ಲಕ್ಷ್ಮಣ್ ಸವದಿ ಈಗ ಕಾಂಗ್ರೆಸ್ ಅಭ್ಯರ್ಥಿ

Share

ಭಾರತೀಯ ಜನತಾ ಪಕ್ಷದ ಟಿಕೆಟ್ ವಂಚಿತ ಧೀರ್ಘಕಾಲದ ರಾಜಕಾರಣಿ ಲಕ್ಷ್ಮಣ್ ಸವದಿ ಇದೀಗ ಆ ಪಕ್ಷಕ್ಕೆ ಗುಡ್ ಬೈ ಹೇಳಿ ಅಥಣಿಯಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಅವರು ಇಂದು ಕಾಂಗ್ರೆಸ್ ಮುಖಂಡರು ಗಳೊಂದಿಗೆ ಚರ್ಚಿಸಿ , ಪಕ್ಷವು ತಮ್ಮೊಂದಿಗೆ ಗೌರವಯುತವಾಗಿ ನಡೆದುಕೊಂಡು ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮುತುವರಜಿ ನೀಡಿದ್ದೇ ಆದರೆ ತಾವು ಕಾಂಗ್ರೆಸ್ಗೆ ಸೇರುವುದಾಗಿ ತಿಳಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಮುಖಂಡರುಗಳಾದ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರುಗಳು ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಯಾವುದೇ ಶರತ್ತುಗಳಿಲ್ಲದೆ ಲಕ್ಷ್ಮಣ್ ಸವದಿ ತಮ್ಮ ಪಕ್ಷದ ಅಭ್ಯರ್ಥಿ ಆಗುತ್ತಿದ್ದಾರೆಂದು ತಿಳಿಸಿ ಅವರು ಇಂದು ಸಂಜೆ ಅಧಿಕೃತವಾಗಿ ಪಕ್ಷ ಸೇರಲಿದ್ದಾರೆಂದು ತಿಳಿಸಿದ್ದಾರೆ. ಸದ್ಯದಲ್ಲೇ ಭಾರತೀಯ ಜನತಾ ಪಕ್ಷದ ಮತ್ತಷ್ಟು ಕಾರ್ಯಕರ್ತರುಗಳು ಮುಖಂಡರುಗಳು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಹ ಅವರುಗಳು ತಿಳಿಸಿದ್ದಾರೆ.


Share