ರಾಷ್ಟ್ರ ಮಟ್ಟದ ಟೇಬಲ್ ಟೆನಿಸ್ ಮೈಸೂರು ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ*

Share

 

 

*ಮೈಸೂರಿನ ಹುಡುಗನಿಗೆ ರಾಷ್ಟ್ರ ಮಟ್ಟದ ಟೇಬಲ್ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ*

ನಗರದ 12 ವರ್ಷದ ಬಾಲಕ ಶಶಾಂಕ್ ಕೇಶವ್ ರಾವ್, ಫೆಬ್ರವರಿ 19 ರಿಂದ 27ರ ವರೆಗೆ ಕೇರಳದ ಅಲೆಪ್ಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ, 13 ವರ್ಷದ ಕೆಳಗಿನ ಬಾಲಕರ ಟೇಬಲ್ ಟೆನಿಸ್ ಟೂರ್ನಮೆಂಟ್ನಲ್ಲಿ ಕಂಚಿನ ಪದಕ ಗೆದ್ದಿರುತ್ತಾನೆ. ಈ ಗೆಲುವಿನೊಂದಿಗೆ ಶಶಾಂಕ್ ಈಗ ಭಾರತದ ಮಟ್ಟದಲ್ಲಿ 5 ನೇ ರಾಂಕ್ ಪಡೆದುಕೊಂಡಿರುತ್ತಾನೆ, ಹಾಗೆಯೇ ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನೂ ಪಡೆದುಕೊಂಡಿರುತ್ತಾನೆ.

ಶಶಾಂಕ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ತಮಿಳುನಾಡಿನ ರಿತ್ವಿಕ್ ಮೇಲೆ 3-0 ಜಯಗಳಿಸಿ, ನಂತರ ಕ್ವಾರ್ಟರ್ ಫೈನಲ್ನಲ್ಲಿ ಇಂಡಿಯಾ ನಂ 2, ಜಮ್ಮು ಕಾಶ್ಮೀರದ ರಿತ್ವಿಕ್ ಗುಪ್ತನನ್ನು 3-2 ರಿಂದ ಪರಾಭವಗೊಳಿಸಿ ಸೆಮಿ ಫೈನಲ್ ತಲುಪಿದ. ಆದರೆ ಬಂಗಾಳದ ಆದಿತ್ಯ ದಾಸ್ (ಇಂಡಿಯಾ ನಂ 2) ಮೇಲೆ ಸೆಮಿ ಫೈನಲ್ನಲ್ಲಿ ಉತ್ತಮವಾಗಿ ಆಡಿ, 1-3 ರಿಂದ ಪರಾಭವಗೊಂಡು ಕಂಚಿನ ಪದಕವನ್ನು ಪಡೆದ (7-11, 7-11, 11-9, 11-
13).

ಮೈಸೂರಿನ 13 ವರ್ಷದೊಳಗಿನ ಬಾಲಕನೊಬ್ಬ ರಾಷ್ಟ್ರ ಮಟ್ಟದಲ್ಲಿ ಈ ಸಾಧನೆ ಮಾಡಿರುವುದು ಇದೇ ಮೊದಲು. ಶಶಾಂಕ್ ಮೈಸೂರಿನ ವಿವೇಕಾನಂದನಗರದಲ್ಲಿರುವ ಆದಿತ್ಯ ಮಕ್ಕಳ ಕ್ಲಿನಿಕ್ನ ತಜ್ಞರಾದ ಡಾಕ್ಟರ್ ಸುಮಾ ರಾವ್ ಹಾಗೂ ಡಾಕ್ಟರ್ ಪ್ರಶಾಂತ್ ರಾವ್ ರವರ 2ನೇ ಪುತ್ರ. ಈತ ನಗರದ ಕೌಟಿಲ್ಯ ವಿದ್ಯಾಲಯದ 7ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಶಶಾಂಕ್ ಕಳೆದ 4 ವರ್ಷಗಳಿಂದ, ನಗರದ ಮಹರ್ಷಿ ಸ್ಕೂಲ್ನಲ್ಲಿರುವ OMTTA ಕ್ಲಬ್ ನಲ್ಲಿ ಶ್ರೀ ಅಕ್ಷಯ್ ಮಹಾಂತ(96864 75604) ರವರ ಕೆಳಗೆ ತರಬೇತಿ ಪಡೆಯುತ್ತಿದ್ದಾನೆ. ಹಾಗೆಯೇ ಕಳೆದ 2 ತಿಂಗಳಿನಿಂದ ಚೆನ್ನೈನ ITTC ಕ್ಲಬ್ ನಲ್ಲಿ ಶ್ರೀ ರಾಜೇಶ್ ರಾಮನಾಥನ್ ರವರ ಕೆಳಗೆ ಹೆಚ್ಚಿನ ತರಬೇತಿ ಪಡೆದಿದ್ದಾನೆ.

ಶಶಾಂಕ್ ಇನ್ನು 2 ವರ್ಷದೊಳಗೆ ಭಾರತದ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮುವ ಗುರಿ ಹೊಂದಿದ್ದಾನೆ.


Share