ಲೀಲಾವತಿಯವರ ನಿಧನ-ಮೇಣದಬತ್ತಿ ಹಿಡಿದು ಸಂತಾಪ

16
Share

 

ಹಿರಿಯ ನಟಿ ಲೀಲಾವತಿ ರವರಿಗೆ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಶನ್ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮೇಣದಬತ್ತಿ ಹಿಡಿದು ಸಂತಾಪ ಸೂಚಿಸಿದರು

ಇದೆ ಸಂದರ್ಭದಲ್ಲಿ ಮಾಜಿನಗರ ಪಾಲಿಕೆ ಸದಸ್ಯ ಪಾರ್ಥಸಾರಥಿ ಮಾತನಾಡಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ಬಹುಭಾಷಾ ನಟಿ ಲೀಲಾವತಿ ನಿಧನರಾಗಿದ್ದು ಅತ್ಯಂತ ದುಃಖ‌ ತಂದಿದೆ.
ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು, ಅವರ ಆತ್ಮಕ್ಕೆ ಚಿರಶಾಂತಿ‌ಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು


Share