ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ

Share


ರಕ್ತದಾನ ಮಹಾದಾನ ಗೋ ಭಕ್ತ ಸಂಘಟನೆ ಟ್ರಸ್ಟ್ ಹಾಗೂ ತೇರಾಪಂತ್ ಯುವಕ ಪರಿಷದ
ಮತ್ತು ಹಾಗೂ ಮೈಸೂರು ಹಿಮೋಫಿಲಿಯಾ ಸೊಸೈಟಿ ವತಿಯಿಂದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನುಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ
60 ಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಮೂಲಕ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು
ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ
ಡಾಕ್ಟರ್ ಅಸ್.ಕೆ.ಮಿತ್ತಲ್
ರಕ್ತದಾನಕ್ಕೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ರಕ್ತದಾನವೂ ಒಂದು ತುಂಬಾ ಶ್ರೇಷ್ಠ ದಾನವಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಸಮಾಜ ಸೇವಕರಾದ ಎಸ್ .ಕೆ.ಮಿತ್ತಲ್
ರಕ್ತದಾನ ಮಹಾದಾನ ಗೋ ಭಕ್ತ ಸಂಘಟನೆ ಹಾಗೂ ತೇರಾಪಂತ್ ಯುವಕ ಪರಿಷದ
ಈ ಸಂಘಟನೆಗಳಲ್ಲಿ
ನಗರದಲ್ಲಿ ಅನೇಕ ರಕ್ತದಾನಿಗಳು ಇದ್ದಾರೆ ಮತ್ತು ಇದರಲ್ಲಿ ಬಹಳಷ್ಟು ಹೊರ ಜಿಲ್ಲೆ ಹಾಗೂ ತಾಲ್ಲೂಕು ಹೋಗಿ ರಕ್ತದಾನ ಮಾಡಿ ಜೀವ ಉಳಿಸುತ್ತಿದ್ದಾರೆ ಇದು ತುಂಬಾ ಖುಷಿಯ ವಿಚಾರವಾಗಿದೆ ಮತ್ತು ನಮ್ಮ ನಗರದ ಅನೇಕ ಯುವಕರನ್ನು ಬಹಳಷ್ಟು ತಂಡ ರಚನೆ ಮಾಡಿ ತುರ್ತು ಪರಿಸ್ಥಿತಿಯಲ್ಲಿ ರಕ್ತವನ್ನು ಹೊಂದಿಸಿ ಕೊಡುತ್ತಿದ್ದಾರೆ ಇದು ನಿಜಕ್ಕೂ ಶ್ಲಾಘನೀಯವಾಗಿದೆ ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಯಂ ಮುಂದೆ ಬಂದು ರಕ್ತದಾನ ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆ ಹಾಗೆ ಜನರಲ್ಲಿ ರಕ್ತದಾನದ ಬಗ್ಗೆ ತಪ್ಪು ತಿಳಿವಳಿಕೆಗಳು ಇದೆ ಇದನ್ನು ನಾವು ಇಂತಹ ದಿನಾಚರಣೆಯ ಮೂಲಕ ಹೋಗಲಾಡಿಸಬೇಕು ವಿಶೇಷವಾಗಿ ನಾವು ಈ ಸಂದರ್ಭದಲ್ಲಿ ನಗರ ಮತ್ತು ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸ ಬೇಕಾಗಿದೆ ಅದರಲ್ಲೂ ನಮ್ಮ ಜೀವಧಾರ ರಕ್ತನಿಧಿ ಕೇಂದ್ರದ ವೈದ್ಯರು ಮತ್ತು ಎಲ್ಲ ಸಿಬ್ಬಂದಿಗಳು ಬಂದ ರಕ್ತದಾನಿಗಳನ್ನು ಹುರಿದು೦ಬಿಸಿ
ರಕ್ತದಾನಕ್ಕೆ ಉತ್ತೇಜಿಸುತ್ತಾರೆ,ಹಾಗೂ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಒಂದು ಉತ್ತಮವಾದ ಸ್ನೇಹಪರ ವಾತಾವರಣ ನಿರ್ಮಿಸುತ್ತಾರೆ ಎಂದು ಹೇಳಿದ್ದರು ಹಾಗೂ ಎಲ್ಲ ರಕ್ತದಾನಿಗಳಿಗೆ ಸ್ವಯಂಪ್ರೇರಿತ ರಕ್ತದಾನಿಗಳ ದಿನದ ಶುಭಾಶಯ ಕೋರಿದರು
ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಮುಂದಿನ ದಿನಗಳಲ್ಲಿ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಅಪರೂಪದ ರಕ್ತ ದಾನಿಗಳ ನೋಂದಣಿ
ಅಪರೂಪದ ರಕ್ತದ ಗುಂಪು ಹೊಂದಿರುವ ರೋಗಿಗಳ ಜೀವ ಉಳಿಸುವಲ್ಲಿ ಅಪರೂಪದ ರಕ್ತದಾನಿಗಳ ದಾಖಲೀಕರಣ ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹೇಳಿದರು.
‘ಅಪರೂಪದ ರಕ್ತದಾನಿಗಳ ನೋಂದಣಿ ಹಾಗೂ ದಾಖಲೀಕರಣ ದಕ್ಷಿಣ ಭಾರತದಲ್ಲೇ ಮೊದಲ ಪ್ರಯತ್ನವಾಗಿದೆ’
‘ಅಪರೂಪದ ರಕ್ತದ ಗುಂಪು ಹೊಂದಿರುವ ರೋಗಿಗಳಿಗೆ ರಕ್ತ ಪೂರೈಕೆಗೆ ತಗುಲುವ ಸಮಯವನ್ನು ಕಡಿಮೆ ಮಾಡಿ ರೋಗಿಯ ಜೀವ ಉಳಿಸಲು ನೋಂದಣಿ ಕಾರ್ಯ ನೆರವಾಗಲಿದೆ’
‘1000 ಜನರಲ್ಲಿ ಶೇ 1ಕ್ಕಿಂತ ಕಡಿಮೆ ಇರುವ ರಕ್ತದ ಗುಂಪನ್ನು ಅಪರೂದದ ರಕ್ತದ ಗುಂಪು ಎಂದು ಕರೆಯಲಾಗುತ್ತದೆ. ಪ್ರಾದೇಶಿಕವಾಗಿ ಅಪರೂಪದ ರಕ್ತದಾನಿಗಳ ವಿವರ ಕಲೆಹಾಕಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ನೆಗೆಟಿವ್ ರಕ್ತದ ಗುಂಪು ಹೊಂದಿರುವ ದಾನಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಾಯೋಗಿಕವಾಗಿ ಮಹತ್ವದ್ದಾಗಿರುವ 23 ವಿಧದ ಕೆಂಪು ರಕ್ತಕಣ ಪ್ರತಿಜನಕಗಗಳನ್ನು ಪರೀಕ್ಷಿಸಲಾಗಿದ್ದು, 26 ಅಪರೂಪದ ರಕ್ತದ ಫಿನೋಟೈಪ್‌ಗಳನ್ನು ಹೊಂದಿರುವ ಹಾಗೂ ಅಪರೂಪದ ರಕ್ತ ದಾನಿಗಳ ವಿವರವನ್ನು ಈಗಾಗಲೇ ನೋಂದಾಯಿಸಿಕೊಳ್ಳುತ್ತಿದ್ದಾ


Share