ಲಾಕ್ ಡೌನ್ ನಿಂದ ಏನು ಪ್ರಯೋಜನವಾಗಲಿಲ್ಲ:ಸಿಎಂ ವಿರುಧ್ಧ ಸಿದ್ದು ಗುಡುಗು

459
Share

ಯಡಿಯೂರಪ್ಪ ಏನು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಪ್ರಶ್ನೆ ಮಾಡಿದ್ದಾರೆ. ಲಾಕ್ಡೌನ್ ನಿಂದ ಏನೂ ಪ್ರಯೋಜನವಾಗಿಲ್ಲ ಎಂದು ಸಿದ್ದರಾಮಯ್ಯನವರು ಇಂದು ಮಾಧ್ಯಮದವರೊಂದಿಗೆ ಗುಡುಗಿದರು. ಸರ್ಕಾರ ಏನು ಮಾಡುತ್ತಿದೆ? ಬಡವರಿಗೆ ಊಟ ನೀಡಿಲ್ಲ ಸಮಯದಲ್ಲಿ ಕೆಲಸ ನೀಡಿಲ್ಲ ಎಂದು ಕಿಡಿಕಾರಿದ ಸಿದ್ದರಾಮಯ್ಯನವರು ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ ಬರುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು. ಕೊರೋನಾಗೆ ಸಂಬಂಧಿಸಿದಂತೆ ಸಾರ್ವಜನಿಕರ ಮುಂದೆ ಲೆಕ್ಕ ಕೊಡದೇ ಇದ್ದರೆ ಬಿಡುವವರು ಯಾರು ಹಾಗೂ ಲೆಕ್ಕ ಕೊಡದೆ ಇದ್ದರೆ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಾಬೀತಾಗುತ್ತದೆ ಎಂದರು. ಸಿದ್ದರಾಮಯ್ಯನವರು ಬೆಂಗಳೂರಿಗೆ ಹೋಗುತ್ತಿದ್ದು ತಾವು ಗೃಹ ದಿಗ್ಬಂಧನ ದಲ್ಲಿ ಇರಲಿಲ್ಲ ರೆಸ್ಟಿನಲ್ಲಿ ಇದ್ದೆ ಎಂದು ಮಾಧ್ಯಮದವರ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.


Share