ರೈಲು ಕೋಚ್ ನಲ್ಲಿ ಕೆಫೆಟೇರಿಯಾ

ಪುನಶ್ಚೇತನಗೊಂಡ ಮೈಸೂರು ರೈಲು ಸಂಗ್ರಹಾಲಯದಲ್ಲಿ ರೈಲು ಕೋಚ್ ಕೆಫೆಟೇರಿಯಾ

ಮೈಸೂರಿನಲ್ಲಿರುವ ರೈಲ್ವೆ ವಸ್ತುಸಂಗ್ರಹಾಲಯವು ಸಂಪೂರ್ಣ ಬದಲಾವಣೆ ಕಂಡಿದೆ. ಪುನರುಜ್ಜೀವಿತ ಸಂಗ್ರಹಾಲಯವು ಪ್ರದರ್ಶಿತ ವಸ್ತುಗಳು ಮತ್ತು ವಿನ್ಯಾಸಗಳಲ್ಲಿ ಮಾತ್ರವಲ್ಲದೆ ಅದರ ಸಂಗ್ರಹ ಮತ್ತು ಮರು-ಕಲ್ಪಿತ ಭೂದೃಶ್ಯದ ವಿಷಯಗಳಲ್ಲೂ ಗುಣಾತ್ಮಕ ಮಾನದಂಡವನ್ನು ಹೆಚ್ಚಿನ ಸ್ತರದಲ್ಲಿ ನಿಗದಿಪಡಿಸುವ ಗುರಿಯನ್ನು ಹೊಂದಿದೆ.

ಇತ್ತೀಚಿನ ದಿನಗಳಲ್ಲಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಸ್ಥಿರತೆಯಿದ್ದೂ, ಭಾರತೀಯ ರೈಲ್ವೆಯ ವಿಕಾಸದ ಕಥೆಯನ್ನು ಜೀವಂತವಾಗಿ ಹೊರತಂದಿರುವ ರೀತಿಗೆ ಹಲವಾರು ಸಂದರ್ಶಕರು ಬಹಳಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿ ಸೃಷ್ಟಿಸಿರುವ ಮನಸೆಳೆಯುವ ಅದ್ಭುತ ವಾತಾವರಣಕ್ಕೆ ಪಾರಂಪರಿಕ ಬೋಗಿ ಮತ್ತು ರೈಲುಗಾಡಿಗಳಿಗೆ ಸಮಕಾಲೀನ ಕಲೆ, ಬಹುಮಾಧ್ಯಮ, ವಿಡಿಯೋ ಮತ್ತು ಧ್ವನಿಯನ್ನು ಅಳವಡಿಸಿರುವುದು ಪರಿಪೂರ್ಣವಾಗಿದೆ.

ಪರಿಷ್ಕರಿಸಿದ ರೈಲ್ವೆ ಸಂಗ್ರಹಾಲಯದ ಹಲವು ಹೊಸ ವೈಶಿಷ್ಟ್ಯಗಳಲ್ಲಿ ಕೋಚ್ ರೆಸ್ಟೋರೆಂಟ್ ಸಹ ಒಂದಾಗಿದೆ. ಹಿಂದಿನ ಯುಗದ ಉಗಿ ಲೋಕೋಮೋಟಿವ್‌ಗಳು, ಪುರಾತನ ಹೆಂಚಿನ ಹೊದಿಕೆಯ ಶೈಲಿಯಲ್ಲಿ, ಅಪ್ರತಿಮವಾದ, ದಾರಿಪಕ್ಕದ ರೈಲ್ವೆ ನಿಲ್ದಾಣದ ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ಗಳ ಭಾವನೆಯೊಂದಿಗೆ, ಹಸಿರು ಸುರಂಗಮಾರ್ಗ ಮತ್ತು ಸೊಂಪಾದ ಹಸಿರಿನ ಹಿನ್ನೆಲೆಯಲ್ಲಿ ಸುಂದರವಾದ ಆಂಫಿಥಿಯೇಟರ್‌ನಂತಹ ಹಲವಾರು ಹೊರಾಂಗಣ ಪ್ರದರ್ಶನಗಳ ಅದ್ಭುತ ನೋಟವನ್ನು ಪ್ರವಾಸಿಗರು ಆನಂದಿಸಲಿದ್ದಾರೆ.

ಉಸಿರುಮರೆಸುವ ನೋಟವುಳ್ಳ ಒಳಾಂಗಣವನ್ನು ಹೊಂದಿರುವಂತೆ ಹೇಳಿ ಮಾಡಿಸಿದಂತಿರುವ ಕೋಚ್ ರೆಸ್ಟೋರೆಂಟ್ ಒಂದು ಬಾರಿಗೆ ಮೂರರಿಂದ ನಾಲ್ಕು ಕುಟುಂಬಗಳಿಗೆ ಆತಿಥ್ಯ ವಹಿಸಬಲ್ಲದು. ಶುಚಿಯಾಗಿ ಆರೋಗ್ಯಕರವಾಗಿ ತಯಾರಿಸಿದ ತಿಂಡಿಗಳು / ಲಘು ಉಪಹಾರಗಳು ಮತ್ತು ಇಲ್ಲಿ ನೀಡಲಾಗುವ ಕಾಫಿ ಮತ್ತು ಚಹಾದಂತಹ ಪಾನೀಯಗಳನ್ನು ಆನಂದಿಸಲು ಪ್ರವಾಸಿಗರಿಗೆ ಇದೊಂದು ಪ್ರಪಂಚದ ಹೊರಗಿನಂತಹ ಅನುಭವವಾಗಿರುವುದು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮತ್ತು ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ (ಎಸ್‌.ಡಬ್ಲ್ಯು.ಆರ್‌.ಡಬ್ಲ್ಯು.ಡಬ್ಲ್ಯು.ಒ.)ಯ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಗರ್ಗ್ ಅವರು ಇಂದು ಕೋಚ್ ರೆಸ್ಟೋರೆಂಟ್ ಅನ್ನು ಉದ್ಘಾಟಿಸಿದರು. ಈ ಕೋಚ್ ರೆಸ್ಟೋರೆಂಟ್ ಎಸ್‌.ಡಬ್ಲ್ಯು.ಆರ್‌.ಡಬ್ಲ್ಯು.ಡಬ್ಲ್ಯು.ಒ. ನ ಪದಾಧಿಕಾರಿಗಳ ಆಶ್ರಯದಲ್ಲಿ ‘ಲಾಭರಹಿತ-ನಷ್ಟವಿಲ್ಲದ’ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದೂ, ಈ ಸಂದರ್ಭದಲ್ಲಿ ಅದರ ಪದಾಧಿಕಾರಿಗಳು ಹಾಗು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

(ಪ್ರಿಯಾ ಶೆಟ್ಟಿ)
ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ,
ನೈಋತ್ಯ ರೈಲ್ವೆ, ಮೈಸೂರು.