ವಾಚಕರ ಪತ್ರ : ದೇಶದಾದ್ಯಂತ ಯಾವಾಗಲೂ ಚುನಾವಣೆ ಬೇಸಿಗೆಯಲ್ಲೆ ಮಾಡಿ

Share

ಪ್ರಕಟಣೆಯ ಕೃಪೆಗಾಗಿ
ಮಾನ್ಯರೆ,
ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆಗೆ ಇನ್ನು ಕೇವಲ 20 ದಿನ ಬಾಕಿ ಇದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಭರದಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಾರಿ ಚುನಾವಣೆಯು ಬೇಸಿಗೆಯಲ್ಲಿ ಬಂದಿರುವುದು ಸಂತೋಷದ ವಿಷಯ . ಏಕೆ ಎಂದು ಕೇಳುತ್ತೀರ ? ಮಕ್ಕಳಿಗೆ ರಜೆ ಇರುತ್ತದೆ ಎನ್ನುವುದಕ್ಕೆ ಮಾತ್ರ ಅಲ್ಲ.
ಮತ್ತೇಕೆ ಎಂದು ಕೇಳುತ್ತೀರ ? ಸದ್ಯಕ್ಕೆ ಕರ್ನಾಟಕದಲ್ಲಿ ಬಿಸಿಲು ಚುರುಕು ಮುಟ್ಟಿಸುತ್ತಿದೆ. ಎಷ್ಟೇ ಬಿಸಿಲಿದ್ದರೂ ಅಭ್ಯರ್ಥಿಗಳ ರೋಡ್ ಶೋ, ಪಾದಯಾತ್ರೆ, ಸಾರ್ವಜನಿಕ ಸಭೆಗಳು ನಡೆಯುತ್ತಲೇ ಇವೆ. ಯಾವಾಗಲೂ ಐಶೋರಾಮಿ ಜೀವನ ನಡೆಸುವ ಅಭ್ಯರ್ಥಿಗಳು , ಎಸಿ ವಿದೇಶಿ ಕಾರುಗಳಲ್ಲೇ ಓಡಾಡುವ ಅಭ್ಯರ್ಥಿಗಳು ಬೆವರು ಸುರಿಸಿ ಪ್ರಚಾರ ಮಾಡುತ್ತಿದ್ದಾರೆ. ಇವರ ಈ ಸ್ಥಿತಿ ನೋಡಿದರೆ ಒಮ್ಮೆಯೂ ಕನಿಕರ ಬರಲಿಲ್ಲ. ಬಹುಶಃ ಚುನಾವಣಾ ಸಮಯದಲ್ಲಿ ಒಂದು ತಿಂಗಳಷ್ಟೆ ಇವರುಗಳು ಇಷ್ಟು ಕಷ್ಟ ಪಡುವುದು. ನಂತರ ಐದು ವರ್ಷ ಎಸಿ ರೂಮು, ಐಶೋರಾಮಿ ಕಾರು, ವಿದೇಶ ಪ್ರವಾಸಗಳು ಇತ್ಯಾದಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಜನರ ತಾಪತ್ರಯದ ಬಗ್ಗೆ ತಿಳಿದೇ ಇರಲ್ಲ ಮತ್ತೆ ನಮ್ಮ ನಿಮ್ಮೆಲ್ಲರ ಕಷ್ಟಗಳನ್ನು ಸರಿಪಡಿಸುವುದಂತು ದೂರದ ಮಾತು. ಹಾಗಾಗಿ ದೇಶದಾದ್ಯಂತ ಎಲ್ಲಕಡೆಯೂ ಎಲ್ಲರೂ ಚುನಾವಣಾ ಸಮಯದಲ್ಲಾದರೂ ಎಲ್ಲರಂತೆ ಕಷ್ಟಪಡಲೀ ಅನ್ನಿಸುತ್ತದೆ ಅಲ್ಲವೆ.
ಧನ್ಯವಾದಗಳು
ಅಚ್ಯುತ
ಕೋಲಾರ


Share