ರಾಷ್ಟ್ರಧ್ವಜ, ಮತ್ತು ರಾಷ್ಟ್ರಗೀತೆಯ ಬಗ್ಗೆ ಅರಿವು ಮೂಡಿಸಿದ ವಿಕ್ರಮ ಅಯ್ಯಂಗಾರ್.

Share

ಮೈಸೂರು .ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪೂರ್ವ ಅಂಗವಾಗಿ ಸಾರ್ವಜನಿಕರಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ರಾಷ್ಟ್ರಧ್ವಜ ಹಿಡಿದು ಅರಿವು ಮೂಡಿಸಲಾಯಿತು
ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ
ಮನೆಯಲ್ಲಿ ಧ್ವಜಾರೋಹಣಕ್ಕೆ ಮನವಿ
ಮಹಾಮಾರಿ ಕೋರೋನಾ ಹಿನ್ನೆಲೆಯಲ್ಲಿ ಮನೆಯಲ್ಲೇ ಸ್ವಾತಂತ್ರ್ಯ ದಿವಸ್ ಆಚರಿಸಿ.ಅಕ್ಕಪಕ್ಕದ ಜನರೊಂದಿಗೆ ಸೇರಿ ರಾಷ್ಟ್ರಭಕ್ತರ ಕುರಿತು ನಾವು ಒಳ್ಳೆಯ ಮಾತುಗಳನ್ನು ಆಡಬೇಕಿದ್ದು. ಮನೆಯ ಕಿಟಕಿ. ಗೇಟಿಗೆ ಧ್ವಜ ಕಟ್ಟಿ ಗೌರವ ಸಲ್ಲಿಸಬೇಕು,

ರಾಷ್ಟ್ರದ್ವಜವನ್ನು ಇತರ ಉದ್ದೇಶಕ್ಕೆ ಬಳಸಿದರೆ ಶಿಕ್ಷೆ ಪಡೆಯುವಿರಿ ಎಚ್ಚರ.
ರಾಷ್ಟ್ರದ್ವಜದ ರೀತಿಯ ಮಾಸ್ಕ್ ತೆಗೆದುಕೊಳ್ಳುವ ಮುನ್ನ ಯೋಚಿಸಿ.
ಭಾರತದ ರಾಷ್ಟ್ರಧ್ವಜ ಕಾನೂನು 2002 ಇಸವಿಯಲ್ಲಿ ಭಾರತದ ರಾಷ್ಟ್ರದ್ವಜ ಹೇಗಿರಬೇಕು ಹೇಗಿರಬಾರದು ಮತ್ತು ನಿರ್ದಿಷ್ಟವಾಗಿ ಯಾವ ಉದ್ದೇಶಕ್ಕೆ ಮಾತ್ರ ಬಳಸಬಹುದು ಎಂಬಿತ್ಯಾದಿ ವಿಷಯಗಳನ್ನು ಒಳಗೊಂಡಂತೆ ನಿಯಮ ರೂಪಿಸಲಾಗಿದೆ ಮತ್ತು ಆ ನಿಯಮವನ್ನು ಕಾನೂನು ಮಾಡಲಾಗಿದೆ..
ಆದುರಿಂದ ಭಾರತದ ರಾಷ್ಟ್ರದ್ವಜವನ್ನು ವ್ಯಾಪರ ಉದ್ದೇಶಕ್ಕೆ, ಮನಬಂದಂತೆ ಇತರ ಉದ್ದೇಶಕ್ಕೆ ತಯಾರಿಸುವುದು , ಬಳಸುವುದು (ಯಾರೋ ಒಬ್ಬ ಅಥವಾ ಕಂಪನಿ ರಾಷ್ಟ್ರದ್ವಜವನ್ನು ಹೋಲುವ ಮಾಸ್ಕ್ ತಯಾರಿಸಿದೆ) ಶಿಕ್ಷಾರ್ಹ ಅಪರಾಧವಾಗಿದೆು
ರಾಷ್ಟ್ರದ್ವಜದಂತಿರುವ ಮಾಸ್ಕನ್ನಾಗಲಿ,ಪ್ಲಾಸ್ಟಿಕ್ ದ್ವಜವನ್ನಾಗಲಿ ತಯಾರಿಸುವುದು, ಎಲ್ಲೆಲ್ಲಿ ಬಿಸಾಕುವುದು, ಮಾರುವುದು ಮಾತ್ರವಲ್ಲದೆ ಅಂತಹುದನ್ನು ಜನ ಪಡೆಯುವುದು ಕೂಡ ಗಂಭೀರ ಶಿಕ್ಷೆ ವಿಧಿಸಬಹುದಾದಂತ ಅಪರಾಧ.. ಇದು ನೆನಪಿರಲಿ.
