ವಲಸೆ ಬಂದ ವ್ಯಕ್ತಿಗಳಿಗೆ ಸಹಾಯಧನ

307
Share

ಹೊರರಾಜ್ಯದ ನಿರಾಶ್ರಿತರಿಗೆ ನೆರವು -ಎಂ ಕೆ ಸೋಮಶೇಖರ್ ತಮಿಳುನಾಡು ರಾಜ್ಯದಿಂದ ಹಾಸನ ಜಿಲ್ಲೆಯ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಮಾಡಲು ತೆರಳಿದ್ದ ಕಾರ್ಮಿಕರು ಒಂದು ತಿಂಗಳಿನಿಂದ ಲಾಕ್ ಡೌನ್ ನಲ್ಲಿ ಸಿಲುಕಿ ತಾವೂ ಸಂಪಾದಿಸಿದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದು ಕೊನೆಗೆ ಬರಿಗೈಯಲ್ಲಿ ತಮ್ಮ ಕುಟುಂಬಗಳೊಡನೆ ಮೂಲ ಸ್ಥಳಗಳಿಗೆ ತೆರಳುವ ನಿರ್ಧಾರ ಮಾಡಿ 120 ಕಿ ಮೀ ಕಾಲ್ನಡಿಗೆಯಲ್ಲಿಯೇ ಮೈಸೂರಿನ ಜಿಲ್ಲಾಧಿಕಾರಿಗಳ ಕಛೇರಿ ಬಳಿಯ ಉದ್ಯಾನವನಕ್ಕೆ ಬಂದಿರುವ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಊಟ,ನೀರು,ಸ್ಯಾನಿಟೈಜರ್ ,ಮಾಸ್ಕ್ ನೀಡಿ 10,000ರೂ ನೀಡಿದರು.ಅದರೊಡನೆ ಬಿಹಾರದ ಮೂಲದವರಿಗೂ 3000 ರೂ ಹಣ ನೀಡಿದರು.ಅಪರ ಜಿಲ್ಲಾಧಿಕಾರಿಗಳಾದ ಪೂರ್ಣಿಮಾ ರವರಿಗೆ ಕರೆ ಮಾಡಿ ನಿರಾಶ್ರಿತರ ಸಮಸ್ಯೆಯನ್ನು ಪರಿಹರಿಸುವಂತೆ ತಿಳಿಸಿದರು.ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ವೈದ್ಯಕೀಯ ತಪಾಸಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲು ತಿಳಿಸಿದರು.


Share