ರೈಲ್ವೆಯು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 22 ರವರೆಗೆ (05 ಪ್ರಯಾಣಗಳು) ‘ಕಿಸಾನ್ ವಿಶೇಷ’ ರೈಲಿನ ಸಾಪ್ತಾಹಿಕ ಸೇವೆ, ಒದಗಿಸಲಿದೆ.

Share

ಮೈಸೂರು ಮುಂಬರುವ ವರ್ಷಗಳಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನೈಋತ್ಯ ರೈಲ್ವೆಯು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 22 ರವರೆಗೆ (05 ಪ್ರಯಾಣಗಳು) ‘ಕಿಸಾನ್ ವಿಶೇಷ’ ರೈಲಿನ ಸಾಪ್ತಾಹಿಕ ಸೇವೆಯನ್ನು ಒದಗಿಸಲಿದೆ. ಕಿಸಾನ್ ವಿಶೇಷ ರೈಲು ಪ್ರತಿ ಶನಿವಾರ 16.45 ಗಂಟೆಗೆ ಕೆ.ಎಸ್.ಆರ್. ಬೆಂಗಳೂರಿನಿಂದ ಹೊರಟು 55 ಗಂಟೆಗಳಲ್ಲಿ ಒಟ್ಟು 2762 ಕಿ.ಮೀ. ದೂರವನ್ನು ಕ್ರಮಿಸಿ ಸೋಮವಾರ 23.45 ಗಂಟೆಗೆ ನಿಜಾಮುದ್ದೀನ್ ತಲುಪುತ್ತದೆ. ರೈಲು ತನ್ನ ಪ್ರಯಾಣದಲ್ಲಿ ಮೈಸೂರು, ಹಾಸನ, ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡಾ, ಬೆಳಗಾವಿ, ಮೀರಜ್, ಪುಣೆ, ಮನ್ಮಾಡ್, ಭೂಸಾವಲ್, ಇಟಾರ್ಸಿ, ಭೋಪಾಲ್, ಜಾನ್ಸಿ, ಆಗ್ರಾ ಕ್ಯಾಂಟ್ ಮತ್ತು ಮಥುರಾ ನಿಲ್ದಾಣಗಳಲ್ಲಿ ಲೋಡಿಂಗ್/ಅನ್ ಲೋಡಿಂಗ್ ಗಾಗಿ ನಿಗದಿತ ವೇಳೆಗೆ ನಿಲ್ಲುತ್ತದೆ. ವಾಪಸ್ಸಿನ ಪ್ರಯಾಣದಲ್ಲಿ ರೈಲು ಪ್ರತಿ ಮಂಗಳವಾರ 11.00 ಗಂಟೆಗೆ ಹಜರತ್ ನಿಜಾಮುದ್ದೀನ್ ನಿಂದ ಹೊರಟು ಮೇಲೆ ತಿಳಿಸಿದ ನಿಲ್ದಾಣಗಳಲ್ಲಿಯೆ ಲೋಡಿಂಗ್/ಅನ್ ಲೋಡಿಂಗ್ ನಡೆಸಿ ಗುರುವಾರ 19.45 ಗಂಟೆಗೆ ಬೆಂಗಳೂರಿಗೆ ತಲುಪುತ್ತದೆ.