ದಯಮಾಡಿ ಸಾರ್ವಜನಿಕರು
ಮಾರ್ಕೆಟ್ ನಲ್ಲಿ ರಾಷ್ಟ್ರಧ್ವಜದ ಮಾಸ್ಕ್ ಬಂದಿವೆ, ದಯವಿಟ್ಟು ಯಾರೂ ಅಂತಹ ಮಾಸ್ಕ್ ನ್ನು ಕೊಳ್ಳ ಬೇಡಿ.
ಕೊಂಡು ಧರಿಸಿ, ಮಾತಾಡುವಾಗ ಉಗಳು, ಶೀನು ಸಿಡಿಸಿ ನಂತರ ಅದನ್ನ ಬಿಸಾಕಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಬೇಡಿ. ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜ ರಾಷ್ಟ್ರಗೀತೆ ನಾಡಗೀತೆಗಳ ಕುರಿತು ಅರಿವು ಮೂಡಿಸಬೇಕು
ಪ್ರತಿಯೊಬ್ಬರೂ ಪ್ರತಿದಿನವೂ ರಾಷ್ಟ್ರೀಯ ಕಾರ್ಯಕ್ರಮವೆಂದು ಭಾವಿಸಿ ರಾಷ್ಟ್ರಪ್ರೇಮವನ್ನು ಅಳವಡಿಸಿಕೊಳ್ಳುವುದರೊಂದಿಗೆ ರಾಷ್ಟ್ರಧ್ವಜ ರಾಷ್ಟ್ರಗೀತೆಗೆ ಗೌರವ ತೋರಬೇಕು.ಮಕ್ಕಳಿಗೆ ರಾಷ್ಟ್ರಗೀತೆ ನಾಡಗೀತೆಯನ್ನು ಆಡುವುದರೊಂದಿಗೆ ಅವುಗಳ ಅರ್ಥ ಹಾಗೂ ಮಹತ್ವವನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಕಾರ್ಯನಿರತರಾಗಬೇಕು
ರಾಷ್ಟ್ರಗೀತೆ ನಾಡಗೀತೆ ವ೦ದೇ ಮಾತರಂ ಗೀತೆ
ಧ್ವಜಗೀತೆ ಹಾಗೂ ರೈತಗೀತೆಗಳನ್ನು ಹಾಡುವ ರಾಗ ಲಯ ತಾಳ ಸಮಯ ಹಾಗೂ ಅವುಗಳ ಅರ್ಥವನ್ನು ಶಿಕ್ಷಕರು ಮನಮುಟ್ಟುವಂತೆ ಪ್ರಾಯೋಗಿಕ ತರಬೇತಿ ನೀಡಬೇಕು ಎಂದು ಹೇಳಿದರು
ನಂತರ ಮಾತನಾಡಿದ ನಗರಪಾಲಿಕೆ ಸದಸ್ಯರಾದ ಮಾ ವಿ ರಾಂಪ್ರಸಾದ್ ಪ್ಲಾಸ್ಟಿಕ್ ಧ್ವಜ ಬೇಡ
ಪ್ಲಾಸ್ಟಿಕ್ ಧ್ವಜ ಬೇಡ
ದೇಶಾದ್ಯಂತ ಪ್ಲಾಸ್ಟಿಕ್ ಮತ್ತು ಕಾಗದದಲ್ಲಿ ತಯಾರಿಸಿದ್ದ ತ್ರಿವರ್ಣ ಧ್ವಜದ ಬಳಕೆ ಮತ್ತು ಮಾರಾಟ ಮಾಡದಂತೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೆರಿದೆಯಾದರೂ ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜಗಳ ಬಳಕೆ ಮತ್ತು ಮಾರಾಟ ಇನ್ನು ನಿಲ್ಲುವಂತೆ ಕಾಣುತ್ತಿಲ್ಲ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದಂದು ದೇಶಾದ್ಯಂತ ಸರ್ಕಾರಿ ಶಾಲಾ ಕಾಲೇಜು ಸಂಘ ಸಂಸ್ಥೆಗಳಲ್ಲಿ ಶುದ್ಧ ಖಾದಿಯಿಂದ ತಯಾರಿಸಿದ ಧ್ವಜಗಳನ್ನು ಹಾರಿಸುತ್ತಾರೆ ಆದರೆ ಶಾಲಾ ಮಕ್ಕಳ ಕೈಯಲ್ಲಿ ಹೆಚ್ಚಾಗಿ ಕಾಗದ ಅಥವಾ ಪ್ಲಾಸ್ಟಿಕ್‌ ನಿಂದ ತಯಾರಿಸಿದ ಧ್ವಜಗಳು ಕಂಡು ಬರುತ್ತಿದೆ ಮಾರುಕಟ್ಟೆಯಲ್ಲಿ ಇವುಗಳ ಮಾರಾಟವೇ ಅಧಿಕವಾಗಿದೆ.ಕಡಿಮೆ ಬೆಲೆಗೆ ಸಿಗುವ ಈ ಪ್ಲಾಸ್ಟಿಕ್ ಧ್ವಜಗಳನ್ನು ಮಕ್ಕಳು ಖರೀದಿಸಿ ಕಾರ್ಯಕ್ರಮ ಮುಗಿದ ನಂತರ ಶಾಲಾ ಆವರಣದಲ್ಲಿ ಅಥವಾ ರಸ್ತೆ ಚರಂಡಿ ಪಕ್ಕದಲ್ಲಿ ಎಸೆದು ಬಿಡುತ್ತಾರೆ ಈ ಧ್ವಜಗಳು ತ್ಯಾಜ್ಯದಲ್ಲಿ ಸೇರಿ ತಿಪ್ಪೆಗುಂಡಿಯಲ್ಲಿ ಛಿದ್ರ ಛಿದ್ರವಾಗಿ ಬಿದ್ದಿರುತ್ತವೆ ಇಂತಹ ನಡುವಳಿಕೆ ಯಿಂದಾಗಿಯೇ ನಾವು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದಂತಾಗುತ್ತದೆ ಆದ್ದರಿಂದ ಪ್ರತಿಯೊಬ್ಬ ಭಾರತೀಯರು ಕೂಡ ಈ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ.ಈ ಸಂದರ್ಭದಲ್ಲಿ ಯಾರೂ ಪ್ಲಾಸ್ಟಿಕ್ ಹಾಗೂ ಕಾಗದದ ಧ್ವಜಗಳು ಬಳಸದಂತೆ ಹಾಗೂ ಮಾರಾಟ ಮಾಡದಂತೆ ರಾಷ್ಟ್ರಧ್ವಜದ ಮಹತ್ವದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕು
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ ,ನಗರ ಪಾಲಿಕೆ ಸದಸ್ಯರಾದ ಮಾ ವಿ ರಾಮಪ್ರಸಾದ್,ಉದ್ಯಮಿ ಅಪೂರ್ವ ಸುರೇಶ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ಮಧು ಎನ್ , ಸುಚೀಂದ್ರ,ರಾಕೇಶ್ ಕುಂಚಿಟಿಗ , ಎಸ್ ಎನ್ ರಾಜೇಶ್, ಜಯಸಿಂಹ ಶ್ರೀಧರ್,ಮೈ ಲ್ಲಾ ವಿಜಯ್ ಕುಮಾರ್,ಹಾಗೂ ಇನ್ನಿತರರು ಹಾಜರಿದ್ದರು


Share