ರಾಷ್ಟ್ರಧ್ವಜಕ್ಕೆ ಅವಮಾನ: ಮಮತಾಗೆ ಸಿಗಲಿಲ್ಲ ಸಮಾಧಾನ

Share

2022 ರಲ್ಲಿ ಮುಂಬೈ ಕಾರ್ಯಕ್ರಮವಂದರಲ್ಲಿ ರಾಷ್ಟ್ರಗೀತೆ ಹಾಡುತಿರುವ ಸಮಯ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ರಾಷ್ಟ್ರಗೀತೆಯನ್ನು ನಿಂತು ಹಾಡದೆ, ಕುಳಿತುಕೊಂಡು ಹಾಡಿ ನಂತರ ಗೀತೆ ಮುಗಿಯುವುದರೊಳಗೆ ಹೊರಟುಹೋದ ಪ್ರಸಂಗ ಒಂದರಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನಿಸಿದರೆಂಬ ಕಾರಣಕ್ಕೆ ಅವರ ವಿರುದ್ಧ ವ್ಯಕ್ತಿಯೋರ್ವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದರಿಂದ ವಿಚಲಿತರಾದ ಮಮತಾ ತಮಗೆ ನ್ಯಾಯಾಲಯ ರಿಯಾಯಿತಿ ನೀಡಬೇಕೆಂದು ಕೋರಿ ಹುಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಅವರ ಕೋರಿಕೆಯನ್ನು ಮುಂಬೈನ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ವಿವೇಕಾನಂದ ಗುಪ್ತ ಎಂಬ ಸಾಮಾಜಿಕ ಕಾರ್ಯಕರ್ತ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಮಮತಾ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಲು ನ್ಯಾಯಾಲಯ ಸಮನ್ಸ್‌ ನೀಡಿತ್ತು.
ಇದನ್ನು ರದ್ದುಪಡಿಸುವಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ಮಮತಾ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಸಮನ್ಸ್‌ ಅನ್ನು ರದ್ದುಪಡಿಸಿದ್ದ ಸೆಷನ್ಸ್‌ ನ್ಯಾಯಾಲಯ, ಪ್ರಕ್ರಿಯೆಯಲ್ಲಿ ಕೆಲವೊಂದು ಲೋಪಗಳಾಗಿವೆ ಎಂದು ತಿಳಿಸಿತ್ತು. ಆಗ ಮಮತಾ ಉಚ್ಚ ನ್ಯಾಯಾಲಯ ಮೆಟ್ಟಿಲು ಹತ್ತಿ ರಿಯಾಯಿತಿ ಬಯಸಿದ್ದರು.


Share