ವಾಚಕರ ಪತ್ರ : ಸುಮಲತ ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸಲು ಹೇಗೆ ಸಾಧ್ಯ ?

136
Share

ಮಾನ್ಯರೆ,

ಸುಮಲತ ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸಲು ಹೇಗೆ ಸಾಧ್ಯ ?
ಕಳೆದ ಲೋಕಸಭಾ ಚುಬಾವಣೆಯಲ್ಲಿ ನಟ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿ ಸ್ವಾಭಿಮಾನದ ಮತವನ್ನು ಬೇಡಿ ಗೆದ್ದಿದ್ದರು. ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇತ್ತೀಚೆಗೆ ತಾವು ಹೆಚ್ಚಾಗಿ ಸೇವೆ ಮಾಡಬೇಕೆನ್ನುವ ಉದ್ದೇಶದಿಂದ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಅಂದು ತಾವು ರಾಜಕೀಯದಲ್ಲಿರುವ ತನಕ ತಮ್ಮ ಮಗ ಸಕಂರಿಯವಾಗಿ ರಾಜಕೀಯಕ್ಕೆ ಬರುವುದಿಲ್ಲ ಎಂದೂ ಹೇಳಿ ಎಲ್ಲರ ಮೆಚ್ವುಗೆ ಗಳಿಸಿದ್ದರು.
ಅವರು ರಾಜಕೀಯ ಸೇರಿದ ಉದ್ದೇಶ ಮಂಡ್ಯ ಜಿಲ್ಲೆಯನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವುದಾಗಿತ್ತು. ಆದರೆ ಈಗ ರಾಜಕೀಯ ಒತ್ತಡಕ್ಕೆ ಮಣಿದು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದಲ್ಲಿ ಅವರಿಗೂ ಇತರ ರಾಜಕಾರಿಣಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲದಂತಾಗುತ್ತದೆ. ತಾವು ರಾಜಕೀಯ ಸೇರಿದ್ದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಯಾವುದೇ ತೀರ್ಮನಕ್ಕೆ ಬರುವ ಮೊದಲು ನಮ್ಮ ಮಂಡ್ಯ ಜನರ ನಂಬಿಕೆಗೆ ಧಕ್ಕೆಯಾಗುವಂತಹ ನಿರ್ಧಾರ ತೆಗೆದುಕೊಳ್ಳ ಬೇಡಿ ಎಂದು ಕೋರುತ್ತೇವೆ.
ನಾಗರತ್ನ
ನಾಗಮಂಗಲ


Share