ವಾಚಕರ ಪತ್ರ : ಇದಪ್ಪೊ ರಾಜಕೀಯ ಅಂದ್ರೆ

Share

ಪ್ರಕಟಣೆಯ ಕೃಪೆಗಾಗಿ :

ರಾಜಕೀಯದಲ್ಲಿ ಸ್ನೇಹವೂ ಶಾಶ್ವತವಲ್ಲ. ದ್ವೇಶವೂ ಶಾಶ್ವತವಲ್ಲ ಎನ್ನುವ ಮಾತು ಎಲ್ಲರಿಗೂ ಗೊತ್ತು. ಆದರೆ ಈ ಚುನಾವಣೆಯಲ್ಲಿ ಮಾತ್ರ ಸಮಾಜದ ಎಲ್ಲಾ ಜನರಿಗೂ ಇದು ಅಕ್ಷರಶಃ ಸತ್ಯ ಎಂಬುದು ಗೊತ್ತಾಯಿತು. ಹಾಲು ಹಾಕುವವರು, ಕಸ ತೆಗೆಯುವವರು, ಪೇಪರ್ ಹಾಕುವವರು, ಮಾರುಕಟ್ಟೆ, ದೇವಸ್ಥಾನ, ತರಕಾರಿ ಮಾರುವವರು, ಕಛೇರಿಗಳು ಎಲ್ಲಾ ಕಡೆ ರಾಜಕೀಯದ ಬಗ್ಗೆ ಕೇಳಿ ಬರುತ್ತಿರುವುದು ಇಬ್ಬರ ಹೆಸರು. ಶೆಟ್ಟರ್, ಈಶ್ವರಪ್ಪ. ಅದು ಯಾಕೆ ಅಂತೀರ ? ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪನವರ ರಾಜಕೀಯ ಬೆಳವಣಿಗೆ ಒಂದು ಉತ್ತಮ ಉದಾಹರಣೆ. ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿಗಳಾದರೂ ಶಾಂತ ಸ್ವರೂಪದವರು ಎಂದೇ ಇಡೀ ರಾಜ್ಯದ ಜನತೆಗೆ ಪರಿಚಿತರು. ಇನ್ನು ಈಶ್ವರಪ್ಪನವರೆಂದರೆ ಮಾಜಿ ಉಪಮುಖ್ಯಮಂತ್ರಿಗಳಾದರೂ ಅವರು ಅವರಾಡುವ ಮಾತು ಅದರಲ್ಲೂ ಹಗುರವಾಗಿ ಮಾತುಗಳಿಂದಲೇ ರಾಜ್ಯದ ಜನತೆಗೆ ಪರಿಚಿತರು. ಇಬ್ಬರು ನಾಯಕರಿಗೂ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ.
ಆದರೆ ಇಬ್ಬರು ನಾಯಕರು ಯಾರ ಊಹೆಗೂ ನಿಲುಕದಂತ ತೀರ್ಮಾನ ಕೈಗೊಂಡರು. ಶಾಂತ ಸ್ವಭಾವದ ಶೆಟ್ಟರ್ ತಿರುಗಿ ಬಿದ್ದು ಸಂಪೂರ್ಣ ವಿರುದ್ಧ ಸಿದ್ದಾಂತ ಹೊಂದಿರುವ ಕಾಂಗ್ರೆಸ್ ಪಕ್ಷ ಸೇರಿಬಿಟ್ಟರು. ಯಾವಾಗಲೂ ಯಾವುದೇ ಮಿತಿಯಿಲ್ಲದೆ ನಾಲಿಗೆ ಹರಿ ಬಿಡುತ್ತಿದ್ದ ಈಶ್ವರಪ್ಪನವರು ಪಕ್ಷದಲ್ಲೆ ಉಳಿದುಕೊಂಡು ಬಿಟ್ಟರು. ಇದಪ್ಪೋ ರಾಜಕೀಯ ಅಂದ್ರೆ !!

ಧನ್ಯವಾದಗಳು
ನಯನ
ಶಿವಮೊಗ್ಗ


Share