ರೆಡ್ ಕ್ರಾಸ್ ವತಿಯಿಂದ ಮಾಸ್ಕ್ ವಿತರಣೆ

276
Share

ರೆಡ್‍ಕ್ರಾಸ್ ಸಂಸ್ಥೆ ವತಿಯಿಂದ ಮಾಸ್ಕ್ ವಿತರಣೆ
ಹಾಸನ,ಜೂ.18(ಕರ್ನಾಟಕ ವಾರ್ತೆ):- ಮಾಸ್ಕ್ ದಿನಾಚರಣೆಯ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಪಿ. ಮೋಹನ್ ರವರ ನೇತೃತ್ವದಲ್ಲಿ ನಿರ್ದೇಶಕರುಗಳು ಎರಡು ತಂಡ ಹಾಸನ ನಗರದ ವಿವಿದೆಡೆ ಸಂಚರಿಸಿ ಆಟೋ ಚಾಲಕರಿಗೆ ಮಾಸ್ಕ್ ಹಾಗೂ ಜ್ಯೂಸ್ ವಿತರಿಸಿತು.
ನಿರ್ದೇಶಕರಾದ ಜಯೇಂದ್ರ, ಎಲ್.ಎಸ್. ನಿರ್ಮಲ, ಕೆ.ಟಿ. ಜಯಶ್ರೀ, ಮಹಾವೀರ ಬನ್ಸಾಲಿ, ಅಮ್ಜದ್ ಖಾನ್, ಕುಮಾರ್, ಶಬೀರ್ ಹಾಗೂ ಕಚೇರಿ ಮೇಲ್ವಿಚಾರಕರಾದ ಚಂದನ್, ಹರ್ಷಿತ್, ಚೇತನ್ ಮತ್ತು ಆಟೋ ಚಾಲಕರ ಸಂಘದ ದಿಲೀಪ್, ಪ್ರದೀಪ್ ಮತ್ತಿತರರು ಇದರಲ್ಲಿ ಪಾಲ್ಗೊಂಡಿದ್ದರು.Share