ವಾಚಕರ ಪತ್ರ : ಕನ್ನಡಿಯೊಳಗಿನ ಗಂಟಿದ್ದಂತೆ ಕಾಂಗ್ರೆಸ್‌ ಘೋಷಣೆ

Share

ಮಾನ್ಯರೆ,

ಪ್ರಕಟಣೆಯ ಕೃಪೆಗಾಗಿ :

ಕರ್ನಾಟಕದಲ್ಲಿ ಚುನಾವಣೆಯ ದಿನಗಳು ಹತ್ತಿರ ಬರುತ್ತಿದೆ. ಎಲ್ಲಾ ಪಕ್ಷಗಳ ಚುನಾವಣಾ ಪ್ರಚಾರ ತರಾತುರಿಯಲ್ಲಿದೆ. ಈ ಸಾಲಿನಲ್ಲಿ ಕಾಂಗ್ರೆಸ್ ಪಕ್ಷವು ಘೋಷಣೆ ಮೇಲೆ ಘೋಷಣೆಗಳನ್ನು ನೀಡುತ್ತಲೇ ಇದೆ. ಈ ರೀತಿಯ ಪ್ರಚಾರವನ್ನು, ಭರವಸೆಗಳನ್ನು 75 ವರ್ಷಗಳಿಂದಲೂ ಮಾಡಿಕೊಂಡು ಬರುತ್ತಲೇ ಇದೆ. ಜನರೂ ನಂಬುತ್ತಲೇ ಇದ್ದರು. ಆದರೆ ಮತದಾರರು ಮೂರ್ಖರಲ್ಲ ಎನ್ನುವುದು ಪಕ್ಷಕ್ಕೆ ಈಗ ಚೆನ್ನಾಗಿ ಅರಿವಾಗಿದೆ. ಮತದಾರರನ್ನು ನಂಬಿಸುವುದು ಅಷ್ಟು ಸುಲಭವಲ್ಲ ಎಂದುದೂ ತಿಳಿದಿದ್ದು ಮತ್ತೆ ಯಾವ ಆಧಾರದ ಮೇಲೆ ಕಾಂಗ್ರೆಸ್ ಈ ರೀತಿಯ ಹೊಸ ಘೋಷಣೆಗಳನ್ನು ಮಾಡುತ್ತಿದೆ ಎನ್ನುತ್ತೀರಾ ? ಕಾರಣ ಇಷ್ಟೇ! ಕಾಂಗ್ರೆಸಿಗೆ ಖಚಿತವಾಗಿ ಗೊತ್ತಿದೆ ತಾನು ಅಧಿಕಾರಕ್ಕೆ ಬರುವುದಿಲ್ಲ ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲವಾದರಿಂದ . ಭರವಸೆಗಳನ್ನು ಕಾರ್ಯರೂಪಕ್ಕೆ ತರುವ ಮಾತೇ ಇಲ್ಲ ಎನ್ನುವುದು ಬಹಳ ಸುಲಭವಾಗಿ ಗೊತ್ತಾಗುತ್ತದೆ. ಏಕೆಂದರೆ ಯಾವುದೇ ಘೋಷಣೆಗೂ ಫಲಾಕಾಂಕ್ಷಿಗಳು ಎಷ್ಟು ಜನ, ಅದರ ಕರ್ಚೆಷ್ಟು, ಅಷ್ಟು ಕರ್ಚನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬರುವುದೇ ಇಲ್ಲದಿರುವುದರಿಂದ ಯಾವುದೇ ಅಂಕಿ ಅಂಶಗಳಿಗೂ ತಲೆಯೇ ಕೆಡಿಸಿಕೊಂಡಿಲ್ಲ. ಕಾಂಗ್ರೆಸ್ ಭರವಸೆಗಳು ಕನ್ನಡಿಯಿಳಗಿನ ಗಂಟಿದ್ದಂತೆ. ಇದನ್ನು ಅರಿಯದ ಕೆಲವೇ ಕೆಲವರು ನಂಬಿ ಒಂದೋ ಎರೆಡೋ ಸ್ಥಾನಗಳಲ್ಲಿ ಗೆಲ್ಲಿಸಬಹುದು. ಎಷ್ಟು ಸಿಕ್ಕಿದರೆ ಅಷ್ಟೇ ಲಾಭ ಎಂದುಕೊಂಡಿದೆ ಕಾಂಗ್ರೆಸ್ . ಪೂರ್ತಿ ಬಹುಮತವಂತು ಕಾಂಗ್ರೆಸ್ಸಿಗೆ ಸಿಗುವುದಿಲ್ಲ ಎನ್ನುವುದು ಖಚಿತ. ಹಾಗಾಗಿ ಸಿಕ್ಕಷ್ಟೇ ಲಾಭ ಎನ್ನು ಎನ್ನುವ ಮನಃಸ್ಥಿತಿಗೆ ಬಂದಿದೆ ಕಾಂಗ್ರೆಸ್ ಪಕ್ಷ. ಜನಸಾಮಾನ್ಯರು ಇದನ್ನು ಪರಿಗಣಿಸಿ ಯಾವುದು ಸಾಧ್ಯ ಯಾವುದು ಅಸಾಧ್ಯ ಎನ್ನುವುದನ್ನು ಯೋಚಿಸಿ ಬುದ್ದಿವಂತಿಕೆ ಬೇಡ, ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಮತ ಚಲಾಯಿಸಿದರೆ ನಮಗೂ ಹಿತ ದೇಶಕ್ಕೂ ಹಿತ.

ವಸಂತ , ಬೆಂಗಳೂರು

 


Share