ವಾರ್ಡುಗಳಿಗೆ ಬೈಕಿನಲ್ಲಿ ತೆರಳಿದ ಶಾಸಕ ರಾಮದಾಸ್

Share

 

 

 

ಆರು ತಿಂಗಳಲ್ಲಿ ಕಸ ಮುಕ್ತ ಕ್ಷೇತ್ರ :

ಮೈಸೂರು- ಮುಂದಿನ ಆರು ತಿಂಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಕಸದಿಂದ ಮುಕ್ತವಾಗಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
೫ನೇ ಯೋಗಕ್ಷೇಮ ಯಾತ್ರೆ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೪೯ ವಾರ್ಡಿನ ನೂರೊಂದು ಗಣಪತಿ ವೃತ್ತದಲ್ಲಿ ಆಯೋಜಿಸಲಾಗಿದ್ದ ‌ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಬಹುದೊಡ್ಡ ಸಮಸ್ಯೆ ಆಗಿದ್ದ ಕಸಕ್ಕೆ ಸದ್ಯದಲ್ಲೇ ಮುಕ್ತಿ ದೊರೆಯುತ್ತದೆ. ಈ ತಿಂಗಳಲ್ಲಿ ಕೆಸರೆ ಪ್ಲಾಂಟ್ ತೆರೆಯುತ್ತಿದ್ದು, ೨೦೦ ಟನ್ ಕಸ ಅಲ್ಲಿಗೆ ಶಿಫ್ಟ್ ಆಗಲಿದೆ.‌ ಇನ್ನು ೩ ತಿಂಗಳಲ್ಲಿ ರಾಯನಕೆರೆ ಪ್ಲಾಂಟ್ ತೆರೆಯಲಿದ್ದು, ಆನಂತರ ಅಲ್ಲಿಗೆ ೨೦೦ ಟನ್ ಕಸ ರವಾನೆ ಆಗಲಿದೆ.‌ ಆಗ ಕಸದ ಹೊರೆ ತಗ್ಗಲಿದೆ ಎಂದರು.
ಕಸ ವಿಲೇವಾರಿಗೆಂದೇ ಪ್ರಧಾನಮಂತ್ರಿಗಳು ಪ್ರತಿ‌ ಜಿಲ್ಲೆಗೆ ಹಣ ನೀಡಿದ್ದು, ೫೬ ಕೋಟಿ ರೂ.ಗಳಿಗೆ ಇಲ್ಲಿನ ಟೆಂಡರ್ ಆಗಿದೆ. ಮುಂದಿನ ಆರು ತಿಂಗಳಲ್ಲಿ ಇಲ್ಲಿನ ಕಸ ಸಿಮೆಂಟ್ ಕೈಗಾರಿಕಗೆ ಹೋಗಲಿದೆ. ಮಾತ್ರವಲ್ಲ, ಕ್ಷೇತ್ರ ವ್ಯಾಪ್ತಿಯಲ್ಲಿ ೧೦೦ ಕಡೆ ಸ್ವಚ್ಚತಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರ ಕಸಮುಕ್ತ ಕ್ಷೇತ್ರ ಆಗಲಿದೆ ಎಂದು ತಿಳಿಸಿದರು.
ಕ್ಷೇತ್ರದ ಕೆಲ ಕಡೆಗಳಲ್ಲಿ ಇತ್ತೀಚೆಗೆ ಕುಡಿಯುವ ‌ನೀರಿನ‌ ಸಮಸ್ಯೆ ಕಾಣಿಸಿಕೊಂಡಿತ್ತು.‌ ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಮಾತ್ರವಲ್ಲ, ೩೦ ಎಂಎಲ್ಡಿ ನೀರನ್ನು ಹೆಚ್ಚುವರಿಯಾಗಿ ಕ್ಷೇತ್ರಕ್ಕೆ ತರಲಾಗುತ್ತಿದೆ. ಇದರಿಂದಾಗಿ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದರು.


Share