ಲಕ್ಷ್ಮಿ ಎಲ್ಲಿ ಇರುತ್ತಾಳೆ ?

721
Share

ಲಕ್ಷ್ಮೀ ದೇವತೆ ಎಲ್ಲಿ ಇರುತ್ತಾಳೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಇಂದು ಸರಳವಾಗಿ ತಿಳಿಸಿದ್ದಾರೆ.ಒಳ್ಳೆಯ ಮಾತು ಎಲ್ಲಿ ಇರುತ್ತದೆ ಅಲ್ಲಿ ಇರುತ್ತಾಳೆ, ಐಶ್ವರ್ಯ ಎಂದರೆ ಹಣ ಆಸ್ತಿ ಮಾತ್ರವಲ್ಲ ಒಳ್ಳೆಯತನ ,ಒಳ್ಳೆಯ ಬುದ್ಧಿ ,ದಯೆ ತೋರಿಸುವವನ ಬಳಿ ಲಕ್ಷ್ಮಿ ಇರುತ್ತಾಳೆ .
ಲಕ್ಷ್ಮೀ ಕಟಾಕ್ಷ ಬೇಕಾದರೆ ಅತಿಯಾದ ನಿದ್ದೆ, ಅತಿಯಾದ ಭಯ, ಅತಿಯಾದ ಕೋಪ, ಬಿಡಬೇಕು ಎಂದರು.
ಒಳ್ಳೆಯ ಒಳ್ಳೆತನದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಇಂದಿನ ಇಂದಿನ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಮುಖ್ಯವಾಗಿ ತಿಳಿಸಿದರು. ಸೋಮಾರಿತನ ಇರುವ ಕಡೆ ಲಕ್ಷ್ಮಿ ಇರದೆ ದರಿದ್ರ ಲಕ್ಷ್ಮಿ ಇರುತ್ತಾಳೆ ಹೀಗಾಗಿ ಪ್ರತಿಯೊಬ್ಬ ಮಾನವನು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಿದರೆ ಲಕ್ಷ್ಮೀ ಕಟಾಕ್ಷ ಒಲಿಯುವುದು ಖಚಿತ ಎಂದು ಸ್ವಾಮೀಜಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


Share