ರೋಟರಿ ಸಂಸ್ಥೆ ವತಿಯಿಂದ ಕೋರೊನ ಯೋಧರಿಗೆ ಗೌರವ

304
Share

??☕ಕೋವಿಡ್ 19 ರ ವಿಶೇಷ ???

ಮೈಸುಾರು 5 ಕೊವಿಡ್ 19 ರ ಆರೋಗ್ಯದ ಯೋಧರು ( warriors ) ಒಟ್ಟು 25 ವೈದ್ಯರು, ನರ್ಸ್ ಗಳ ಸಮೂಹಸವನ್ನು ಗೌರವಿಸುವ ಭಾಗ್ಯ ನಮ್ಮ ರೋಟರಿ ಸದಸ್ಯರದಾಗಿತ್ತು. ನೆನ್ನೆಗೆ 21 ದಿನ ಕೊರೊನ ಸೋಂಕಿತ ರಿಗೆ ವೈದ್ಯಕೀಯ ಶೃಶೂಷೆಯನ್ನು ಸತತವಾಗಿ ನೀಡಿ, ಈ ದಿನ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು. ಕೊರೊನವು ಒಂದು ಅಂಟು ಸೋಂಕು ಆಗಿರುವುದರಿಂದ ಮನೆಯವರಿಂದ ದೂರವಾಗಿ ವಾಸ ಮಾಡುವ ಪರಿಸ್ಥಿತಿ ಉಂಟಾಯಿತು.
ಆ ಸಂದರ್ಭದಲ್ಲಿ ಮೈಸೂರಿನ ಒಟ್ಟು 20 ರೊಟರಿ ಶಾಖೆಗಳು ಒಂದಾಗಿ, ಸುಮಾರು 100 ಕ್ಕೂ ಮಿಗಿಲಾದ ಈ ಆರೋಗ್ಯದ ಯೋಧರಿಗೆ ಬೆಳಗಿನ ಫಲಾಹಾರ, ಮಧ್ಯಾಹ್ನ, ರಾತ್ರೆಯ ಭೋಜನ ಮತ್ತು ವಸತಿಯ ವ್ಯವಸ್ಥೆಯನ್ನು ಅಣಿ ಮಾಡಿಕೊಟ್ಟಿತು.
ಈ ಆರೋಗ್ಯಯೋದರಿಗೆ , ಮೈಸುರು ಸ್ಟೇ ಮತ್ತು ಪ್ರಕಾಶ್ ವಸತಿ ಗೃಹದಲ್ಲಿ ವ್ಯವಸ್ಥೆ ಮಾಡಿಕೊಡಲಾಗಿತ್ತು. ಇವರೆಲ್ಲಾ 4 ಪಾಳೆಯಲ್ಲಿ ದಿನದ 24 ಗಂಟೆ ವೈದ್ಯಕೀಯ ಸೇವೆ ಮಾಡಿರುತ್ತಾರೆ.

ಇವರ ಅವಿರತ ಸೇವೆಯನ್ನು ಗುರುತಿಸುವ ಸಲುವಾಗಿ ಇ೦ದು ಬೆಳಗ್ಗೆ ಗೌರವಾನ್ವಿತ ಅಸಿಸ್ಟೆಂಟ್ ಗೌರ್ನರ್ ರೋ.ಸುಬ್ರಾಯರು , ಆರೋಗ್ಯದ ಯೋಧರಿಗೆ ಗೌರವ ಸಲ್ಲಿಸಿದರು ಮತ್ತು ಅವರ ಸೇವೆಯನ್ನು ಗುರುತಿಸಿ ಮೆಚ್ಚುಗೆ ಸೂಚಿಸಿದರು.

ವರದಿ : ರೊ . ಪ್ರಭಾಕರ, ಕಾರ್ಯದರ್ಶಿ , ರೋಟರಿ ಮೈಸೂರು ಬೃಂದಾವನ … 9449272277


Share