ಕಿಸಾನ್ ರೈಲಿನ ಸೇವೆಯು ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಕಡೂರು, ದಾವಣಗೆರೆ, ತುಮಕೂರು, ಹುಬ್ಬಳ್ಳಿ, ಹಾವೇರಿ ಮತ್ತು ಇತರ ಜಿಲ್ಲೆಗಳ ರೈತರು ಮತ್ತು ವ್ಯಾಪಾರಿಗಳು ಬೇಗನೆ ಹಾಳಾಗುವ ತಮ್ಮ ಉತ್ಪನ್ನಗಳನ್ನು ದೂರದ ಸ್ಥಳಗಳಿಗೆ ತ್ವರಿತವಾಗಿ ಸಾಗಿಸುವ ಅಗತ್ಯತೆಗಳನ್ನು ಪೂರೈಸಲು ಅನುಕೂಲ ಮಾಡಿಕೊಡುತ್ತದೆ ಮತ್ತು ಇದು ದೇಶವ್ಯಾಪಿ ತಡೆರಹಿತ ಪೂರೈಕೆ ಸರಪಳಿಯನ್ನು ನಿರ್ಮಿಸುವ ನಿರೀಕ್ಷೆಯಿದೆ. ಸಣ್ಣ ರೈತರು ಅಥವಾ ವ್ಯಾಪಾರಿಗಳು ಈ ರೈಲಿನಲ್ಲಿ ಯಾವುದೇ ಕನಿಷ್ಟ ಮಿತಿಯಿಲ್ಲದೆ ಸಾಗಿಸಲು ತಮ್ಮ ಸರಕುಗಳನ್ನು ಕಾಯ್ದಿರಿಸಬಹುದು ಮತ್ತು ಈ ರೈಲಿನ ನಿಲುಗಡೆಯ ಯಾವುದೇ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ಕಾಯ್ದಿರಿಸಬಹುದು – ಸಂಪೂರ್ಣ ಸ್ವಾತಂತ್ರ್ಯ ನೀಡುತ್ತದೆ. ಈ ವಿಶೇಷವು 10 ಹೆಚ್ಚಿನ ಸಾಮರ್ಥ್ಯದ ಪಾರ್ಸೆಲ್ ವ್ಯಾನ್‌ಗಳ ಸಂಯೋಜನೆಯನ್ನು ಹೊಂದಿದೆ ಮತ್ತು ಪ್ರತಿ ಪಾರ್ಸೆಲ್ ವ್ಯಾನ್‌ನಲ್ಲಿ 23 ಟನ್‌ಗಳಷ್ಟು ಸರಕುಗಳನ್ನು ಸಾಗಿಸಬಲ್ಲದು ಹಾಗು ಒಟ್ಟು 238 ಟನ್‌ಗಳಷ್ಟು ಸರಕನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಭಾರತೀಯ ರೈಲ್ವೆಯ ಪಾರ್ಸೆಲ್ ಶುಲ್ಕದ ಪ್ರಕಾರದಲ್ಲಿ ಸಾಮಾನ್ಯ ರೈಲಿನ (ಪಿ ಮಾಪಕ/ ಪಿ ಸ್ಕೇಲ್) ಶುಲ್ಕವನ್ನು ಸರಕುಗಳಿಗೆ ವಿಧಿಸಲಾಗುತ್ತದೆ.

ದೇಶದಲ್ಲಿ ಚಾಲನೆಗೊಳ್ಳುತ್ತಿರುವ ಇಂತಹ ಬಹು ಸರಕು ಸೇವಾ ರೈಲುಗಳಲ್ಲಿ ಇದು ಮೂರನೆಯದು. ಈ ಕಿಸಾನ್ ವಿಶೇಷ ರೈಲಿನ ಸೇವೆಗಳನ್ನು ರೈತರು ಮತ್ತು ವ್ಯಾಪಾರಿಗಳು ಉತ್ತಮವಾಗಿ ಬಳಸಿಕೊಳ್ಳುವಂತೆ ಕೋರಲಾಗಿದೆ. ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಿಂದ ಸರಕುಗಳನ್ನು ಕಾಯ್ದಿರಿಸಲು ಗ್ರಾಹಕರು ಸಹಾಯಕ್ಕಾಗಿ ವಾಣಿಜ್ಯ ನಿಯಂತ್ರಣ ಕಛೇರಿಯನ್ನು 9731667984 ರಲ್ಲಿ ಹಾಗು ಇತರ ಜಿಲ್ಲೆ ಮತ್ತು ರಾಜ್ಯಗಳಿಂದ ಬುಕಿಂಗ್ ಮಾಡಲು ನಂ. 139 ರಲ್ಲಿ ಸಂಪರ್ಕಿಸಬಹುದು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share