ವರ್ತಕರ ಮನವಿ, ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿ

396
Share

ಮೈಸೂರು
ಇಂದು ಬೆಳಿಗ್ಗೆ ನಗರ ಪಾಲಿಕೆ ಆಯುಕ್ತರು ನಾಲ್ಕು ದಿನ ಮಾರ್ಕೆಟ್ ಬಂದು ಮಾಡಲು ಆದೇಶ ಹೊದಡಿಸಿದ್ದರು. ಈ ಕಾರಣವಾಗಿ ನಗರದ ತರಕಾರಿ ಹಣ್ಣು ಮತ್ತು ಮಾರಾಟಕ್ಕೆ ರಿಯಾಯಿತಿ ನೀಡಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಇಂದು ಬೆಳಗ್ಗೆ ವರ್ತಕರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತರಕಾರಿ ಹಣ್ಣು ಮಾರಾಟಕ್ಕೆ ಅವಕಾಶ ಕೋರಿರುವ ಹಿನ್ನೆಲೆಯಲ್ಲಿ ಎರಡು ದಿನ ಹಣ್ಣು-ತರಕಾರಿ ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ಈಗಾಗಲೇ ಅವರು ತಮ್ಮ ಬಳಿ ಇರುವ ಹಣ್ಣು ತರಕಾರಿ ಮಾತ್ರ ಮಾರಾಟ ಮಾಡಲು ಸೂಚನೆ ನೀಡಿದ್ದಾರೆ, ಆದರೆ ಶನಿವಾರ ಮತ್ತು ಭಾನುವಾರ ಅಂಗಡಿಗಳನ್ನು ರಾಸಾಯನಿಕ ಸಿಂಪಡಿಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ವರ್ತಕರಲ್ಲಿ ಮನವಿ ಮಾಡಿದ್ದಾರೆ .


Share