದ ಚುನಾವಣೆಯಲ್ಲಿ ನಿಮ್ಮ ಘನಸಾಧನೆ ಏನೆಂಬುದನ್ನು ಕ್ಷೇತ್ರದ ಜನತೆ 26,395 ಮತಗಳ ಅಂತರದಿಂದ ಸೋಲಿಸಿ “ನಾಲಾಯಕ್ ಸೋಮ” ಎಂಬ ತೀರ್ಪುನ್ನು ಅರಗಿಸಿಕೊಳ್ಳಲಾಗದೆ ಮಾನಸೀಕ ಸ್ತಿಮಿತ ಕಳೆದುಕೊಂಡು ಹತಾಶರಾಗಿ ಈ ರೀತಿ ಹೇಳಿಕೆ ನೀಡಿತ್ತಿದ್ದಾರೆ.

ಮೈಸೂರಿಗೆ ಅಂಬೇಡ್ಕ್ರರ್ ಭವನ, ಆಶ್ರಯ ಮನೆಗಳು, ಕಬಿನಿ ಕುಡಿಯುವ ನೀರಿನ ಯೋಜನೆ, ಜನೌಷಧಿ ಕೇಂದ್ರ, ಜಯದೇವ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಬಾಬು ಜಗಜೀವನ್ ರಾಮ್ ಭವನ,ಮೃಗಾಲಯದ ಅಭಿವೃದ್ದಿ, ಮಂಡಕಳ್ಳಿಯಲ್ಲಿ ಮತ್ತು ಮಹದೇವಪುರ ಗೇಟ್ ಬಳಿ ಗುಡಿಸಲು ನಿವಾಸಿಗಳಿಗೆ ಕೊಳಚೆ ನಿರ್ಮೂಲನ ಮಂಡಳಿವತಿಯಿಂದ ಜಿ+3 ಮನೆಗಳ ನಿರ್ಮಾಣ, ಜಯನಗರ ಆಸ್ಪತ್ರೆ ಉನ್ನತೀಕರಣ, ಮುಕ್ತ ವಿ.ವಿ ಯ ಯುಜಿಸಿ ಮಾನ್ಯತೆ ಹಾಗೂ ಇನ್ನು ಹತ್ತು ಹಲವಾರು ಯೋಜನೆಯನ್ನು ತಂದಿರುವ ರುವಾರಿಯಾದ ಕ್ರಿಯಾಶೀಲ ಶಾಸಕ ರಾಮದಾಸ್ ರವರ ಬಗ್ಗೆ ಏಕವಚನದಲ್ಲಿ ಟೀಕಿಸಿರುವ ತಮಗೆ “ನಾಲಾಯಕ್ ಸೋಮ” ಎಂಬ ಟೈಟಲ್ ಸೂಕ್ತವೆನಿಸಿದೆ. ಕಳೆದ ಚುನಾವಣೆಯಲ್ಲಿನ ಜನತೆಯ ತೀರ್ಪಿಗೆ ಹತಾಶ ಮತ್ತು ದಿಗ್ಭ್ರಾಂತರಾಗಿ ಜನತೆಯ ತೀರ್ಪಿನ ವಿರುದ್ದವೇ ಬಾಲಿಶವಾಗಿ ಇ.ವಿ.ಎಂ ಹ್ಯಾಕ್ ಆಗಿದೆ ಎಂದು ನಿರಾಧಾರವಾಗಿ ಘನ ನ್ಯಾಯಲಯದಲ್ಲಿ ದಾವೆ ಹೂಡಿ ಇದುವರೆಗೂ ಘನ ನ್ಯಾಯಲಯಕ್ಕೆ 1 ಬಾರಿಯೂ ಹಾಜರಾಗದೆ ವಿನಾ ಕಾರಣ ಕಾಲ ಹರಣ ಮಾಡುತ್ತಿರುವ ತಾವು ರಾಮದಾಸ್ ರವರ ರಾಜಿನಾಮೆ ಕೇಳಿರುವುದು ನಾಚಿಕೆಗೇಡಿನ ಸಂಗತಿ.

ಕೊರೋನದಂತಹ ಮಾರಕ ವೈರಸ್ ಮೈಸೂರು ನಗರವನ್ನು ಆವರಿಸಿರುವ ಸಂದರ್ಭದಲ್ಲಿ ಮೈಸೂರು ನಗರದ ಕಲ್ಯಾಣ ಮಂಟಪಗಳ ಸಂಘದ ಅಧ್ಯಕ್ಷರಾಗಿರುವ ತಾವು ಇದುವರೆಗೂ ಕಲ್ಯಾಣ ಮಂಟಪಕ್ಕೆ ಮುಂಗಡವಾಗಿ ಹಣ ನೀಡಿ ಕಾಯ್ದಿರಿಸಿರುವ ಜನರಿಗೆ ಅವರ ಮುಂಗಡ ಹಣವನ್ನು ವಾಪಸ್ ನೀಡಬೇಕೆಂದಿದ್ದರೂ ಸಹ ಮುಂಗಡವಾಗಿ ಕಾಯ್ದಿರಿಸಿರುವವರಿಗೆ ಹಣ ವಾಪಸ್ ನೀಡದೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ತಮ್ಮ ಅಪ್ರಮಾಣಿಕತೆಗೆ ಹಿಡಿದ ಕೈಗನ್ನಡಿಯಾಗಿದೆ.

ಇಂತಹ ಮನಸ್ಥಿತಿಯ ನೀವು ಸ್ಯೂಯೇಜ್ ಫಾರಂ ನಲ್ಲಿ ಕಸ ವಿಲೆವಾರಿ ಘಟಕ ಸ್ಥಾಪಿಸಿರುವುದು ಸದರಿ ಜಾಗವನ್ನು ದಾನ ನೀಡಿದ ಮೈಸೂರು ರಾಜ ವಂಶಸ್ಥರ ಒಡಂಬಡಿಕೆಯಲ್ಲಿದೆಯೆ, ಇದೇ ಸ್ಥಳದಲ್ಲಿ ಕಸವಿಲೇವಾರಿ ಘಟಕ ಇರಬೇಕೋ ಅಥವಾ ರಾಯನಕೆರೆಗೆ ಸ್ಥಳಾಂತರವಾಗಬೇಕೊ ……….? ಎಂಬ ನನ್ನ ಒಂದು ಪ್ರಶ್ನೆಗೆ ಉತ್ತರ ನೀಡಿ, ನಂತರ ನನ್ನ ಜೊತೆ ನೇರ ಸಂವಾದಕ್ಕೆ ಬನ್ನಿ ಆನಂತರ ಶಾಸಕ ರಾಮದಾಸ್ ರವರ ಬಳಿ ಸಂವಾದ ನಡೆಸುವ ತಾಕತ್ತು ಬೆಳೆಸಿಕೊಳ್ಳುವರಂತೆ.


Share