ವರ್ಕ್ ಫ್ರಮ್ ಹೋಮ್ ಪ್ಯಾನಿಕ್ ಆಗುವ ಮುನ್ನ ಸರ್ಕಾರ ಟಾನಿಕ್ ಕೊಡಲಿ.

ವರ್ಕ್ ಫ್ರಮ್ ಹೋಮ್
ಪ್ಯಾನಿಕ್ ಆಗುವ ಮುನ್ನ ಸರ್ಕಾರ ಟಾನಿಕ್ ಕೊಡಲಿ

ಐಟಿ ಬಿಪಿಓ
ಹೆಣ್ಣು ಮಕ್ಕಳಿಗೆ ಅನೂಕೂಲವಾಗಬೇಕೆ ಹೊರೆತು ಜೀವನಕ್ಕೆ ಆರೋಗ್ಯಕ್ಕೆ ಮಾರಕವಾಗಬಾರದು

ಇತ್ತಿಚೆಗೆ ಕೊರೋನಾ ಸೊಂಕಿನಿಂದ ದೇಶವೇ ಲಾಕ್ ಡೌನ್ ಆಗಿದ್ದರಿಂದ ಕೆಲವು ಸಂಸ್ಥೆಗಳು ಅದರಲ್ಲೂ ಐಟಿಬಿಟಿ ಸಾಫ್ಟ್‌ವೇರ್,ಕಾಲ್ ಸೆಂಟರ್ ಟೆಲಿಕಾಲಿಂಗ್ ಡೆಟಾ ಅಪ್ಲೋಡ್ ಬಿಪಿಒ ಕ್ಷೇತ್ರದ ಉದ್ಯಮಗಳು ವರ್ಕ್ ಫ್ರಮ್ ಹೋಮ್ ನೀತಿ ಪಾಲನೆಗೆ ಮುಂದಾಗಿರುವುದು ಸಂತೋಷದ ವಿಚಾರ, ಅದರ ಜೊತೆ ದುಃಖದ ಸಂಗತಿ ಎಂದರೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಯುವತಿಯರ ಹೆಣ್ಣುಮಕ್ಕಳ ದುಡಿಮೆ ಸಮಯವನ್ನ ಸಮಯನಿಗಧಿಗಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ, ಇದರಿಂದ ಪ್ರತಿಯೊಬ್ಬ ಹೆಣ್ಣುಮಕ್ಕಳ ಪರಿಸ್ಥಿತಿ ಆರೋಗ್ಯ, ಕುಟುಂಬ ನಿರ್ವಹಣೆ ಸಮಸ್ಯೆಗಳ ಬಗ್ಗೆ ಬಿಪಿಓ ಮುಖ್ಯಸ್ಥರಿಗೆ ವಿಚಾರ ಅರಿತಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ, ಪ್ರತಿದಿನ ಸಂಜೆ 5ರ ನಂತರ ಲಾಗ್ ಇನ್ ಆದರೆ ಮುಂಜಾನೆ 5ರವರೆಗೆ ಕಾರ್ಯನಿರ್ವಹಿಸಬೇಕಾದ ಒತ್ತಡಗಳಿರುತ್ತದೆ, ಮಾನಸಿಕ ಒತ್ತಡ ಹವಮಾನ ಏರುಪೇರಿಂದ ಆರೋಗ್ಯ ಪರಿಸ್ಥಿತಿ ಹದಗೆಟ್ಟರೆ ಮೆಡಿಕಲ್ ಶಾಪಿನಲ್ಲಿ ಕ್ರೋಸಿನ್ ವಿಕ್ಸ್ ಬೇಕಾದರೂ ವೈದ್ಯರ ಪ್ರಿಸ್ಕ್ರಿಪ್ಷನ್ ಕಡ್ಡಾಯ ಅನ್ನುತ್ತಾರೆ ಹಾಗಾಗಿ ಇತ್ತ ಜಿಲ್ಲಾಡಳಿತ ಪೋಲಿಸ್ ಇಲಾಖೆ ಮೈಸೂರು ನಗರದಲ್ಲಿ ಕಾರ್ಯ ನಿರ್ವಹಿಸುವ ಬಿಪಿಓ ಕಾಲ್ ಸೆಂಟರ್ ಗಳ ಮೇಲೆ ಠಾಣಾ ವ್ಯಾಪ್ತಿ ವಲಯ ಜೋನ್ ಮಟ್ಟದಲ್ಲಿ ಈಗಲೇ ಮುಂಜಾಗೃತ ಕ್ರಮ ವಹಿಸಿ

ಬಿಪಿಓಗಳಲ್ಲಿ ಎಷ್ಟು ಮಂದಿ ಹೆಣ್ಣು ಮಕ್ಕಳು ರಾತ್ರಿಪಾಳಿಯಲ್ಲಿ ದುಡಿಯುತ್ತಿದ್ದಾರೆ, ದಿನಕ್ಕೆ ಕೆಲಸ ಪ್ರಾರಂಭ ಮತ್ತು ಮುಕ್ತಾಯ ಎಷ್ಟು ಘಂಟೆ ನಿಗಧಿಪಡಿಸಿರಲಾಗುತ್ತದೆ, ಓಟಿ ಹೆಚ್ಚಿನ ಸಮಯ ದುಡಿಮೆ ಎಂದು ನೆಪವೊಡ್ಡಿ ಬಳಸಿದರೆ ಮಾನವ ಹಕ್ಕುಗಳ ಪ್ರಕಾರ ಕ್ರಮಕೈಗೊಳ್ಳಬೇಕು, ನಿಗಧಿಪಡಿಸಿರದಕ್ಕಿಂತ ಹೆಚ್ಚಾಗಿ ರಾತ್ರಿ ಹೊತ್ತು ಮಹಿಳೆಯರನ್ನ ಯುವತಿಯರನ್ನ ಕೆಲಸಕ್ಕೆ ಐಟಿ ಕ್ಷೇತ್ರದಲ್ಲಿ ಬಳಸಿಕೊಂಡರೆ ಅವರ ಆರೋಗ್ಯ ಹದಗೆಡುತ್ತದೆ ಮತ್ತು ಕುಟುಂಬದ ನಿರ್ವಹಣೆ ಸಮಸ್ಯೆಗಳು ಎದುರಾಗತ್ತದೆ ಹಾಗಾಗಿ ಮಹಿಳಾ ಆಯೋಗ, ಜಿಲ್ಲಾಡಳಿತ ಆರಕ್ಷಕ ಇಲಾಖೆ ಮೈಸೂರಿನಲ್ಲಿ ಕಾರ್ಯನಿರ್ವಹಿಸುವ ಐಟಿಬಿಟಿ ಬಿಪಿಓ ಕಾಲ್ ಸೆಂಟರ್ ಸಂಸ್ಥೆಗೆ ಸೂಕ್ತ ನಿಭಂದನೆ ನಿಯಮ ಜರುಗಿಸಿ, ಮಹಿಳಾ ಯುವತಿಯರಿಗೆ ರಾತ್ರಿ ಪಾಳಿ ಸಮಯ ಕಡಿತಗೊಳಿಸಬೇಕು ಆರೋಗ್ಯ ಸುರಕ್ಷಣೆ ಸುಧಾರಣೆಗೆ ಒತ್ತು ನೀಡಬೇಕಾಗಿ ವಿನಂತಿ

ಇಂತಿ
ವಿಕ್ರಂ ಅಯ್ಯಂಗಾರ್
ಅಧ್ಯಕ್ಷರು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮೈಸೂರು